ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವ ರೀತಿಯಲ್ಲಿ ಬೆಳೆದ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಯಾರೂ ಹೇಳುವುದೂ ಇಲ್ಲ ಯಾರಿಗೂ ಅಷ್ಟೊಂದು ಸರಿಯಾಗಿ ಯಾರಿಗೂ ತಿಳಿದಿರುವುದೂ ಇಲ್ಲ. ಸಾಮಾನ್ಯಾವಾಗಿ ಹಣ್ಣುಗಳ ಮೇಲೆ ಸ್ಟಿಕರ್ ಅಂಟಿಸಿಕೊಂಡು ಇರುವುದನ್ನ ನಾವು ಗಮನಿಸಿರುತ್ತೇವೆ. ಹಾಗಿದ್ದರೆ ಹಣ್ಣುಗಳ ಮೇಲೆ ಅಂಟಿಸಿರುವ ಸ್ಟಿಕರ್ ಗಳ ಅರ್ಥ ಏನು ಅನ್ನೋದನ್ನ ನೋಡೋಣ.
ಹಣ್ಣುಗಳ ಮೇಲೆ ಅಂಟಿಸಿರುವ ಸ್ಟಿಕರ್ ಗಳ ಮೇಲೆ ನಾಲ್ಕು ಅಂಕೆಯ ನಂಬರ್ ಗಳು ಇರುತ್ತವೆ. ಇವು ಸಾಮಾನ್ಯವಾಗಿ ಮೂರು ಅಥವಾ ನಾಲ್ಕರಿಂದ ಆರಂಭ ಆಗುತ್ತವೆ. ಈ ಹಣ್ಣುಗಳನನ್ನು ರಾಸಾಯನಿಕಗಳ ಜೊತೆಗೆ ಸಹಜ ಸಿದ್ಧ ಎರವಲು ಪಡೆದುಕೊಂಡ ಪದ್ಧತಿಯಿಂದ ಬೆಳೆದಿದ್ದಾರೆ ಎಂದು ಅರ್ಥ. ಇಪ್ಪತ್ತನೆ ಶತಮಾನದಲ್ಲಿ ಕೃಷಿ ಕ್ರಾಂತಿಯಿಂದ ಆದ ರಾಸಾಯನಿಕಗಳನ್ನು ಬಳಸಿರುತ್ತಾರೆ. ಈ ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ಅಷ್ಟೊಂದು ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ.
ಇನ್ನು ಹಣ್ಣುಗಳ ಮೇಲೆ ಹಾಕಿರುವ ಸ್ಟಿಕರ್ ಗಳ ಮೇಲೆ ಐದು ಅಂಕೆಗಳು ಇದ್ದು ಅವು ಒಂಭತ್ತರಿಂದ ಆರಂಭ ಆಗಿದ್ದರೆ ಆ ಹಣ್ಣನ್ನು ರೈತರು ತಯಾರಿಸಿದ ಎರವಲನ್ನು ಉಪಯೋಗಿಸಿ ಸಹಜ ಸಿದ್ದ ಪದ್ಧತಿಯಲ್ಲಿ ಬೆಳೆದಿರುತ್ತಾರೆ. ಆರ್ಗ್ಯಾನಿಕ್ ಪದ್ಧತಿಯಲ್ಲಿ ಬೆಳೆದಿರುವ ಈ ಹಣ್ಣುಗಳು ನಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡುವುದಿಲ್ಲ ಹಾಗೂ ನಮ್ಮ ದೇಹಕ್ಕೆ ಉತ್ತಮ ಪೌಷ್ಟಿಕಾಂಶವನ್ನು ಸಹ ಒದಗಿಸುತ್ತವೆ ಹಾಗೂ ಉತ್ತಮ ಗುಣಮಟ್ಟದಿಂದ ಸಹ ಕೂಡಿರುತ್ತವೆ.
ಹಣ್ಣುಗಳ ಮೇಲೆ ಇರುವ ಸ್ಟಿಕರ್ ಗಳ ಮೇಲೆ ಐದು ಅಂಕೆಗಳು ಇದ್ದು ಅವು ಎಂಟರಿಂದ ಆರಂಭ ಆಗಿದ್ದರೆ ಆ ಹಣ್ಣುಗಳು ಹೆಚ್ಚು ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಹಣ್ಣುಗಳು ಎಂದು ಅರ್ಥ. ಇಂತಹ ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟದಾದ ಪರಿಣಾಮವನ್ನು ಬೀರಬಹುದು. ಯಾವ ಯಾವುದೋ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ನಾವು, ನಾವು ತಿನ್ನುವ ಹಣ್ಣುಗಳ ಬಗ್ಗೆಯೂ ಸಹ ಸ್ವಲ್ಪ ತಿಳಿದುಕೊಂಡಿದ್ದರೆ ಉತ್ತಮ ಆರೋಗ್ಯವನ್ನ ರೂಪಿಸಿಕೊಳ್ಳಬಹುದು.