ಇಡೀ ಜಗತ್ತಿನಲ್ಲಿ ಯಾರು ತಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುತ್ತಾರೋ ಗೊತ್ತಿಲ್ಲ ಆದರೆ ಈ ಭುವಿಯನ್ನು ಬೆಳಗುವ ಸೂರ್ಯ ಮಾತ್ರ ಆತನ ಕೆಲಸವನ್ನು ಚಾಚೂತಪ್ಪದೇ ಮಾಡುತ್ತಿದ್ದಾನೆ ಅದಕ್ಕೆ ತಾನೇ ನಮ್ಮ ಕವಿಗಳು ಸೂರ್ಯನ ಬಗ್ಗೆ ಮುಂಜಾನೆ ಸೂರ್ಯ ಎಲ್ಲರಿಗಿಂತ ಮುಂಚೆ ಏಳುತ್ತಾನೆ ಎದ್ದು ಕೊಟ್ಟಿಗೆಯ ಬಾಗಿಲನ್ನು ನೂಕಿ ದುಡಿವ ಜನರನ್ನು ಎಚ್ಚರಿಸುತ್ತಾನೆ ಎಂದು ಅಂದವಾಗಿ ಹಾಡು ಕಟ್ಟಿ ಹಾಡಿದ್ದು ಸೂರ್ಯನಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ

ಅದಕ್ಕೆ ಜನರು ನಮ್ಮ ಪೀಳಿಗೆ ಎಷ್ಟೇ ಮುಂದುವರೆದರೂ ಸೂರ್ಯನಿಗೆ ಮತ್ತು ಸೂರ್ಯ ನಮಸ್ಕಾರಕ್ಕೆ ಅದರದ್ದೇ ಆದ ಮಹತ್ವವಿದೆ ಎಷ್ಟೋ ಸಮಸ್ಯೆಗಳು ಸೂರ್ಯ ನಮಸ್ಕಾರದಿಂದ ಬಗೆ ಹರೆದ ಉಲ್ಲೇಖಗಳಿವೆ ಸೂರ್ಯ ಹುಟ್ಟಿದ ನಂತರವೇ ಭೂಮಿಯ ಮೇಲೆ ಹೂವು ಅರಳುವುದು ಕೂಡ ಹೀಗೆ ಪ್ರತಿನಿತ್ಯ ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ ಸೂರ್ಯೋದಯದ ಸಮಯದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯವಾಗಿದೆ.

ಅದೇ ರೀತಿ ಸೂರ್ಯಾಸ್ತದ ವೇಳೆ ಅಂದರೆ ಸೂರ್ಯ ಮುಳುಗುವ ವೇಳೆ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ ಆ ರೀತಿ ಸೂರ್ಯ ಮುಳುಗುವ ಸಮಯದಲ್ಲಿ ಮಾಡಲೇಬಾರದ 5 ಕೆಲಸಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡುತ್ತೇವೆ ಬನ್ನಿ, ಸೂರ್ಯ ಮುಳುಗುವ ಸಮಯದಲ್ಲಿ ಊಟ ಮಾಡುವುದು ಒಳ್ಳೆಯದಲ್ಲ ನಮ್ಮ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಹೇಳುವುದಾದರೆ ಸಂಜೆಯ ಸಮಯದಲ್ಲಿ ಊಟ ಮಾಡುವುದರಿಂದ ನಮ್ಮ ಸಂಪತ್ತು ಕಡಿಮೆಯಾಗುತ್ತದೆ ಸಂಜೆ ವೇಳೆಯಲ್ಲಿ ಮನೆಯನ್ನು ಶುದ್ಧಿಗೊಳಿಸುವ ಕೆಲಸದಲ್ಲಿ ತೊಡಗಬಾರದು ಯಾಕಂದ್ರೆ ನಾವು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬೇಕಾದರೆ ಸಂಜೆಯ ವೇಳೆ ಪೂಜಾಕಾರ್ಯಗಳಲ್ಲಿ ತೊಡಗಬೇಕು.

ಸಂಜೆ ವೇಳೆ ಮನೆಯ ಶುದ್ಧಿ ಮನೆಗೆ ಶ್ರೇಯಸ್ಕರವಲ್ಲ ಸಂಜೆಯ ವೇಳೆ ಶೃಂಗಾರದಲ್ಲಿತೊಡಗುವುದು ಸೂಕ್ತವಲ್ಲ ಇದರಿಂದ ಅವರು ಬಿಕಾರಿಗಳಾಗುತ್ತಾರೆ ನಮ್ಮ ಶಾಸ್ತ್ರದ ಪ್ರಕಾರ ಸಂಜೆಯ ವೇಳೆ ವೇಳೆ ಲಕ್ಷ್ಮಿ ದೇವಿ ಭೂಮಿಯ ಮೇಲೆ ಬರುವ ಸಮಯ ಇಂತಹ ಪವಿತ್ರ ಸಮಯದಲ್ಲಿ ಜನರು ಶೃಂಗಾರದಲ್ಲಿ ತೊಡಗುವುದರಿಂದ ಲಕ್ಷ್ಮಿ ದೇವಿಯ ಕೃಪೆ ದೊರವಾಗುತ್ತದೆ ಮತ್ತು ಹಲವಾರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇನ್ನು ಸಂಜೆಯ ಸಮಯದಲ್ಲಿ ನಿದ್ರೆಯನ್ನು ಮಾಡಬಾರದು ಹೀಗೆ ಮಲಗಿ ನಿದ್ರಿಸುವುದರಿಂದ ನಮ್ಮ ಮನಸ್ಸು ಉತ್ತೇಜನವನ್ನು ಕಳೆದುಕೊಳ್ಳುತ್ತದೆ ಹಾಗೂ ನಮ್ಮ ಜ್ಞಾಪಕ ಶಕ್ತಿ ಕುಂದುತ್ತದೆ ನಮ್ಮ ಶಾಸ್ತ್ರಗಳು ಹೇಳುತ್ತಾಬಂದಿರುವುದು ಇದನ್ನೇ ಹಾಗೂ ನಮ್ಮ ಮನೆಯ ಹಿರಿಯರು ಹೇಳುತ್ತಾ ಬಂದಿರುವುದು ಕೂಡ ಇದನ್ನೇ ಸಂಜೆಯ ವೇಳೆ ತುಳಸಿ ಎಲೆಗಳನ್ನು ಕೀಳುವುದೆಂದರೆ ಬಡತನವನ್ನು ನಮ್ಮ ಮನೆಗೆ ಆಹ್ವಾನಿಸಿದಂತೆಯೇ ಸರಿ ಹಾಗಾಗಿ ದೇವರ ಮೇಲೆ ಹಾಗೂ ನಮ್ಮ ಆಚರಣೆಗಳ ಮೇಲೆ ನಂಬಿಕೆ ಇರುವವರು ಇವುಗಳನ್ನು ತಪ್ಪದೆ ಪಾಲಿಸಿ ಯಾಕಂದ್ರೆ ನಮ್ಮ ಪುರಾಣಗಳು ಹೇಳಿರುವುದನ್ನೇ ನಮ್ಮ ವಿಜ್ಞಾನ ನಮಗೆ ಇಂದು ಹೇಳುತ್ತಿರುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!