ಭಜರಂಗಿ 2 ಸಿನಿಮಾ ಕುರಿತು ತೆಲಗು ನಟ ಅಲ್ಲುಅರ್ಜುನ್ ಮಾತು ಹೀಗಿದೆ

0 1

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಿರುವ ಭಜರಂಗಿ ಟು ಸಿನಿಮಾದ ಬಗ್ಗೆ ತೆಲುಗು ನಟರಾದ ಅಲ್ಲು ಅರ್ಜುನ್ ಅವರು ಮಾತನಾಡಿರುವುದು ಈಗ ಎಲ್ಲ ಕಡೆಗಳಲ್ಲೂ ತುಂಬಾ ಸುದ್ದಿಯನ್ನುಂಟು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ತುಂಬಾ ಹರಿದಾಡುತ್ತಿದೆ. ಅಲ್ಲು ಅರ್ಜುನ ಅವರು ಶಿವರಾಜಕುಮಾರ್ ಅವರು ನಟಿಸಿರುವ ಭಜರಂಗಿ ಟು ಸಿನಿಮಾದ ಬಗ್ಗೆ ಮಾತನಾಡಿರುವುದು ಕನ್ನಡಿಗರಿಗೆ ಹಾಗೂ ಚಿತ್ರತಂಡದವರಿಗು ತುಂಬಾ ಖುಷಿಯನ್ನುಂಟು ಮಾಡಿದೆ. ನಟ ನಾಗ ಶೌರ್ಯ, ರಿತು ವರ್ಮ ನಟನೆಯ ವರುಡು ಕಾವಲೇನು ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರ್ಜುನ್ ಅವರು ಆ ಚಿತ್ರಕ್ಕೆ ಶುಭಹಾರೈಸುವುದರ ಜೊತೆಗೆ ಉಳಿದ ಚಿತ್ರರಂಗಗಳ ಬಗ್ಗೆಯೂ ಕೂಡ ಮಾತನಾಡಿದ್ದಾರೆ.

ಕರೋನಾ ಸಮಯದಲ್ಲಿ ಎಲ್ಲ ಚಿತ್ರರಂಗಗಳು ಸಾಕಷ್ಟು ನಷ್ಟವನ್ನು ಅನುಭವಿಸಿದ್ದವು ಆದರೆ ಈಗ ಚಿತ್ರರಂಗದಲ್ಲಿ ಸ್ವಲ್ಪ ಚೇತರಿಕೆ ಕಂಡು ಬರುತ್ತಿದ್ದು ಎಲ್ಲಾ ಕಡೆಗಳಲ್ಲಿಯೂ ಚಿತ್ರಮಂದಿರಗಳಲ್ಲಿ ಜನರಿಗೆ ಚಲನಚಿತ್ರವನ್ನು ನೋಡುವುದಕ್ಕೆ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಅಲ್ಲು ಅರ್ಜುನ್ ಅವರು ಸಿನಿಮಾರಂಗ ಚೇತರಿಸಿಕೊಳ್ಳಲು ಏನೆಲ್ಲ ಮಾಡುತ್ತಿದೆ ಎನ್ನುವುದನ್ನು ಹೇಳುವುದರ ಜೊತೆಗೆ ಕರ್ನಾಟಕದಲ್ಲಿ ವೀಕ್ಷಕರಿಗೆ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ವೀಕ್ಷಿಸುವುದಕ್ಕೆ ಅವಕಾಶ ಸಿಗುತ್ತಿದೆ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಿರುವ ಭಜರಂಗಿ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಕರೋನಾ ನಂತರದಲ್ಲಿ ಚಿತ್ರರಂಗದಲ್ಲಿ ಕೆಲವು ಬದಲಾವಣೆಗಳಾಗಿವೆ ಕರೋನಾ ಬರುವುದಕ್ಕಿಂತಲೂ ಮೊದಲು ಸಿನಿಮಾರಂಗದಲ್ಲಿ ಇದ್ದ ಒಂದಷ್ಟು ವಿಚಾರಧಾರೆಗಳು ಈಗ ಬದಲಾಗಿವೆ. ಒಂದು ಚಿತ್ರ ರಂಗದವರು ಇನ್ನೊಂದು ಚಿತ್ರರಂಗದವರನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದ್ದು ಇದು ಒಳ್ಳೆಯ ಬದಲಾವಣೆ ಎಂದು ಕೂಡ ಹೇಳಬಹುದು. ಒಟ್ಟಾರೆಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಜರಂಗಿ ಟು ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರು ಶುಭ ಹಾರೈಸಿರುವುದು ಚಿತ್ರ ತಂಡದವರಿಗೆ ಮತ್ತು ಶಿವಣ್ಣ ಅಭಿಮಾನಿಗಳಿಗೆ ತುಂಬಾ ಖುಷಿಯನ್ನು ಉಂಟುಮಾಡಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.