ಕನ್ನಡದ ಕುವರನಿಗೆ ದುಬೈನಲ್ಲಿ ಅದ್ದೂರಿ ಸ್ವಾಗತ, ನೋಡಿ ವಿಡಿಯೋ

0 0

ನಟ ಸುದೀಪ್‌ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾದವರಲ್ಲ. ರಾಜ್ಯ-ರಾಷ್ಟ್ರಗಳ ಗಡಿಯಾಚೆಗೂ ಅವರ ಖ್ಯಾತಿ ಹಬ್ಬಿದೆ. ಈಗ ದುಬೈನಲ್ಲಿ ಕಿಚ್ಚ ಹವಾ ಮಾಡುತ್ತಿದ್ದಾರೆ. ಅಲ್ಲಿಗೆ ತೆರಳಿರುವ ಅಭಿನಯ ಚಕ್ರವರ್ತಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜನವರಿ27ರಂದು ದುಬೈಗೆ ತೆರಳಿರುವ ಕಿಚ್ಚ ಸುದೀಪ್‌ ಅವರಿಗೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿದೆ ಅದ್ದೂರಿ ಸ್ವಾಗತ ಸಿಕ್ಕಿದ್ದು , ಜನವರಿ 31ಕ್ಕೆ ವಿಕ್ರಾಂತ್‌ ರೋಣ ಟೈಟಲ್‌ ಲೋಗೋ ಲಾಂಚ್‌ ಬುರ್ಜ್‌ ಖಲೀಫಾ ಮೇಲೆ ಬಿತ್ತರ ಆಗಲಿದೆ ಟೀಸರ್‌. ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸುದೀಪ್‌ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸುತ್ತಿದ್ದಾರೆ. ಅಲ್ಲದೆ, ‘ಫ್ಯಾಂಟಮ್‌’ ಎಂದಿದ್ದ ಸಿನಿಮಾ ಹೆಸರು ಈಗ ‘ವಿಕ್ರಾಂತ್‌ ರೋಣ’ ಎಂದು ಬದಲಾಗಿದೆ. ಈ ಎರಡು ವಿಶೇಷ ಕಾರಣಗಳಿಗಾಗಿ ದುಬೈನ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಜನವರಿ 31ರಂದು ಸುದೀಪ್‌ ಅವರ ಕಟೌಟ್‌ ರಾರಾಜಿಸಲಿದೆ. ‘ವಿಕ್ರಾಂತ್‌ ರೋಣ’ ಟೈಟಲ್‌ ಲೋಗೋ ಲಾಂಜ್‌ ಆಗಲಿದೆ. ಈ ವೈಭೋಗವನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ. ನಟ ಕಿಚ್ಚ ಸುದೀಪ್‌ ಅವರ ಗಮನವೆಲ್ಲ ಈಗ ‘ವಿಕ್ರಾಂತ್‌ ರೋಣ’ ಸಿನಿಮಾದ ಮೇಲಿದೆ. ಅದರ ಟೈಟಲ್‌ ಅನಾವರಣ ಕಾರ್ಯಕ್ರಮದ ಸಲುವಾಗಿ ಸುದೀಪ್‌ ಅವರು ದುಬೈ ತಲುಪಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಸುದೀಪ್‌ ಜನವರಿ 27ರಂದು ದುಬೈಗೆ ತೆರಳಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಸುದೀಪ್‌ಗೆ ಸ್ವಾಗತ ಕೋರಲಾಗಿದೆ. ಹೂವಿನ ಹಾರ ಹಾಕಿ, ಹೂಗುಚ್ಛ ಮತ್ತು ಉಡುಗೊರೆಗಳನ್ನು ನೀಡಿ ಸ್ವಾಗತಿಸಲಾಗಿದೆ. ಈ ವೇಳೆ ಸುದೀಪ್‌ ಪತ್ನಿ ಪ್ರಿಯಾ ಕೂಡ ಜೊತೆಗಿದ್ದರು. ವಿದೇಶಿ ನೆಲದಲ್ಲಿ ತಮ್ಮ ನೆಚ್ಚಿನ ನಟನಿಗೆ ಈ ಪರಿ ಗೌರವ ಸಿಗುತ್ತಿರುವುದನ್ನು ಕಂಡು ಫ್ಯಾನ್ಸ್‌ ಸಖತ್‌ ಖುಷಿ ಆಗಿದ್ದಾರೆ.

ಟೈಟಲ್‌ ಲೋಗೋ ಜೊತೆಯಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾದ ಸ್ನೀಕ್‌ ಪೀಕ್‌ ದೃಶ್ಯ ತುಣುಕು ಕೂಡ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಬಿತ್ತರ ಆಗಲಿದೆ. ಟೀಸರ್‌ ಮಾದರಿಯಲ್ಲಿ ಇರುವ ಈ ವಿಡಿಯೋದ ಅವಧಿ ಮೂರು ನಿಮಿಷ ಆಗಿರಲಿದೆ. ಈಗಾಗಲೇ ಕೆಲವು ಪೋಸ್ಟರ್‌ ಮತ್ತು ಟೀಸರ್‌ಗಳ ಮೂಲಕ ನಿರ್ದೇಶಕ ಅನೂಪ್‌ ಭಂಡಾರಿ ಕೌತುಕ ಮೂಡಿಸಿದ್ದಾರೆ. ಜಾಕ್‌ ಮಂಜು ಮತ್ತು ಅಲಂಕಾರ್‌ ಪಾಂಡಿಯನ್‌ ಈ ಚಿತ್ರಕ್ಕೆ ಹಣ ಹೂಡುತ್ತಿದ್ದು, ನಿರೂಪ್‌ ಭಂಡಾರಿ ಮತ್ತು ನೀತಾ ಅಶೋಕ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ವಿಕ್ರಾಂತ್ ರೋಣ’ ಎಂದು ಹೆಸರು ಬದಲು ಮಾಡುವುದಕ್ಕೆ ಕಾರಣವೇನು ಎಂದು ಸುದೀಪ್‌ ರಿವೀಲ್ ಮಾಡಿದ್ದಾರೆ. ಶೂಟಿಂಗ್‌ ಹೊರಡುವ ಮುನ್ನ ‘ವಿಕ್ರಾಂತ್ ರೋಣ ರೀಪೋರ್ಟಿಂಗ್’ ಎಂದು ಸುದೀಪ್ ಬರೆದು ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು, ಫ್ಯಾಂಟಮ್‌ ಹೆಸರಿಗಿಂತ ವಿಕ್ರಾಂತ್ ರೋಣ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಕಾರಣ ನಿರ್ಮಾಪಕ ಜಾಕ್ ಮಂಜು ಅವರಿಗೆ ಇದೇ ಟೈಟಲ್‌ ನೋಂದಾಯಿಸಿಕೊಳ್ಳುವಂತೆ ಹೇಳಿದ್ದರಂತೆ.

Leave A Reply

Your email address will not be published.