ಬಡ ರೈತನ ಮಗ ಅದರಲ್ಲೂ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಅಂಜನ್ ಒಂದೇ ಒಂದು ಸಿನಿಮಾದ ಮೂಲಕ ಯುವಕರು ಹುಚ್ಚೆದ್ದು ಕುಣಿಯುವಂತೆ ಮಾಡುವುದರ ಜೊತೆಗೆ ಉತ್ತರ ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚಿನ ಫ್ಯಾನ್ಸ್ ಕ್ಲಬ್ ಇವರ ಹೆಸರಿನಲ್ಲಿದೆ. ನಾವಿಂದು ನಿಮಗೆ ಅಂಜನ್ ಅವರ ಬಗ್ಗೆ ಅವರ ಹಿನ್ನೆಲೆ ಏನು ಅವರು ಬೆಳೆದು ಬಂದ ದಾರಿ ಯಾವುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ.
ಅಂಜನ್ ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸಿನಿಮಾದ ಹೆಸರು ಯರ್ರಾಬಿರ್ರಿ ಇವರನ್ನ ರೂರಲ್ ಸ್ಟಾರ್ ರೂರಲ್ ಟೈಗರ್ ಎಂದು ಕರೆಯುತ್ತಾರೆ ಒಂದೇ ಒಂದು ಸಿನಿಮಾದ ಮೂಲಕ ಇಷ್ಟೊಂದು ಹೆಸರು ಗಳಿಸುವುದು ಕಷ್ಟ. ಯರ್ರಾಬಿರ್ರಿ ಸಿನಿಮಾದ ಹೆಸರನ್ನು ಬಿಡುಗಡೆ ಮಾಡಿದಾಗ ಜನರು ಆ ಹೆಸರನ್ನು ಬೈಕಿನ ಮೇಲೆ ಕಾರಿನ ಮೇಲೆ ಎಲ್ಲಾ ಕಡೆಗಳಲ್ಲಿಯೂ ಹಾಕಿಕೊಂಡು ಇವರಿಗೆ ತುಂಬಾ ಪ್ರೋತ್ಸಾಹ ನೀಡಿದ್ದರು.
ಇವರು ಮೂಲತಹ ಧಾರವಾಡದ ಕುಂದಗೋಳ ತಾಲೂಕಿನ ಗೌಡಿಗೆರೆಯವರು ತಂದೆ ಮೂಲತಹ ರೈತರು ತಾಯಿಯು ಅವರೊಟ್ಟಿಗೆ ಸರಿ ಕೆಲಸವನ್ನು ಮಾಡುತ್ತಾರೆ. ಇವರಿಗೆ ಒಬ್ಬ ತಮ್ಮ ಒಬ್ಬ ತಂಗಿ ಇದ್ದಾಳೆ ತಮ್ಮ ಹುಬ್ಬಳ್ಳಿಯಲ್ಲಿ ಕೂಲಿ ಕೆಲಸವನ್ನು ಮಾಡಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಹೋಗಬೇಕು ಅಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿತ್ತು. ಇವರು ಶಾಲಾದಿನಗಳಲ್ಲಿ ಒಬ್ಬ ಉತ್ತಮ ಕ್ರೀಡಾಪಟು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಬಡತನದಿಂದಾಗಿ ಇವರಿಗೆ ಕ್ರೀಡಾರಂಗದಲ್ಲಿ ಮುಂದುವರೆಯುವುದಕ್ಕೆ ಸಾಧ್ಯವಾಗಲಿಲ್ಲ ಚಿಕ್ಕವಯಸ್ಸಿನಲ್ಲಿಯೇ ಕಥೆ ಕವನಗಳನ್ನು ಬರೆಯುತ್ತಿದ್ದರು.
ಒಂದು ಕಥೆಯನ್ನು ಬರೆದುಕೊಂಡು ಬೆಂಗಳೂರಿಗೆ ಮೊದಲ ಬಾರಿಗೆ ಬರುತ್ತಾರೆ. ಆ ಸಮಯದಲ್ಲಿ ಇವರ ಕಡೆ ಕೇವಲ ನೂರಾ ಐವತ್ತು ರೂಪಾಯಿ ಮಾತ್ರ ಇರುತ್ತದೆ ಇವರಿಗೆ ಯಾವುದೇ ನಿರ್ದೇಶಕರನ್ನು ಭೇಟಿಯಾಗುವುದಕ್ಕೆ ಆಗದೆ ಮತ್ತೆ ಹಿಂತಿರುಗುತ್ತಾರೆ. ನಂತರ ಹತ್ತನೇ ತರಗತಿಯನ್ನು ಮುಗಿಸಿ ಮತ್ತೆ ಬೆಂಗಳೂರಿಗೆ ಬರುತ್ತಾರೆ ಆಗ ಮಾಸ್ಟರ್ ಕಿಶನ್ ಅವರನ್ನು ಭೇಟಿಯಾಗುತ್ತಾರೆ.
ಕೇರ್ ಆಫ್ ಫುಟ್ಪಾತ್ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಮಾಡುವ ಮೂಲಕ ತಮ್ಮ ಕೆರಿಯರನ್ನು ಪ್ರಾರಂಭಿಸುತ್ತಾರೆ. ಇವರ ತಂದೆ ಹಳ್ಳಿಗಳಲ್ಲಿ ನಾಟಕಗಳನ್ನು ಮಾಡುತ್ತಿದ್ದರು ಹಾಗಾಗಿ ಇವರಿಗೂ ಕೂಡ ನಟನಾ ಕಲೆ ತಾನಾಗಿಯೇ ಬಂದಿತ್ತು. ಯೂಟ್ಯೂಬ್ ನೋಡಿ ಡಾನ್ಸ್ ಕಲಿಯುತ್ತಾರೆ ನಂತರ ನಿರಂಜನ್ ಎನ್ನುವವರ ಬಳಿ ಹೋಗಿ ಕಲಿಯುತ್ತಾರೆ.
ನಂತರ ಇವರೇ ಡಾನ್ಸ್ ಕಲಿಸುವುದಕ್ಕೆ ಒಂದು ಕ್ಲಾಸನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಪ್ರಾರಂಭಿಸುತ್ತಾರೆ. ಇವರು ಸಿನಿಮಾರಂಗಕ್ಕೆ ಬಂದ ಮೂರು ವರ್ಷಗಳ ಕಾಲ ಯಾರಿಗೂ ವಿಷಯವನ್ನು ತಿಳಿಸಿರಲಿಲ್ಲ ವಿಷಯ ತಿಳಿದ ನಂತರ ಇವರ ಹಳ್ಳಿಯಲ್ಲಿ ಜನರು ಆಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತಾರೆ.ಆದರೆ ಇವರು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.
ಯರ್ರಾಬಿರ್ರಿ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿರುವುದು ಇವರ ಅದೃಷ್ಟ ಎಂದು ಹೇಳುತ್ತಾರೆ ಗೋವಿಂದದಾಸರು ನಿರ್ಮಾಣ ಮಾಡಿದ್ದಾರೆ ಅವರ ತಂದೆ ಎಚ್ ಡಿ ದಾಸರ್ ಈ ಸಿನಿಮಾದ ನಿರ್ಮಾಪಕರು. ಅವರು ಅಂಜನ್ ಅವರ ಕಲೆಯನ್ನು ಗುರುತಿಸಿ ಅವರನ್ನು ಕರೆದು ಒಂದು ಅವಕಾಶವನ್ನು ಕೊಡುತ್ತಾರೆ ಜೊತೆಗೆ ಇವರಿಗೆ ತುಂಬಾ ಸಹಾಯವನ್ನು ಕೂಡ ಮಾಡುತ್ತಾರೆ. ಇವರಿಗೆ ಉತ್ತರ ಕರ್ನಾಟಕದಲ್ಲಿ ತುಂಬಾ ಜನ ಅಭಿಮಾನಿಗಳಿದ್ದಾರೆ ತುಂಬಾ ಪ್ರೋತ್ಸಾಹ ನೀಡುತ್ತಾರೆ ಅವರ ಬಗ್ಗೆ ಇವರಿಗೆ ತುಂಬಾ ಹೆಮ್ಮೆಯಿದೆ.
ಯರ್ರಾಬಿರ್ರಿ ಸಿನಿಮಾ ಮಾಡುವುದಕ್ಕಿಂತ ಮೊದಲು ದೇವರಾಜ್ ಎನ್ ಕುಡೆನ್ ಎಂಬುವವರು ಇವರಿಗೆ ಮನಸ್ಸಿನ ಚಿತ್ತಾರ ಎನ್ನುವ ಶಾರ್ಟ್ ಮೂವಿ ಮಾಡುವುದಕ್ಕಾಗಿ ಕರೆಸಿಕೊಂಡು ಕಥೆ ಹೇಳುತ್ತಾರೆ ಇವರು ಒಪ್ಪಿಕೊಳ್ಳುತ್ತಾರೆ ಚಿತ್ರೀಕರಣ ಮಾಡುತ್ತಾ ಮಾಡುತ್ತಾ ಅದು ತುಂಬಾ ದೊಡ್ಡದಾಗುತ್ತದೆ ನಂತರ ಅದನ್ನು ಸಿನಿಮಾ ಮಂದಿರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಆದರೆ ಅದು ಅಷ್ಟು ಯಶಸ್ವಿ ಆಗುವುದಿಲ್ಲ.
ನಂತರ ಇವರು ಸ್ನೇಹಿತರು ಸೇರಿಕೊಂಡು ಅಂಜನ್ ಅವರನ್ನು ಬೆಳೆಸುವ ಉದ್ದೇಶದಿಂದ ಇವರ ಹೆಸರಿನಲ್ಲಿ ಸಂಘಗಳನ್ನು ಕಟ್ಟಿಕೊಳ್ಳುತ್ತಾರೆ ಜೊತೆಗೆ ರೂರಲ್ ಸ್ಟಾರ್ ಎಂದು ಕರೆಯುತ್ತಾರೆ ಶಿವಮೊಗ್ಗದಲ್ಲಿ ಇವರಿಗೆ ರೂರಲ್ ಟೈಗರ್ ಎನ್ನುವ ಬಿರುದು ಸಿಗುತ್ತದೆ. ಇವರು ಸುದೀಪ್ ಅವರನ್ನ ಆದರ್ಶವಾಗಿಟ್ಟುಕೊಂಡು ಬೆಳೆಯುತ್ತಾರೆ.
ಸುದೀಪ್ ದರ್ಶನ್ ಪುನೀತ್ ರಾಜ್ ಕುಮಾರ್ ರಕ್ಷಿತ್ ಶೆಟ್ಟಿ ಇವರುಗಳನ್ನು ತುಂಬಾ ಇಷ್ಟಪಡುತ್ತಾರೆ. ಕೇವಲ ಒಂದು ಸಿನಿಮಾದ ಮೂಲಕ ಇಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ ಅಂಜನ್ ಅವರಿಗೆ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಸಿಗಲಿ ಇವರು ಮಾಡುವ ಚಿತ್ರಗಳಿಗೆ ಹೆಚ್ಚಿನ ಮಟ್ಟದ ಯಶಸ್ಸು ಸಿಗಲಿ ಇವರೊಬ್ಬ ದೊಡ್ಡ ನಟನಾಗಿ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ.