ಸಾಮಾನ್ಯವಾಗಿ ಮನೆಗಳಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಿಕನ್ ಮಟನ್ ಅಥವಾ ಮೀನು ಸಾರು ಮಾಡೆ ಮಾಡುತ್ತೇವೆ ಅಂದುಕೊಳ್ಳಿ. ಅಂತಹ ಸಂದರ್ಭದಲ್ಲಿ ಮಾಡುವಂತ ಅಡುಗೆ ತುಂಬಾನೇ ಚನಾಗಿರಲು ಹಾಗು ರುಚಿ ಬರಲು ಈ ಸುಲಭ ಟಿಪ್ಸ್ ಮಾಡಿದ್ರೆ ಒಳ್ಳೆಯದು ಅದು ಏನು ಅನ್ನೋದನ್ನ ತಿಳಿಸಿಕೊಡುತ್ತೇವೆ ಮುಂದೆ ನೋಡಿ.

ಮೀನು ಅಥವಾ ಮಾಂಸದ ಸರನ್ನು ಮಾಡುವಾಗ ಮೊದಲಿಗೆ ಸಾಂಬಾರ್ ಪದಾರ್ಥಗಳೊಂದಿಗೆ ಹುಣಸೆಹಣ್ಣಿನ ರಸವನ್ನು ಹಾಕದೆ ಸಾರನ್ನು ಒಲೆಯ ಮೇಲಿನಿಂದ ಇಳಿಸುವುದಕ್ಕೆ ಹತ್ತು ನಿಮಿಷಗಳ ಮೊದಲು ಹಾಕಿದರೆ ಮಾಂಸ ಅಥವಾ ಮೀನಿನ ರುಚಿ ಚನ್ನಾಗಿರುತ್ತದೆ.

ಮತ್ತೊಂದು ಸುಲಭವಾದ ಟಿಪ್ಸ್: ಬೇಸಿಗೆಯ ದಿನಗಲ್ಲಿ ಮನೆಗೆ ಬರುವಂತ ಅಥಿತಿಗಳಿಗೆ ನಿಂಬೆಹಣ್ಣಿನ ಶರಬತ್ ಮಾಡಿ ಕೊಡುತ್ತೇವೆ ಅಂತ ಸಂದರ್ಭದಲ್ಲಿ ಅಂದರೆ ನಿಂಬೆಹಣ್ಣಿನ ಶರಬತ್ ತಯಾರಿಸುವಾಗ ಅದಕ್ಕೆ ಕೆಲವು ಪುದೀನಾ ಎಲೆಗಳನ್ನು ಹಿಸುಕಿ ಹಾಕಿದರೆ ನಾಲಿಗೆಗೆ ರುಚಿಕರ, ಆರೋಗ್ಯಕ್ಕೆ ಹಿತಕರ.

ಮನೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ಚಟ್ನಿ ಮಾಡುವಾಗ ಈ ವಿಷಯ ತಿಳಿಯಿರಿ, ತೆಂಗಿನಕಾಯಿ ಚಟ್ನಿ ಮಾಡುವಾಗ ಅದಕ್ಕೆ ಹಾಕುವ ಪದಾರ್ಥಗಳೊಂದಿಗೆ ಸ್ವಲ್ಪ ಧನಿಯಾವನ್ನು ಸೇರಿಸಿದರೆ ಅದರ ರುಚಿ ಎರಡು ಪೆಟ್ಟಾಗಿರುತ್ತದೆ.

ಮನೆಯಲ್ಲಿ ಇಡ್ಲಿ ಮಾಡಿದ್ರೆ ರುಚಿ ಹೆಚ್ಚಿಸಲು ಈ ಟಿಪ್ಸ್: ಅಕ್ಕಿಯಿಂದ ಇಡ್ಲಿ ತರಿಯನ್ನು ಓಡಿಸುವಾಗ ಅದರೊಂದಿಗೆ ಸ್ವಲ್ಪ ಕಡಲೆಕಾಯಿ ಬೀಜವನ್ನು ಒಡೆಸಿರಿ. ಹೀಗೆ ಮಾಡೋದ್ರಿಂದ ಇಡ್ಲಿಯ ರುಚಿ ತುಂಬಾನೇ ಚನ್ನಾಗಿರುತ್ತದೆ.

Leave a Reply

Your email address will not be published. Required fields are marked *