ಪತ್ನಿ ರಾಗಿಣಿ ಜೊತೆಗೆ ಪ್ರಜ್ವಲ್ ದೇವರಾಜ್ ಸಕತ್ ಸ್ಟೆಪ್

0 0

ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಪ್ರಜ್ವಲ್ ದೇವರಾಜ್ ಅವರು ಒಬ್ಬರು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ ದೇವರಾಜ್ ಅವರ ಮಗನಾದ ಪ್ರಜ್ವಲ್ ಅವರು ಕೂಡ ಒಬ್ಬ ಪ್ರತಿಭಾವಂತ ನಟ. ಪ್ರಜ್ವಲ್ ಹಾಗೂ ಅವರ ಪತ್ನಿ ರಾಗಿಣಿ ಅವರ ಜೀವನ ಹಾಗೂ ಸಿನಿ ಪಯಣದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಅದ್ಭುತ ನಟ ದೇವರಾಜ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಅವರ ಮಗನಾದ ಪ್ರಜ್ವಲ್ ದೇವರಾಜ್ ಅವರು ಕೂಡ ಕನ್ನಡ ಚಿತ್ರರಂಗದ ಉತ್ತಮ ನಟ. ಡೈನಾಮಿಕ್ ಪ್ರಿನ್ಸ್ ಎಂದೆ ಪ್ರಜ್ವಲ್ ಅವರನ್ನು ಚಿತ್ರರಂಗದಲ್ಲಿ ಕರೆಯುತ್ತಾರೆ. ಪ್ರಜ್ವಲ್ ಅವರು ಜುಲೈ 4, 1987 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಪ್ರಜ್ವಲ್ ಅವರ ತಂದೆ ದೇವರಾಜ್ ಹಾಗೂ ತಾಯಿ ಚಂದ್ರಲೇಖಾ. ಇವರಿಗೆ ಪ್ರಣಮ್ ಎಂಬ ಸಹೋದರನಿದ್ದಾನೆ. ಪ್ರಜ್ವಲ್ ಅವರು 2007 ರಲ್ಲಿ ಸಿಕ್ಸರ್ ಎಂಬ ಸಿನಿಮಾದಲ್ಲಿ ಮೊದಲಬಾರಿಗೆ ನಟಿಸಿದ್ದಾರೆ. ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಇತ್ತೀಚಿಗೆ ಅವರ ಇನ್ಸಪೆಕ್ಟರ್ ವಿಕ್ರಮ್ ಬಿಡುಗಡೆಯಾಯಿತು.

ಪ್ರಜ್ವಲ್ ಅವರಿಗೆ ಈಗ 33 ವರ್ಷ ಜಂಟಲ್ ಮ್ಯಾನ್, ಗೆಳೆಯ, ಗಂಗೆ ಬಾರೆ ತುಂಗೆ ಬಾರೆ, ಗುಲಾಮ, ಮೆರವಣಿಗೆ, ಧರ್ಮ, ಸೂಪರ್ ಶಾಸ್ತ್ರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಜ್ವಲ್ ಅವರು ದಿ ಬಾಸ್ ದರ್ಶನ್ ಅವರ ಆಪ್ತ ಸ್ನೇಹಿತರು. ದರ್ಶನ್ ಹಾಗೂ ಪ್ರಜ್ವಲ್ ಅವರು ಟ್ರಿಪ್ ಗೆ ಹೋಗುತ್ತಾರೆ. ಪ್ರಜ್ವಲ್ ಹಾಗೂ ರಾಗಿಣಿ ಚಂದ್ರನ್ ಲವ್ ಮಾಡುತ್ತಿದ್ದರು ನಂತರ ಮನೆಯವರ ಒಪ್ಪಿಗೆಯನ್ನು ಪಡೆದು 2015 ರಲ್ಲಿ ಮದುವೆಯಾದರು. ರಾಗಿಣಿ ಚಂದ್ರನ್ ಅವರು 12 ಜುಲೈ 1990 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಚಂದ್ರನ್ ಬಾಲು, ತಾಯಿ ರಮಾ. ರಾಗಿಣಿ ಅವರಿಗೆ ಕನಿಕಾ ಚಂದ್ರನ್ ಎಂಬ ಸಹೋದರಿ ಇದ್ದಾಳೆ. ರಾಗಿಣಿ ಅವರು ನಟಿ, ಮೊಡೆಲ್ ಹಾಗೂ ಡ್ಯಾನ್ಸರ್ ಅಲ್ಲದೆ ಅವರು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ಫಿಟ್ನೆಸ್ ತರಬೇತಿ ನೀಡುತ್ತಾರೆ.

ಪುನೀತ್ ರಾಜಕುಮಾರ್ ನಿರ್ಮಾಣದ ಲಾ ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ ಅವರು ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದ್ದಾರೆ. ರಚಿತಾ ರಾಮ್ ನಿರ್ಮಾಣದ ರಿಷಬ್ ಪ್ರಿಯ ಎಂಬ ಶಾರ್ಟ್ ಮೂವಿಯಲ್ಲಿ ರಾಗಿಣಿ ಅವರು ಸಂಪ್ರದಾಯಿಕ ಪಾತ್ರದಲ್ಲಿ ನಟಿಸಿದ್ದಾರೆ. ರಾಗಿಣಿ ಅವರಿಗೆ ತಮ್ಮ ಪತಿ ಪ್ರಜ್ವಲ್ ಅವರೊಂದಿಗೆ ನಟಿಸಬೇಕು ಎಂಬ ಆಸೆ ಇದೆ ಅದೇ ರೀತಿ ಪ್ರಜ್ವಲ್ ಅವರಿಗೂ ರಾಗಿಣಿ ಅವರೊಂದಿಗೆ ನಟಿಸಬೇಕು ಎಂಬ ಆಸೆ ಇತ್ತು. ರಾಗಿಣಿ ಅವರು ಇನ್ಸಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ರಾಗಿಣಿ ತಮ್ಮ ಪತಿ ಪ್ರಜ್ವಲ್ ಅವರೊಂದಿಗಿನ ಡ್ಯಾನ್ಸ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುತ್ತಾರೆ. ಅವರ ಕ್ಯೂಟ್ ಡ್ಯಾನ್ಸ್ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

Leave A Reply

Your email address will not be published.