ಭೀಮಾ ನದಿಯ ತೀರದಲ್ಲಿ ಸ್ಥಿರವಾಗಿ ನಿಂತಿರುವ ಒಂದು ಪವಿತ್ರ ಧಾರ್ಮಿಕ ಕ್ಷೇತ್ರ ಇದು. ಅಲ್ಲಿನ ದೇವರನ್ನ ವಿಷ್ಣು ಅಥವಾ ಕೃಷ್ಣನ ಅವತಾರ ಎಂದು ಹೇಳಲಾಗುತ್ತದೆ. ಪ್ರತೀ ವರ್ಷವೂ ಇಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮಾಡುವ ಮೂಲಕ ಭೇಟಿ ನೀಡುತ್ತಾರೆ. ಪಾಂಡುರಂಗ ವಿಠಲ ಸ್ಥಿರವಾಗಿ ನೆಲೆ ನಿಂತಿರುವ ಧಾರ್ಮಿಕ ಕ್ಷೇತ್ರವೆ ಪಂಡರಾಪುರ. ಈ ಲೇಖನದ ಮೂಲಕ ಪಂಢರಾಪೂರದ ಹತ್ತು ರೋಚಕ ವಿಷಯಗಳ ಕುರಿತು ತಿಳಿದುಕೊಳ್ಳೋಣ.

ತಿರುಪತಿಯ ತಿಮ್ಮಪ್ಪ ಸಿರಿವಂತರ ದೇವತೆ ಎನಿಸಿದ್ದರೆ, ಪಂಢರಾಪೂರದ ಪಾಂಡುರಂಗ ವಿಠಲ ದೀನರ ದೇವತೆ ಎನಿಸಿಕೊಂಡಿದ್ದಾನೆ. ಈ ಒಂದು ಕಾರಣಕ್ಕೆ ದಕ್ಷಿಣ ಭಾರತದ ಮಾಧ್ಯಮ ವರ್ಗದ ಎಲ್ಲ ಜಾತಿಯ, ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರದಲ್ಲಿ ವಿಠಲನ ದರ್ಶನ ಪಡೆಯುತ್ತಾರೆ. ಪಂಡರಾಪೂ ಮುಖ್ಯವಾಗಿ ವಿಠಲನ ದೇವಸ್ಥಾನದಿಂದ ಪ್ರಸಿದ್ಧಿ ಆಗಿದೆ. ವಿಷ್ಣು ಅಥವಾ ಕೃಷ್ಣನ ಅವತಾರ ಎನ್ನುವ ವಿಠಲನು ಇಲ್ಲಿ ತನ್ನ ಪತ್ನಿ ರುಕ್ಮಿಣಿಯ ಜೊತೆ ನೆಲೆಸಿದ್ದು ಸದಾಕಾಲ ಭಕ್ತರನ್ನು ಹರಸುತ್ತಾನೆ. ಈ ದೇವಸ್ಥಾನವು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಅತಿ ಹೆಚ್ಚು ಜನರು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಇದು ಒಂದಾಗಿದೆ.

ಪಂಢರಾಪೂರದಲ್ಲಿ ಹರಿಯುವ ಪವಿತ್ರ ನದಿ ಚಂದ್ರಭಾಗದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳು ನಾಶ ಆಗುತ್ತವೆ ಎಂದು ಜನರು ಭಾವಿಸಿದ್ದಾರೆ. ಪಂಢರಾಪೂರದ ವಿಠಲನಿಗೆ ನಡೆದುಕೊಳ್ಳುವ ಸಹಸ್ರಾರು ಭಕ್ತರು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಇದ್ದಾರೆ. ವಾರಕರಿ ಪಂಥದವರು ವಿಠಲನ ಪರಮ ಭಕ್ತರು. ಪ್ರತೀ ವರ್ಷ ಆಷಾಡ ಏಕಾದಶಿ ಅಂದರೆ ಜೂನ್/ಜುಲೈ ತಿಂಗಳಲ್ಲಿ ಹಾಗೂ ಕಾರ್ತೀಕ ಏಕಾದಶಿ ಅಂದರೆ ನವೆಂಬರ್ ತಿಂಗಳಲ್ಲಿ ವಾರಕರಿ ಜನಾಂಗದವರು ವಿಠಲನ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಇವರು ಗುಂಪಿನಲ್ಲಿ ಪಾಲ್ಕಿ ಸಮೇತವಾಗಿ ವಿಠಲನ ದರ್ಶನಕ್ಕೆ ಪಂಢರಾಪೂರಕ್ಕೆ ತೆರಳುತ್ತಾರೆ. ಈ ಗುಂಪುಗಳನ್ನ ದಿಂಡಿ ಎಂದು ಕರೆಯುತ್ತಾರೆ. ಈ ಯಾತ್ರೆಯನ್ನು ಪಂಢರಾಪೂರ ವರಿ/ವಾರಿ ಎಂದು ಕರೆಯಲಾಗುತ್ತದೆ. ಈ ಯಾತ್ರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಒಂದು ಅದ್ಭುತ ಸಂಪ್ರದಾಯ ಆಗಿದ್ದು ಲಕ್ಷ ಲಕ್ಷ ಜನ ಸಂಖ್ಯೆ ಇಲ್ಲಿ ಬಂದು ಸೇರುತ್ತಾರೆ.

ಪಂಡರಾಪುರ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಭೀಮಾ ನದಿಯ ತೀರದಲ್ಲಿ ಇದ್ದು, ಸೋಲಾಪುರ ದಿಂದ ಸುಮಾರು ೬೪ km ದೂರದಲ್ಲಿದೆ ಹಾಗೂ ಹುಬ್ಬಳ್ಳಿ ಧಾರವಾಡದಿಂದ ಸುಮಾರು ೩೧೬km ದೂರದಲ್ಲಿದೆ. ಹಾಗೆ ವಿಜಯ ಪುರದಿಂದ ೧೧೧km, ಕಲಬುರ್ಗಿ ಇಂದ ೧೪೮km ದೂರದಲ್ಲಿದೆ. ಹಲವಾರು ಪ್ರವಾಸಿಗಳು, ಭಕ್ತಾದಿಗಳು ಸೋಲಾಪುರ ದಲ್ಲಿ ಇಳಿದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿಗಳ ಮೂಲಕ ಪಂಡರಪುರವನ್ನು ತಲುಪುತ್ತಾರೆ. ಪಂಡರಪುರದಲ್ಲಿ ಉಳಿದುಕೊಳ್ಳಲು ಹಲವಾರು ಹೋಟೆಲ್ ಗಳು, ಯಾತ್ರಿ ನಿವಾಸಗಳೂ ಸಿಗುತ್ತವೆ.

ಇನ್ನು ಪಂಡರಪುರದ ಪ್ರಸಿದ್ಧ ದೇವಾಲಯಗಳನ್ನು ನೋಡುವುದಾದರೆ, ವಿಠಲ ಮಂದಿರ ಇದು ಪಂಡರಪುರದ ಹೃದಯ ಭಾಗದಲ್ಲಿ ಇದೆ . ಇದರ ಮಹಾದ್ವಾರ ಪೂರ್ವಾಭಿಮುಖವಾಗಿದೆ. ಈ ಮಹಾದ್ವಾರ ವನ್ನು ನಾಮ ದೇವ ದ್ವಾರ ಎಂದೂ ಕರೆಯುತ್ತಾರೆ. ನಾಮದೇವ ಇಲ್ಲಿ ಸಮಾಧಿಸ್ಥನಾಗಿದ್ದರಿಂದ ನಾಮ ದೇವ ದ್ವಾರ ಎಂದೂ ಕರೆಯುತ್ತಾರೆ. ಇಲ್ಲಿ ನಾಮ ದೇವರ ಪಾದವು ಸಹ ಇದೆ. ಸಮಾಧಿಯ ಪಕ್ಕ ಒಂದು ವಟ ವೃಕ್ಷದ ಪಕ್ಕದಲ್ಲಿ ೩೩ಕೋಟಿ ದೇವತೆಗಳ ದೇವಸ್ಥಾನ ಇದೆ.

ರುಕ್ಮಿಣಿ ಮಂದಿರ :- ಈ ದೇವಸ್ಥಾನ ಗರ್ಭ ಗೃಹ, ಮಧ್ಯ ಗೃಹ, ಮುಖ್ಯ ಮಂಟಪ ಮತ್ತು ಸಭಾ ಮಂಟಪ ಎಂದು ನಾಲ್ಕು ಭಾಗಗಳನ್ನು ಇದು ಹೊಂದಿದೆ. ಗರ್ಭ ಗ್ರಹದಲ್ಲಿ ರುಕ್ಮಿಣಿಯ ಮೂರ್ತಿ ಪೂರ್ವಾಭಿಮುಖವಾಗಿ ನಿಂತಿದೆ. ಈ ಮಂದಿರದಲ್ಲಿ ಸತ್ಯಭಾಮೆಗೂ ಒಂದು ಸಣ್ಣ ಮಂದಿರವಿದೆ. ಹಾಗೆ ಹತ್ತಿರದಲ್ಲಿ, ಕಾಶಿ ವಿಶ್ವನಾಥ, ರಾಮ, ಕಾಲ ಭೈರವ, ದತ್ತ, ರಾಮಲಿಂಗೇಶ್ವರ ಮತ್ತು ನರಸೋಬಾ ದೇವಸ್ಥಾನಗಳು ಸಹ ಇದೆ. ವಿಠಲ ಹಾಗೂ ರುಕ್ಮಿಣಿ ಮಂದಿರಗಳಲ್ಲಿ ನಿತ್ಯ ಹಾಗೂ ನೈಮಿತ್ಯದ ಎಂಬ ಎರಡು ಬಗೆಯ ಪೂಜೆ ವಿಧಾನಗಳು ಇವೆ. ನವರಾತ್ರಿ, ದೀಪಾವಳಿ ಹಾಗೂ ಯುಗಾದಿ ಹಬ್ಬಗಳಲ್ಲಿ ವಿಶೇಷ ಆಭರಣದ ಅಲಂಕಾರಗಳು ಸಹ ನಡೆಯುತ್ತವೆ.

ಪುಂಡಲೀಕ ದೇವಸ್ಥಾನ :- ಇಲ್ಲಿ ಪುಂಡಲೀಕ ಅಂದರೆ ತುಕಾರಾಮ ವಂಶಜ ಬಾಹು ಸಾಹೇಬ್ ದೇಕೂರ್ ಸಮಾಧಿ ಕೂಡ ಇದೆ. ಗರ್ಭ ಗುಡಿಯಲ್ಲಿ ಶಿವ ಲಿಂಗ ಇದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಮಾಧವ ಸಂಪ್ರದಾಯ ಇರುವ ಒಂದು ದೇವಾಲಯವು ಸಹ ಇದೆ. ಇವಿಷ್ಟು ಪಂಡರಾಪುರದ ಪಾಂಡುರಂಗ ವಿಠಲ ನ ಬಗೆಗಿನ ಕೆಲವು ವಿವರಗಳು.

By

Leave a Reply

Your email address will not be published. Required fields are marked *