ಪ್ರತಿ ಮನುಷ್ಯನ ಹೆಸರುಗಳಲ್ಲಿ ಮೊದಲ ಅಕ್ಷರ ತನ್ನ ಸ್ವಮಭಾವ ಹಾಗೂ ವ್ಯಕ್ತಿತ್ವವನ್ನು ಸೂಚಿಸುತ್ತದೆ ಅನ್ನೋದನ್ನ ಸಂಖ್ಯಾ ಶಾಸ್ತ್ರದ ಮೂಲಕ ತಿಳಿಯಲಾಗುತ್ತದೆ. ಈ ಪಿ ಅಕ್ಷರದವರು ನೋಡಲು ತುಂಬಾ ಸುಂದರವಾಗಿ ಇರುತ್ತಾರೆ ಇವರ ಮುಖದಲ್ಲಿ ಸದಾ ನಗು ಇರುತ್ತೆ, ಇವರು ನೋಡಲು ಗೋದಿಬಣ್ಣದವರಾಗಿದ್ದರು ತುಂಬಾ ಲಕ್ಷಣವಾಗಿರುತ್ತಾರೆ. ಇವರ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ಒಂದು ನಗು ಸದಾ ಇದ್ದೆ ಇರುತ್ತೆ.

ಇನ್ನು ಇವರ ಸ್ವಬಾವನ್ನ ನೋಡುವುದಾದರೆ, ಇವರು ಎಷ್ಟೇ ದುಃಖದಲ್ಲಿದ್ದರು, ಎಲ್ಲರ ಮುಂದು ಸದಾ ನಗುತ್ತಿರುವವರಾಗಿರುತ್ತಾರೆ. ಇವರು ತಮ್ಮ ದುಃಖವನ್ನ ಇನ್ನೊಬರಿಗೆ ಹೇಳಿ ಅವರಿಗೆ ದುಃಖವನ್ನ ಕೊಡುವುದಕ್ಕೆ ಇಷ್ಟ ಪಡುವುದಿಲ್ಲ. ಇವರ ಮನಸ್ಸಿನಲ್ಲಿ ಸಾಕಷ್ಟು ತೊಂದರೆಗಳು ಹಾಗೂ ಕಿರಿ ಕಿರಿ ಇದ್ದರು ಇವರು ಯಾವಾಗಲು ಶಾಂತವಾಗಿರುವಂತೆ ಬೇರೆಯವರ ಮುಂದೆ ತೋರಿಸಿಕೊಳ್ಳುತ್ತಾರೆ. ಇನ್ನು ಇವರ ಜೀವನದಿಂದ ಯಾವುದಾದರು ವ್ಯಕ್ತಿಯನ್ನ ಇವರು ದೂರ ಮಾಡಿದರೆ ಮತ್ತೆ ಅವರನ್ನ ಇವರು ಹತ್ತಿರವೂ ಸಹ ಸೇರಿಸುವುದಿಲ್ಲ.

ಈ ಪಿ ಅಕ್ಷರದವರಿಗೆ ಹಠ ಎನ್ನುವುದು ಸ್ವಲ್ಪ ಜಾಸ್ತಿನೇ ಇರುತ್ತೆ ಆದರೆ ಇದ್ದರಿಂದ ಅವ್ರ ಜೀವನದಲ್ಲಿ ಒಳ್ಳೆಯದು ಆಗುತ್ತೆ ಕೆಟ್ಟದ್ದು ಆಗತ್ತೆ. ಇವರು ಹೆಚ್ಚು ದೇವರನ್ನ ನಂಬುತ್ತಾರೆ, ದೇವರ ಮೇಲೆ ಭಕ್ತಿ ಹೆಚ್ಚಾಗಿರುತ್ತೆ ಆದರೆ ಅದನ್ನ ತೋರಿಸಿಕೊಳ್ಳುವುದಿಲ್ಲ. ಇನ್ನು ಇವರಲ್ಲಿ ಪವಿತ್ರತೆ ಎಂಬುದು ತುಂಬಿರುತ್ತದೆ.

ಇನ್ನು ಇವರು ಯಾವುದೇ ಕೆಲಸವನ್ನ ಕೊಟ್ಟರು ಸಹ ಅದನ್ನ ತುಂಬಾ ಆಸಕ್ತಿಯಿಂದ ಮಾಡುತ್ತಾರೆ, ತಮಗೆ ಗೊತ್ತಿಲ್ಲದ ವಿಷ್ಯವನ್ನ ಹೆಚ್ಚಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಇವರು ಕಷ್ಟ ಪಟ್ಟು ಮಾಡಿದ ಯಾವ ಕೆಲಸಕ್ಕೂ ಫಲ ಸಿಗುವುದು ಕಡಿಮೆ. ಇವರು ಯಾವುದೇ ಒಂದು ವಿಷ್ಯದಲ್ಲಿ ಸೋತರು ಅದನ್ನ ಒಂದು ಚಾಲೆಂಜ್ ಆಗಿ ತಗೋತಾರೆ.

ಇವರಿಗೆ ಪ್ರೀತಿಯಲ್ಲಿ ಬಹಳ ನಂಬಿಕೆ ಇರುತ್ತೆ, ಇವರು ಯಾರನ್ನಾದರೂ ಪ್ರೀತಿ ಮಾಡಿದರೆ ಅವರನ್ನ ಇವರು ಜೀವನ ಪೂರ್ತಿ ಖುಷಿಯಾಗಿಡಲು ಬಯಸುತ್ತಾರೆ. ಅವರಿಂದ ಯಾವುದೇ ಅಪೇಕ್ಷೆಗಳನ್ನ ಇಟ್ಟುಕೊಳ್ಳದೆ ಇವರಿ ಸಾಧ್ಯವಾದಷ್ಟು ಪ್ರೀತಿಯನ್ನ ಅವ್ರಿಗೆ ನೀಡುತ್ತಾರೆ. ಇನ್ನು ಇವರು ಕಷ್ಟದಲ್ಲಿರುವವರಿಗೆ ಹೆಚ್ಚು ಸಹಾಯವನ್ನ ಮಾಡಲು ಬಯಸುತ್ತಾರೆ. ಕಷ್ಟದಲ್ಲಿರಿವವರು ಇವರಂತೆ ಖುಷಿಯಾಗಿರಲಿ ಎಂದು ಬಯಸುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.

By

Leave a Reply

Your email address will not be published. Required fields are marked *