ಮಹಿಳೆಯರು ಮದುವೆಯಾಗುವ ಪುರುಷರ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ ತಿಳಿಯಿರಿ

0 210

ಪುರುಷ- ಸ್ತ್ರೀಯ ವಿವಾಹದ ವಯಸ್ಸು ನಿಗದಿ ಆಗಿರುವುದು ಇಂಡಿಯನ್‌ ಮೆಜಾರಿಟಿ ಆ್ಯಕ್ಟ್- 1875 ಪ್ರಕಾರ. ಇದರ ಪ್ರಕಾರ ಗಂಡಸಿನ ಪ್ರಾಪ್ತವಯಸ್ಸು ಇಪ್ಪತ್ತೊಂದು ಹಾಗೂ ಸ್ತ್ರೀಯದ್ದು ಹದಿನೆಂಟು ವರ್ಷ ವಯಸ್ಸು. ಈ ಕಾನೂನಿನ ಪ್ರಮುಖ ಉದ್ದೇಶ ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು. ಹಿಂದೂಗಳಿಗೆ, ಹಿಂದೂ ವಿವಾಹ ಕಾಯಿದೆ-1955ರ ಪ್ರಕಾರ, ವರ ಮತ್ತು ವಧುವಿಗೆ ಕನಿಷ್ಠ ವಯಸ್ಸು ಹದಿನೆಂಟು ಹಾಗೂ ಇಪ್ಪತ್ತೊಂದು ವರ್ಷ ಆಗಿರಬೇಕು.

ಒಂದು ವೇಳೆ ವಯಸ್ಸಿನ ಅನಂತರ ಹೆಚ್ಚು ಕಡಿಮೆ ಇದ್ದರೆ ಏನಾಗುತ್ತದೆ? ಮದುವೆ ಆಗುವ ಸ್ತ್ರೀಯ ವಯಸ್ಸು ಪುರುಷನ ವಯಸ್ಸಿಗಿಂತ ಹೆಚ್ಚಾಗಿ ಇದ್ದರೆ ಏನಾದರೂ ಸಮಸ್ಯೆ ಆಗುತ್ತದೆಯೇ? ಈ ಎಲ್ಲದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇಷ್ಟೆಲ್ಲಾ ಕಾನೂನುಗಳಿದ್ದರೂ ಭಾರತದಲ್ಲಿ ಬಾಲ್ಯ ವಿವಾಹಗಳು ನಡೆದೇ ಇವೆ. ಅದರ ಜೊತೆಗೇ ಬೇಗನೆ ಗರ್ಭ ಧರಿಸುವಿಕೆ, ಅಪಕ್ವ ವಯಸ್ಸಿನಲ್ಲಿ ಗರ್ಭಧಾರಣೆಯಿಂದ ಹೆರಿಗೆ ಸಮಯದಲ್ಲಿ ತಾಯಿ- ಮಗು ಮರಣ, ಪ್ರಿಮೆಚ್ಯೂರ್‌ ಮಗು ಜನನ, ಇವೆಲ್ಲಸಂಭವಿಸುತ್ತವೆ. ಹೀಗಾಗಿ ಮದುವೆಯ ವಯಸ್ಸಿಗೂ ಇದಕ್ಕೂ ಸಂಬಂಧವಿದೆ.

ಮದುವೆ ವಿಚಾರದಲ್ಲಿ ಗಂಡು ಹೆಣ್ಣಿನ ಒಪ್ಪಿಗೆ ಮತ್ತು ಎರಡು ಕುಟುಂಬಗಳ ನಡುವಿನ ಒಡನಾಟಕ್ಕಿಂತ ಮೊದಲು ನೋಡುವುದು ವಧು ವರರ ನಡುವಿನ ವಯಸ್ಸಿನ ಅಂತರ. ಕೆಲವರು ವಯಸ್ಸಿನ ಅಂತರಕ್ಕೆ ಒಪ್ಪಿಗೆ ಇದ್ದರೆ, ಇನ್ನು ಕೆಲವರು ವಯಸ್ಸಿನ ಅಂತರ ಬೇಡವೆಂದು ಹೇಳುತ್ತಾರೆ. ಏಕೆಂದರೆ ಇದು ದೈಹಿಕವಾಗಿ, ಮಾನಸಿಕವಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುದುಕನನ್ನು ಯುವತಿ ಮದುವೆಯಾಗುವುದು, ಮುದುಕಿಯನ್ನು ಯುವಕ ಮದುವೆಯಾಗುವುದು ಎಂಬ ಸುದ್ದಿ ಹರಿದಾಡುವುದನ್ನು ಗಮನಿಸಿರಬಹುದು. ಕೆಲವರು 5 ವರ್ಷ ಅಂತರ ಇದ್ದರೆ ಉತ್ತಮ ಎಂದರೆ, ಇನ್ನು ಕೆಲವರು ಮೂರರಿಂದ ಆರು ವರ್ಷ ಎನ್ನುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ಕಿರಿಯ ಮಹಿಳೆಯರನ್ನು ಮದುವೆಯಾಗುತ್ತಾರೆ ಮತ್ತು ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದ ಪುರುಷರನ್ನು ಮದುವೆಯಾಗಲು ಬಯಸುವುದು ಸರ್ವೇ ಸಾಮಾನ್ಯವಾಗಿದೆ. ಇಲ್ಲವೆ ಒಂದೇ ವಯಸ್ಸಿನ ಅಥವಾ ಕೆಲವೇ ವರ್ಷಗಳ ಅಂತರವಿರುವವರನ್ನು ಮದುವೆಯಾಗುತ್ತಾರೆ. ಆದರೆ ಮದುವೆಗೆ ವಯಸ್ಸಿನ ವ್ಯತ್ಯಾಸ ಎಷ್ಟಿರಬೇಕು? ಅಂತರ ಹೆಚ್ಚಿದರೆ ಏನು ತೊಂದರೆಯಾಗುತ್ತದೆ? ಎಂದು ಸಂಶೋಧನೆಯೊಂದು ಹೇಳಿದೆ.

17ನೇ ಶತಮಾನದಿಂದ 19ನೇ ಶತಮಾನದವರೆಗಿನ ಉತ್ಸೋಜಿ, ಇನಾರಿ ಮತ್ತು ಎನೊಂಟೆಕಿಕ್ ಜನಸಂಖ್ಯೆಯ 700 ವಿವಾಹಗಳ ದಾಖಲೆಗಳನ್ನು ಪರೀಕ್ಷಿಸುವ ಮೂಲಕ ಈ ಸಂಶೋಧನೆ ಮಾಡಿದರು. ಫಿನ್‍ಲ್ಯಾಂಡಿನ ಸಾಮಿ ಜನರನ್ನೊಳಗೊಂಡು ನಡೆಸಿದ ಹೊಸ ಸಂಶೋಧನೆ ಪ್ರಕಾರ, ಪುರುಷರು ತಮ್ಮ 15 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಹಿಳೆಯನ್ನು ಮದುವೆಯಾಗಬೇಕು, ಅದು ಬದುಕುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ತೋರಿಸಿದೆ.

ಮದುವೆಯಲ್ಲಿ ಪೋಷಕರ ವಯಸ್ಸಿನ ವ್ಯತ್ಯಾಸವು ಸಂತಾನೋತ್ಪತ್ತಿ ಯಶಸ್ಸಿನ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ. 14.6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಪುರುಷರ ಜೀವಿತಾವಧಿಯ ಸಂತಾನೋತ್ಪತ್ತಿ ಯಶಸ್ಸನ್ನು ಗರಿಷ್ಠಗೊಳಿಸಿದೆ ಎಂದು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.

ಮದುವೆ ವಯಸ್ಸಿನ ಅಂತರ ಕಡಿಮೆ ಇದ್ದರೆ ಸಾಮಾನ್ಯವಾಗಿ ಯುವತಿಯರು ಹೆಚ್ಚು ಆರೋಗ್ಯವಂತ ಮಕ್ಕಳನ್ನು ಹೆರುತ್ತಾರೆ. ವಯಸ್ಸಾದ ಮಹಿಳೆ ಅಥವಾ ಹೆಚ್ಚು ವಯಸ್ಸಾದ ಪುರುಷನನ್ನು ಮದುವೆಯಾಗುವುದು ಸಂತಾನೋತ್ಪತ್ತಿ ಯಶಸ್ಸಿಗೆ ಅತ್ಯಂತ ಹಾನಿಕಾರಕವಾಗಿದೆ. ಆದರೂ, ಈ ವಿವಾಹಗಳಲ್ಲಿ ಕೇವಲ 10 ಪ್ರತಿಶತದಷ್ಟು ಮಾತ್ರ ಪುರುಷರು ಮತ್ತು ಮಹಿಳೆಯರ ನಡುವೆ ಸೂಕ್ತ ವಯಸ್ಸಿನ ವ್ಯತ್ಯಾಸವಿದೆ.

ಪುರುಷರು ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರನ್ನು ಮದುವೆಯಾಗುವುದರಿಂದ ಹಿಡಿದು 25 ವರ್ಷಕ್ಕಿಂತ ಮೇಲ್ಪಟ್ಟ ಪುರುಷರನ್ನು ಮದುವೆಯಾಗುವ ಅವಧಿಯವರೆಗೆ ಗಂಡ ಹೆಂಡತಿಯ ನಡುವಿನ ಸರಾಸರಿ ವಯಸ್ಸಿನ ವ್ಯತ್ಯಾಸವು ಮೂರು ವರ್ಷಗಳಿರಬೇಕು. ಹೆಚ್ಚಿನ ವಿವಾಹಗಳು ಗರಿಷ್ಠ ವಯಸ್ಸಿನ ವ್ಯತ್ಯಾಸ ಹೊಂದಿರುವುದಿಲ್ಲ ಎಂದು ಹೇಳುತ್ತಾರೆ.

ಆಧುನಿಕ ಸ್ವೀಡನ್‍ನಲ್ಲಿನ ಇತರ ಸಂಶೋಧನೆಯು ಪುರುಷನು ತನಗಿಂತ ಕಿರಿಯ ಅರು ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗುವುದು ಸೂಕ್ತವಾದ ಸಂತಾನೋತ್ಪತ್ತಿ ಕಾರಣವಾಗುತ್ತದೆ ಎಂದು ತೋರಿಸಿದೆ. ಆದರೆ ಮದುವೆಯ ಮೇಲಿನ ಸಾಂಸ್ಕೃತಿಕ ನಿರ್ಬಂಧಗಳು ಬದಲಾಗಿರಬಹುದು. ಆದರೆ ಮದುವೆಯಲ್ಲಿ ವಯಸ್ಸಿನ ಅಂತರ, ಪ್ರೀತಿಗಿಂತ ಸಂಪತ್ತು ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಹೇಳುತ್ತಾರೆ.

ಆದರೆ ಇತ್ತೀಚೆಗೆ ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಹೆಚ್ಚಿಸುವ ಸಂಬಂಧ ವರದಿ ನೀಡಲು ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು ತನ್ನ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಪ್ರಧಾನಿ ಕಾರ್ಯಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಶೀಘ್ರವೇ ಸರ್ಕಾರ ಹೆಣ್ಣು ಮಕ್ಕಳ ವಿವಾಹ ವಯೋಮಿತಿಯನ್ನು 18ರಿಂದ 21ಕ್ಕೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆ ಕಾರ್ಯಪಡೆಯು ತಾಯ್ತನಕ್ಕೆ ಅಗತ್ಯರುವ ಆರೋಗ್ಯ, ಪೌಷ್ಠಿಕಾಂಶ, ಶಿಶು ಮರಣ ದರ, ಗರ್ಭಿಣಿಯರ ಮರಣ ದರ, ಲಿಂಗಾನುಪಾತ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. 74ನೇ ಸ್ವಾತಂತ್ರ್ಯ ದಿನೋತ್ಸವದಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈ ಬಗ್ಗೆ ಸಮಿತಿ ರಚಿಸಲಾಗಿದೆ. ಸಮಿತಿ ಶಿಫಾರಸುಗಳ ಆಧಾರದ ಮೇಲೆ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸದ್ಯ ಹೆಣ್ಣು ಮಕ್ಕಳ ವಿವಾಹದ ವಯಸ್ಸು 18 ಎಂದು ನಿಗದಿಪಡಿಸಲಾಗಿದೆ.

Leave A Reply

Your email address will not be published.