ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ಖಾಲಿ ಇರುವಂತಹ ಗುಮಾಸ್ತರು ಹಾಗೂ ಜವಾನ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲು ಕರೆಯಲಾಗಿದೆ. ಈ ಹುದ್ದೆಯ ಕುರಿತಾಗಿ ಯಾವಾಗ ಅರ್ಜಿ ಸಲ್ಲಿಸಬೇಕು? ಹೇಗೆ ಮತ್ತು ಯಾರೆಲ್ಲ ಅರ್ಜಿ ಸಲ್ಲಿಸಬೇಕು? ಸಂಬಳ ಎಷ್ಟು ಈ ಎಲ್ಲವನ್ನೂ ವಿವರವಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಜಿ ಸಲ್ಲಿಸಬೇಕಾದ ಹುದ್ದೆಗಳ ಹೆಸರು ಈ ರೀತಿಯಾಗಿವೆ. ಅಭ್ಯರ್ಥಿಗಳು ಗುಮಾಸ್ತರು ಹಾಗೂ ಜವಾನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಒಟ್ಟೂ ನಾಲ್ಕು ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಮೂರು ಗುಮಾಸ್ತ ಹುದ್ದೆಗಳು ಮತ್ತು ಒಂದು ಜವಾನ ಹಿದ್ದೆ ಖಾಲಿ ಇರುತ್ತದೆ. ಇನ್ನು ಉದ್ಯೋಗ ಸ್ಥಳ ಎಲ್ಲಿ ಎಂದು ನೋಡುವುದಾದರೆ ಉತ್ತರಕನ್ನಡ ಜಿಲ್ಲೆಯ ಸಿರ್ಸಿ (ಶಿರಸಿ) ತಾಲೂಕು ಇಲ್ಲಿ ಉದ್ಯೋಗ ನಿರ್ವಹಿಸಬೇಕು. ಇನ್ನು ಈ ಎರಡೂ ಹುದ್ದೆಗಳಿಗೆ ವಿದ್ಯಾರ್ಹತೆ ಏನಿರಬೇಕು ಎಂದು ನೋಡುವುದಾದರೆ , ಗುಮಾಸ್ತ ಈ ಹುದ್ದೆಗೆ ಅಭ್ಯರ್ಥಿಗಳು ಪದವಿ ಮುಗಿಸಿರಬೇಕು ಹಾಗೂ ಜವಾನ ಹುದ್ದೆಗೆ ಹತ್ತನೇ ತರಗತಿ ಮುಗಿಸಿರಬೇಕೂ.

ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಹದಿನೆಂಟು ವರ್ಷ ವಯಸ್ಸು ಆಗಿರಬೇಕು ಹಾಗೂ ಸಾಮಾನ್ಯವರ್ಗದ ಜನರಿಗೆ ಗರಿಷ್ಠ ಮೂವತ್ತೈದು ವರ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ ನಲವತ್ತು ವರ್ಷ ವಯಸ್ಸಾಗಿರಬೇಕು. ಈ ಎರಡೂ ಹುದ್ದೆಗಳಿಗೆ ನೀಡುವ ವೇತನ ಎಷ್ಟು ಎಂದು ನೋಡುವುದಾದರೆ , ಗುಮಾಸ್ತ ಹುದ್ದೆಗೆ ತಿಂಗಳಿಗೆ ಹದಿನಾಲ್ಕು ಸಾವಿರ ರೂಪಾಯಿ ಹಾಗೂ ಜವಾನ ಹುದ್ದೆಗೆ ತಿಂಗಳಿಗೆ ಹತ್ತುಸಾವಿರ ರೂಪಾಯಿ ವೇತನ ನೀಡಲಾಗುವುದು. ಈ ಅಭ್ಯರ್ಥಿಗಳ ಆಯ್ಕೆಯ ವಿಧಾನ ನೋಡುವುದಾದರೆ, ಗುಮಾಸ್ತ ಹುದ್ದೆಗೆ ಲಿಖಿತ ಪರೀಕ್ಷೆಗಳನ್ನು ನಡೆಸಿ , ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಜವಾನ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆಗಳು ಇರುವುದಿಲ್ಲ. ಇನ್ನು ಪ್ರಮುಖ ದಿನಾಂಕಗಳನ್ನು ನೋಡುವುದಾದರೆ , ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 12/06/2021 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/07/2021 ಆಗಿರುತ್ತದೆ.

ಇನ್ನು ಅರ್ಜಿ ನಮೂನೆ ಪಡೆಯುವ ವಿಧಾನ ಹೇಗೆ ಎಂದು ನೋಡುವುದಾದರೆ, ಅಭ್ಯರ್ಥಿಗಳು ದಿನಾಂಕ 23/6/2021 ರ ಒಳಗಾಗಿ ಸಂಘದ ಮುಖ್ಯ ಕಚೇರಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಹತ್ತಿರ ಹುಬ್ಬಳ್ಳಿ ರಸ್ತೆ ಶಿರಸಿ ಕಚೇರಿ ಇಲ್ಲಿ ಭೇಟಿ ನೀಡಿ ಐವತ್ತು ರೂಪಾಯಿ ಪಾವತಿಸಿ ಅರ್ಜಿ ನಮೂನೆಯನ್ನು ಪಡೆಯಬಹುದು. ಇನ್ನು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ನೋಡುವುದಾದರೆ , ಅಭ್ಯರ್ಥಿಗಳು ತಮ್ಮದೇ ಬರವಣಿಗೆಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ , ವಿದ್ಯಾರ್ಹತೆ , ಅನುಭವ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಶುಲ್ಕದ ಡಿಡಿ ಜೊತೆಗೆ ದಿನಾಂಕ 08/07/2021 ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಳಾಸ ಹೇಗಿರುತ್ತದೆ.

ಅಧ್ಯಕ್ಷರು, ವಾ. ಕ. ರ. ಸಾ. ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘ ಶಿರಸಿ 581 402 ಉತ್ತರ ಕನ್ನಡ ಜಿಲ್ಲೆ. ಇಲ್ಲಿಗೆ ಅರ್ಜಿ ಕಳುಹಿಸಬೇಕು.

ಅರ್ಜಿ ಶುಲ್ಕ ಗುಮಾಸ್ತ ಹುದ್ದೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಒಂದು ಸಾವಿರ ರೂಪಾಯಿ ಹಾಗೂ ಸಾಮಾನ್ಯ ವರ್ಗದ ಜನರು ಎರಡು ಸಾವಿರ ರೂಪಾಯಿ , ಮತ್ತು ಜವಾನ ಹುದ್ದೆಗೆ ಒಂದುಸಾವಿರ ರೂಪಾಯಿ ಡಿಡಿಯನ್ನು ಅಧ್ಯಕ್ಷರು, ವಾ. ಕ. ರ. ಸಾ. ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘ ನಿ. ಶಿರಸಿ ಇವರ ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.

Leave a Reply

Your email address will not be published. Required fields are marked *