ಮೂಲತಃ ಕರ್ನಾಟಕ ಸಂಜಾತರಾದ ರಾಜ ಮೌಳಿ ಹುಟ್ಟಿದ್ದು 1973ರ ಅಕ್ಟೋಬರ್ 10 ರಂದು ಕರ್ನಾಟಕದ ರಾಯಚೂರಿನಲ್ಲಿ, ಬಾಹುಬಲಿ ಎಂಬ ತಮ್ಮ ಅದ್ಬುತ ಚಿತ್ರವನ್ನು ನಮಗೆ ಕೊಡುಗೆಯಾಗಿ ನೀಡುವುದರ ಮೂಲಕ ಅವರ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿದರಲ್ಲದೆ ಇಡೀ ಪ್ರಪಂಚವೆ ಒಮ್ಮೆ ಭಾರತದತ್ತ ತಿರುಗಿ ನೋಡುವಂತೆ ಮಾಡಿದರು ಎಂದರೆ ತಪ್ಪಾಗಲಾರದು. ಯಾಕಂದ್ರೆ ಪ್ರಪಂಚದಾದ್ಯಂತ ಆ ಚಿತ್ರವನ್ನು ನೋಡಿದವರು ಅದನ್ನು ತಮ್ಮ ಹೃದಯಾಂತರಾಳದಿಂದ ಅಪ್ಪಿಕೊಂಡರು ಇವರು ಅತ್ಯದ್ಭುತ ಚಿತ್ರಗಳನ್ನು ನಮ್ಮ ಸಮಾಜಕ್ಕೆ ನೀಡುವಂತಹ ಒಬ್ಬ ಚತುರ ನಿರ್ದೇಶಕ ಮಾತ್ರವಲ್ಲದೇ ಸಹೃದಯವಂತನೂ ಕೂಡ ಹೌದು.
ನಿರ್ದೇಶಕ ರಾಜ ಮೌಳಿಯ ಪತ್ನಿ ರಮಾ ರಾಜ ಮೌಳಿ ಈ ದಂಪತಿಗಳಿಗೆ ಒಬ್ಬನೇ ಮಗ ಹಾಗೂ ಒಬ್ಬ ಮಗಳಿದ್ದಾಳೆ, ರಾಜ ಮೌಳಿಯವರ ಎಲ್ಲಾ ಚಿತ್ರಗಳಿಗೆ ಅತ್ಯುತ್ತಮ ಸಂಗೀತ ಸಂಯೋಜನೆಯನ್ನು ನೀಡುವ ಸಂಗೀತ ಸಂಜೋಜಕ ಕಿರುವಾಣಿಯವರ ಹೆಂಡತಿಯ ತಂಗಿಯೇ ರಾಜ ಮೌಳಿಯ ಧರ್ಮಪತ್ನಿ ರಾಮಾ ರಾಜ ಮೌಳಿ. ರಾಜ ಮೌಳಿಯವರ ಮೊದಲ ಚಿತ್ರ ಸ್ಟೂಡೆಂಟ್ ನಂಬರ್ ಒನ್ ಚಿತ್ರವನ್ನು ಮಾಡುವಂತಹ ಸಮಯದಲ್ಲಿ ರಾಜ ಮೌಳಿಯವರಿಗೆ ರಾಮಾ ಅವರ ಮೊದಲ ಪರಿಚಯವಾಗುತ್ತದೆ, ಆ ನಂತರ ಕೆಲ ದಿನಗಳಲ್ಲಿ ರಾಜ ಮೌಳಿಯವರ ಮನಸ್ಸಿನಲ್ಲಿ ರಾಮಾ ಅವರ ಮೇಲೆ ಪ್ರೇಮಾಂಕುರವಾಗುತ್ತದೆ ಆದರೆ ಅಷ್ಟಾರಲ್ಲಾಗಲೇ ರಮಾ ಅವರಿಗೆ ಮದುವೆಯಾಗಿ ಒಬ್ಬ ಮಗನಿರುತ್ತಾನೆ, ಅಲ್ಲದೇ ಅವರು ಅವರ ಗಂಡನಿಂದ ವಿಚ್ಛೇದನ ಪಡೆದು ದಾರವಾಹಿಗಳ ಬ್ಯಾಕ್ ಸ್ಟೇಜ್ ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದಕಾರಣ ರಾಜ ಮೌಳಿಯವರಿಗೆ ರಾಮಾ ಅವರ ಮುಂದೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಭಯವಿರುತ್ತದೆ ಕೊನೆಗೆ ಹೇಗೋ ಮಾಡಿ ಅವರು ಒಂದು ದಿನ ತಮಗೆ ರಾಮಾ ಮೇಲೆ ಇರುವ ಪ್ರೀತಿಯ ಬಗ್ಗೆ ಅವರ ಮುಂದೆ ಹೇಳಿಕೊಳ್ಳುತ್ತಾರೆ. ನಂತರ ಅದಕ್ಕೆ ಒಪ್ಪಿಕೊಂಡ ರಾಮಾ ಅವರು ರಾಜ ಮೌಳಿಯವರೊಟ್ಟಿಗೆ ವಿವಾಹವೂ ಕೂಡಾ ಆಗುತ್ತಾರೆ.
ರಾಮಾ ಅವರಿಗೆ ಆಗಾಗಲೇ ಒಬ್ಬ ಗಂಡು ಮಗನಿದ್ದ ಕಾರಣ ತನಗೆ ಮಕ್ಕಳು ಬೇಡವೆಂದು ಒಂದು ದೊಡ್ಡ ನಿರ್ಧಾರವನ್ನು ಕೈಗೊಳ್ಳುತ್ತಾರೆ ರಾಜ ಮೌಳಿ, ಆ ನಂತರದಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ಪಡೆದು ಅವರೇ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತನ್ನ ಪ್ರೇಯಸಿಯ ಮಗುವೇ ತನ್ನ ಮಗುವೆಂದು ಭಾವಿಸಿ ಸ್ವಂತ ತಂದೆಯಂತೆಯೇ ನೋಡಿಕೊಂಡು ಆಗಲೇ ಜೀವನದಲ್ಲಿ ಒಂದು ಬಾರಿ ಪೆಟ್ಟು ತಿಂದು ನೋವನ್ನು ಅನುಭವಿಸಿದ್ದ ರಾಮಾ ಅವರನ್ನು ತನ್ನ ಪತ್ನಿಯಾಗಿ ಸ್ವೀಕರಿಸಿ ಅವರನ್ನು ತನ್ನ ಹೃದಯದ ಅರಸಿಯಾಗಿ ಆರಾಧಿಸುತ್ತಾ ಇಂದಿಗೂ ಕೂಡಾ ಆದರ್ಶದ ಬದುಕನ್ನು ಸಾಗಿಸುತ್ತಿದ್ದಾರೆ.