ಬಹಳ ದಿನಗಳ ನಂತರ ಫ್ಯಾಮಿಲಿ ಆಡಿಯನ್ಸ್ ಎಲ್ಲರೂ ಕೂಡ ಒಟ್ಟಿಗೆ ಕುಳಿತುಕೊಂಡು ಯಾವುದೇ ಮುಜುಗರವಿಲ್ಲದೆ ನೋಡಬಹುದಾದಂತಹ ಪರಿಪೂರ್ಣ ಕನ್ನಡ ಸಿನಿಮಾ ರಿಲೀಸ್ ಆಗಿದೆ. ಹೌದು ನಾವು ಮಾತನಾಡುತ್ತಿರುವುದು ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಚಿತ್ರದ ಕುರಿತಂತೆ.

ಐದು ವರ್ಷಗಳ ನಂತರ ಮತ್ತೊಮ್ಮೆ ರಮೇಶ್ ಅರವಿಂದ್ ರವರು ನಿರ್ದೇಶಕನ ಪಾತ್ರವನ್ನು 100 ಚಿತ್ರದ ಮೂಲಕ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್ ರವರು ನಿರ್ದೇಶಕನಾಗಿ ನಟನಾಗಿ ಅದರಲ್ಲೂ ಕೂಡ ಪಾತ್ರದಲ್ಲಿ ಅಣ್ಣನಾಗಿ ಗಂಡನಾಗಿ ಸಮಾಜವನ್ನು ಕಾಯುವ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ಪರಿಪೂರ್ಣವಾಗಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಾಗಿ ಚಿತ್ರ ಎಲ್ಲೂ ಕೂಡ ಬೋರ್ ಹೊಡೆಸದೆ ಫಾಸ್ಟ್ ಸ್ಕ್ರೀನ್ ಪ್ಲೇ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿರುವ ಹಲವಾರು ಟ್ವಿಸ್ಟ್ ಗಳನ್ನು ನೀವು ಚಿತ್ರಮಂದಿರದಲ್ಲಿ ಹೋಗಿ ಚಿತ್ರವನ್ನು ನೋಡಿದ ಮೂಲಕ ಆನಂದಿಸ ಬೇಕಾಗಿದೆ. ಚಿತ್ರ ಇತ್ತೀಚಿನ ದಿನಗಳಲ್ಲಿ ನಡೆಯುವ ಸೈಬರ್ ಕ್ರೈಂ ಅಪರಾಧಗಳ ಕುರಿತಂತೆ ಪ್ರೇಕ್ಷಕರಿಗೆ ಅರಿವನ್ನು ಮೂಡಿಸುವ ಪ್ರಯತ್ನವಾಗಿದೆ ಎಂದರೆ ಕಂಡಿತವಾಗಿಯು ತಪ್ಪಾಗಲಾರದು.

ಚಿತ್ರ ಎನ್ನುವುದಕ್ಕಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ನಡೆಯುವ ಸೋಶಿಯಲ್ ಮೀಡಿಯಾ ಬಳಕೆ ಅತಿಯಾದರೆ ಏನಾಗುತ್ತದೆ ಎಂಬುದರ ಕುರಿತಂತೆ ಹೇಳುವ ಪ್ರಾಮಾಣಿಕ ಪ್ರಯತ್ನ ಎಂದು ಹೇಳಬಹುದಾಗಿದೆ. ಚಿತ್ರದ ಒಂದೊಂದು ದೃಶ್ಯವೂ ಕೂಡ ಪಕ್ಕಾ ಪೈಸಾ ವಸೂಲ್ ಎಂಬಂತೆ ಭಾಸವಾಗುತ್ತದೆ. ಆಕಾಶ ಶ್ರೀವಾತ್ಸವ್ ರವರ ಎಡಿಟಿಂಗ್ ಸತ್ಯ ಹೆಗಡೆಯವರ ಕ್ಯಾಮೆರಾ ಕೈಚಳಕ ಮತ್ತು ರವಿ ಬಸ್ರೂರು ರವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಮನೋರಂಜನೆಗೂ ಸೈ ಜನರಿಗೆ ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಸಂದೇಶವನ್ನು ಹೇಳೋಕೂ ಸೈ ಎಂಬಂತಿದೆ ಚಿತ್ರ. ಒಟ್ಟಾರೆಯಾಗಿ ಹೇಳಬಹುದಾದರೆ ಕನ್ನಡ ಚಿತ್ರರಂಗ ಒಂದು ಒಳ್ಳೆಯ ಚಿತ್ರಕ್ಕಾಗಿ ಕಾಯುತ್ತಿದ್ದ ಅದೇ ಸಮಯದಲ್ಲಿ 100 ಚಿತ್ರ ಬಿಡುಗಡೆಯಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಈ ಚಿತ್ರವನ್ನು ಕನ್ನಡಿಗರಿಗೆ ನೀಡಿದಕ್ಕಾಗಿ ರಮೇಶ್ ಅರವಿಂದ್ ಅವರಿಗೆ ಧನ್ಯವಾದಗಳನ್ನು ಹೇಳಬೇಕು.

Leave a Reply

Your email address will not be published. Required fields are marked *