ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಇಂದಿನ ಯುವಜನರಿಗೆ ಮಾದರಿಯಾಗಿರುವ ಸುಧಾಮೂರ್ತಿ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಹೋದರಿ. ಸುಧಾಮೂರ್ತಿ ಅವರ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಹೇಳಿದ ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ಬಸವರಾಜ ಬೊಮ್ಮಾಯಿ ಅವರು ತಮ್ಮ ಅಕ್ಕ ಸುಧಾ ಮೂರ್ತಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ ಅಲ್ಲದೆ ನಾವಿಬ್ಬರೂ ಆತ್ಮೀಯರು ಒಂದೆ ಊರಿನವರು ಒಂದೆ ಕಾಲೇಜಿನಲ್ಲಿ ಓದಿದ್ದೇವೆ. ನಾನು ಮುಖ್ಯಮಂತ್ರಿಯಾದಾಗ ಸುಧಾಮೂರ್ತಿಯವರು ಹರಸಿದ ರೀತಿಯನ್ನು ನೋಡಿ ಭಾವುಕನಾದೆ, ಅಕ್ಕನ ಆಶೀರ್ವಾದ ನನಗೆ ಬೇಕು ಆಶೀರ್ವಾದದಲ್ಲಿ ಶಕ್ತಿ ಅಡಗಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

ಅವರ ಸಂಸ್ಥೆ ಮಾಡುವ ಸಮಾಜಸೇವಾ ಕೆಲಸಗಳ ಬಗ್ಗೆ ಮಾತನಾಡಲು ಶಬ್ದಗಳಿಲ್ಲ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಮಾತಿನಂತೆ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಪಾಲಿಸಿಕೊಂಡು ಬಂದಿದ್ದಾರೆ. ಬೆಂಗಳೂರಿನಲ್ಲಿರುವ ಅನೇಕ ಆಸ್ಪತ್ರೆಗಳಿಗೆ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.

ಸುಧಾಮೂರ್ತಿ ಅವರು ತಾವು ಕಲಿತಿರುವ ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜಿಗೆ ದೊಡ್ಡಮಟ್ಟದ ಉಡುಗೊರೆ ಕೊಟ್ಟಿದ್ದಾರೆ ಎಂದು ಹೇಳುತ್ತಾ ಬಸವರಾಜ್ ಬೊಮ್ಮಾಯಿ ಅವರು ದಾನ ಮಾಡಿದ ಎಲ್ಲಾ ದಾನಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಭಗವಂತ ಕೆಲವರಿಗೆ ಐಶ್ವರ್ಯ ಕೊಡುತ್ತಾನೆ ಆದರೆ ಹೃದಯವಂತಿಕೆ ಕೊಡುವುದಿಲ್ಲ. ನಾವು ಬದುಕಿನಲ್ಲಿ ಬಹಳಷ್ಟು ಗಳಿಸುತ್ತೇವೆ ಆದರೆ ಅದರ ಪ್ರಯೋಜನವಾಗದೆ ಇದ್ದಾಗ ಅದಕ್ಕೆ ಸಾರ್ಥಕತೆ ಇರುವುದಿಲ್ಲ. ಬಿಸಿನೆಸ್ ನಲ್ಲಿ ಬ್ಯಾಲೆನ್ಸ್ ಶೀಟ್ ಬ್ಯಾಲೆನ್ಸ್ ಮಾಡಿದ ಹಾಗೆ ಬದುಕಿನ ಬ್ಯಾಲೆನ್ಸ್ ಶೀಟ್ ಅನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು.

ತಂದೆ ತಾಯಿ, ಅಕ್ಕತಂಗಿಯರು, ಅಣ್ಣತಮ್ಮಂದಿರು, ಗುರುಗಳಿಂದ ಪುಣ್ಯ ಗಳಿಸಿರುತ್ತೇವೆ ಅದನ್ನು ಬಳಕೆ ಮಾಡಿದಾಗ ಎತ್ತರದ ಸ್ಥಾನಕ್ಕೆ ಹೋಗುತ್ತೇವೆ. ನಾನು ನಿಸ್ವಾರ್ಥದಿಂದ ಸಮಾಜದಿಂದ ಏನನ್ನು ಪಡೆದುಕೊಂಡಿದ್ದೇವೆ ಅದನ್ನು ಸಮಾಜದ ಒಳಿತಿಗೆ ಮೀಸಲಿಡಬೇಕು. ನಮ್ಮಲ್ಲಿರುವ ಹಣವನ್ನು ಕೊಡಬೇಕು ಎಂಬ ಭಾವನೆಯೂ ದೇವರಿಂದ ಬಂದಂತಹ ಗುಣಾತ್ಮಕ ಸ್ವಭಾವವಾಗಿದೆ. ನಮ್ಮ ನಾಡಿಗೆ ಹೃದಯವಂತ ಶ್ರೀಮಂತರು ಅವಶ್ಯವಾಗಿ ಬೇಕಾಗಿದ್ದಾರೆ. ಇದಕ್ಕೆ ಪ್ರೇರಣೆಯಾಗಿ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಕೆಲಸ ಮಾಡುತ್ತಿದ್ದಾರೆ.

ಒಳ್ಳೆಯ ಕೆಲಸವನ್ನು ಮಾಡಿದಾಗ ನಮಗೆ ತೃಪ್ತಿ ಇರುತ್ತದೆ ಅದರ ಬಗ್ಗೆ ಸಂತೋಷ ಇರುತ್ತದೆ. ಒಳ್ಳೆಯ ಕೆಲಸವನ್ನು ಮಾಡಿ ಮರೆಯಬಾರದು ಅದನ್ನು ಮೆಲುಕು ಹಾಕುತ್ತಿರಬೇಕು ಆಗ ಇನ್ನು ಹೆಚ್ಚಿನ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಇನ್ಫೋಸಿಸ್ ಎಂಬ ಕಂಪನಿಯನ್ನು ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಕೋಟ್ಯಾಧೀಶ್ವರರಾಗಿರುವ ಸುಧಾ ಮೂರ್ತಿ ಅವರು ಸಮಾಜಸೇವೆಯಲ್ಲಿ ಎತ್ತಿದ ಕೈ ಅಲ್ಲದೆ ಅವರು ಸರಳ ಜೀವನ ನಡೆಸುತ್ತಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!