ಈ ಲಾಕ್ ಡೌನ್ ಸಮಯದಲ್ಲಿ ಸೃಜನ್ ಲೋಕೇಶ್ ಪತ್ನಿ ಮಕ್ಕಳೊಂದಿಗೆ ಸುಂದರ ಕ್ಷಣಗಳು

0 2

ನೀಲ ಮೇಘ ಶಾಮ ಚಿತ್ರದ ಮೂಲಕ ಸೃಜನ್ ಲೋಕೇಶ್ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಸೃಜನ್ ದಿವಂಗತ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ ಹಾಗೂ ನಟ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಮಗ. ದರ್ಶನ್ ಜೊತೆ ಅಭಿನಯಿಸಿರುವ ಪೊರ್ಕಿ ಚಿತ್ರದಲ್ಲಿ ಅಭಿನಯ ಮಾಡಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ಅವರು ಕಿರುತೆರೆ ನಟಿಯಾದ ಗ್ರೀಷ್ಮ ಅವರ ಜೊತೆ ವಿವಾಹ ಆಗಿದ್ದಾರೆ. ಸೃಜನ್ ಮತ್ತು ಗ್ರೀಷ್ಮಾ ಅವರ ಮದುವೆ ಸಮಾರಂಭ ಬೆಂಗಳೂರಿನ ಬೆಸ್ಟ್ ಕ್ಲಬ್ ಕ್ರೇಜಿ ಪಾರ್ಕ್ ನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಪ್ರಸ್ತುತ ಸೃಜನ್ ಮತ್ತು ಗ್ರೀಷ್ಮಾ ಇಬ್ಬರೂ ಕಿರುತೆರೆಯಲ್ಲಿ ಮಿನುಗುತ್ತಿರುವ ತಾರೆಗಳು. ಸೃಜನ್ ಲೋಕೇಶ್ ಅವರು ಅವರ ಕುಟುಂಬದ ಜೊತೆ ಕಾಲ ಕಳೆದ ಕೆಲವು ಫೋಟೋಗಳನ್ನು ಇಲ್ಲಿ ಕಾಣಬಹುದು.

ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ ಆಗುತ್ತಿದ್ದ ಹಾಗೆ ಕಲರ್ಸ್ ವಾಹಿನಿಯ ತೆರೆ ಮೇಲೆ ಬಂದು ನಕ್ಕು ನಗಿಸುವ ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕರಾದ ಸೃಜನ್ ಲೋಕೇಶ್ ಅವರು ಸುಮಾರು ಆರು ವರ್ಷಗಳಿಂದ ಮಜಾ ಟಾಕೀಸ್ ಕಾರ್ಯಕ್ರಮವನ್ನ ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ ಹಾಗೂ ಜನರಿಗೆ ಒಳ್ಳೆಯ ಮನರಂಜನೆಯನ್ನು ಸಹ ನೀಡುತ್ತಿದ್ದಾರೆ. ಎಷ್ಟೋ ಜನರು ಮಜಾ ಟಾಕೀಸ್ ಕಾರ್ಯಕ್ರಮವನ್ನ ನೋಡದೆ ಮಲಗುವುದಿಲ್ಲಾ. ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಮೂಲಕ ಮಜಾ ಟಾಕೀಸ್ ಅಭಿಮಾನಿಗಳಿಗೆ ಹಾಸ್ಯ ರಸದೌತಣವನ್ನೇ ನೀಡುತಿತ್ತು. ಸೃಜನ್ ಲೊಕೇಶ್ ಅವರು ತಮ್ಮ ಮಾತಿನ ಶೈಲಿಯಲ್ಲಿಯೇ ಅಭಿಮಾನಿಗಳನ್ನು ನಗಿಸುತ್ತಾರೆ. ಇವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಹಾಗೂ ದರ್ಶನ್ ಅವರ ಆಪ್ತ ಸ್ನೇಹಿತ ಕೂಡಾ ಹೌದು. ಸೃಜನ್ ಲೋಕೇಶ್ ಅವರು ದರ್ಶನ್ ಅವರ ಜೊತೆಗೂ ಸಹ ಸಾಕಷ್ಟು ಚಲನ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ನಟನಾಗಿಯೂ ಕೂಡ ತನ್ನದೇ ಸ್ವಂತ ಚಿತ್ರದಲ್ಲಿ ಕೂಡಾ ಸೃಜನ್ ಲೋಕೇಶ್ ಅವರು ನಟನೆ ಮಾಡಿದ್ದಾರೆ.

ಇನ್ನು ಇವರ ಕುಟುಂಬದ ವಿಚಾರಕ್ಕೆ ಬಂದರೆ , ಸೃಜನ್ ಲೋಕೇಶ್ ಅವರ ಪತ್ನಿ ಕೂಡ ಕಿರುತೆರೆಯಲ್ಲಿ ಅಭಿನಯ ಮಾಡಿದ್ದಾರೆ ಆದರೆ ಮದುವೆಯ ನಂತರ ಗ್ರೀಷ್ಮಾ ಅವರು ಕಿರುತೆರೆಯಲ್ಲಿ ಯಾವುದೇ ಧಾರಾವಾಹಿಗಳಲ್ಲಿ ಆಗಲಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿಲ್ಲ. ಸೃಜನ್ ಲೋಕೇಶ್ ಅವರಿಗೆ ಇಬ್ಬರು ಗಂಡು ಮಕ್ಕಳು, ಮೊದಲನೆಯ ಮಗನ ಹೆಸರು ಸುಕೃತ್ ಎಂದು ಹಾಗೂ ಎರಡನೆಯ ಮಗನ ಹೆಸರು ಶ್ರೇಷ್ಠ್ ಎಂದು. ಇತ್ತೀಚಿನ ದಿವಸಗಳಲ್ಲಿ ಗ್ರೀಷ್ಮ ಅವರ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೇ ಹಾಗೆ ಈ ಲೇಖನದಲ್ಲಿ ಸೃಜನ್ ಲೋಕೇಶ್ ಅವರ ಮೊದಲನೇ ಮಗನಾದ ಸುಕೃತ್ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಸಹ ಈ ಲೇಖನದಲ್ಲಿ ನೀಡಲಾಗಿದೆ. ಇಲ್ಲಿಯವರೆಗೂ ಸೃಜನ್ ಲೋಕೇಶ್ ಅವರು ತಮ್ಮ ಮಕ್ಕಳ ಫೋಟೋವನ್ನು ಎಲ್ಲಿಯೂ ಸಹ ರಿವೀಲ್ ಮಾಡಿಲ್ಲ ಆದರೆ ಈ ಲೇಖನದಲ್ಲಿ ಸೃಜನ್ ಲೋಕೇಶ್ ಅವರ ಮಕ್ಕಳು ಹಾಗೂ ಪತ್ನಿ ಅವರ ಫೋಟೋಗಳನ್ನು ಇಲ್ಲಿ ಕಾಣಬಹುದು.

Leave A Reply

Your email address will not be published.