ಶ್ರೀರಂಗಪಟ್ಟಣದ, ಶ್ರೀರಂಗನಾಥ ದೇವಾಲಯದ ಇಂಟ್ರೆಸ್ಟಿಂಗ್ ಕಥೆ ಓದಿ

0 17

ಮೈಸೂರು ದೇವಾಲಯಗಳಿಗೆ ಹೆಸರುವಾಸಿ ಆಗಿದೆ. ಹೀಗೆ ಮೈಸೂರಿನಿಂದ ಒಂದು ತಾಸು ಪ್ರಯಾಣಿಸಿದರೆ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣ ಸಿಗುತ್ತದೆ. ಶ್ರೀರಂಗಪಟ್ಟಣ ಕೂಡಾ ದೇವಾಲಯಗಳಿಗೆ ಪ್ರಸಿದ್ದಿ ಪಡೆದಿದೆ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ತುಂಬಾ ಹೆಸರು ಪಡೆದಿದೆ. ಈ ದೇವಾಲಯದ ಎಷ್ಟೋ ಕಥೆಗಳನ್ನು ಕೇಳಿರಬಹುದು. ದೇವಾಲಯ ಕಟ್ಟಿದವರು ಯಾರು ಎಂಬ ವಿಷಯ ಮುಚ್ಚಿಡುತ್ತಲೆ ಬಂದಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಆದರೆ ಈ ಮಾಹಿತಿಯಲ್ಲಿ ರಂಗನಾಥ ದೇವಾಲಯವನ್ನು ನಿರ್ಮಿಸಿದವರ ಬಗ್ಗೆ ಹೇಳಲಾಗಿದೆ. ಹಾಗಾದರೆ ಅದೆನೆಂದು ನಾವು ತಿಳಿಯೋಣ.

ಕಾವೇರಿ ನದಿಯ ತೀರದ ಮೂರು ದ್ವೀಪದಲ್ಲಿ ಇರುವ ಪವಿತ್ರ ಸ್ಥಳ ಈ ಶ್ರೀರಂಗನಾಥ ದೇವಾಲಯ. ಇತಿಹಾಸಗಳ ಪುಟದಲ್ಲಿ ಸ್ಥಾನ ಪಡೆದ ಈ ಕ್ಷೇತ್ರವನ್ನು ಗೌತಮ ಸ್ಥಳ ಹಾಗೂ ಆದಿ, ಮಧ್ಯ ಹಾಗೂ ಅಂತ್ಯ ದೇವಾಲಯಗಳಲ್ಲೆ ಅತ್ಯಂತ ಶ್ರೇಷ್ಠ ಸ್ಥಾನ ಪಡೆದಿದೆ. ಈ ದೇವಾಲಯವು ಪುರಾತನ ನಂಟಿನೊಂದಿಗೆ ಕಾಲಜ್ಞಾನದ ನಂಟು ಕೂಡಾ ಇದೆ. ಗೋಪುರ ಪ್ರಳಯಕಾಲವನ್ನು ಸೂಚಿಸುತ್ತದೆ ಎಂಬ ನಂಬಿಕೆ ಕೂಡಾ ಇದೆ. 894 ರಲ್ಲಿ ಗಂಗರಸರ ಮಂತ್ರಿ ಆಗಿದ್ದ ತಿರುಮಲರಾಯ ಈ ದೇವಾಲಯದ ನಿರ್ಮಾಣ ಮಾಡಿದ್ದ ಎಂದು ದೇವಾಲಯದ ಹೊರಗಿನ ಫಲಕ ಹೇಳುತ್ತದೆ. ಹೊಯ್ಸಳರ ಅರಸ ವಿಷ್ಣುವರ್ಧನನ ಕಾಲದಲ್ಲಿ ಜೀರ್ಣೋದ್ಧಾರ ಗೊಂಡಿತ್ತು. ಹಾಗೆಯೆ ಕಾವೇರಿ ನದಿಯ ಎರಡು ದಂಡೆಯ ಎಂಟು ಹಳ್ಳಿಗಳನ್ನು ಮಧ್ವಾಚಾರ್ಯರ ಮಾರ್ಗದರ್ಶನದಿಂದ ಈ ದೇವಾಲಯಕ್ಕೆ ದತ್ತಿ ಕೊಟ್ಟಿದ್ದ ಎಂದು ಹೇಳಲಾಗುತ್ತದೆ. ರಂಗನಾಥ ಸ್ವಾಮಿಯ ದೇವಾಲಯದ ನಿರ್ವಹಣೆ ಈ ಗ್ರಾಮಗಳಿಂದ ಬಂದ ಹಣದಿಂದ ನಡೆಯುತ್ತಿಂತೆ. ಈಗಿರುವ ರಾಜ ಗೋಪುರದ ನಿರ್ಮಾಣ ಹಾಗೂ ಹೊರಾಂಗಣದ ಜೀರ್ಣೋದ್ಧಾರ ವಿಜಯನಗರದ ಅರಸರ ಕಾಲದಲ್ಲಿ ಆಯಿತು ಎಂದು ಹೇಳುತ್ತಾರೆ.

ವಿಜಯನಗರದ ಅರಸರ ಕಾಲದಲ್ಲಿಯೇ ಶ್ರೀರಂಗನಾಥನ ಕೋಟೆಯನ್ನು ಕಟ್ಟಲಾಗಿದೆ. ಈ ದೇವಸ್ಥಾನ ಅತ್ಯಂತ ಉನ್ನತ ಮಟ್ಟಕ್ಕೆ ವಿಜಯನಗರದ ಅರಸರ ಕಾಲದಲ್ಲಿ ತಲುಪಿತ್ತು. ಈ ಸಾಮ್ರಾಜ್ಯದ ಪತನದ ನಂತರ ಎಲ್ಲಾ ಪಾಳೆಯಗಾರರು, ಸಾಮಂತರು ಸ್ವತಂತ್ರರಾದರು. ವಿಜಯನಗರದ ವಂಶಸ್ಥರು ಇವರನ್ನೆಲ್ಲ ಸಮರ್ಥವಾಗಿ ಸಂಭಾಳಿಸಿದ್ದರು. ತಮ್ಮ ತಮ್ಮಲ್ಲಿ ರಾಜ್ಯದ ಆಡಳಿತ ಹಂಚಿಕೊಂಡು ಪೆನುಕೊಂಡ, ಚಂದ್ರಗಿರಿ, ಶ್ರೀರಂಗಪಟ್ಟಣ, ಹೀಗೆ ವಿಭಜನೆ ಆಗುತ್ತದೆ. ಈ ಸಮಯದಲ್ಲಿ ರಂಗರಾಯರ ಆಗಮನ ಆಗುತ್ತದೆ. ಸಾಮಾನ್ಯ ಶಕ 610 ರಲ್ಲಿ ಅನಾರೋಗ್ಯದ ಕಾರಣದಿಂದ ರಂಗರಾಯರ ಅಧೀನದಲ್ಲಿ ಇದ್ದ ಈಡಿ ಮೈಸೂರು ಸಂಸ್ಥಾನ ಓಡೆಯರ ಕೈ ಸೇರುತ್ತದೆ. ರಂಗನಾಯಕಿಯ ಪೂಜೆಗೆ ಕೊಡುತ್ತಿದ್ದ ಒಡವೆಯ ಸಲುವಾಗಿ ರಂಗರಾಯರ ಪತ್ನಿ ಅಲಮೇಲಮ್ಮನನ್ನು ಕೊಲ್ಲಲು ನೋಡಿದಾಗ ಅಲಮೆಲಮ್ಮಾ ರಾಜರಿಗೆ ಶಾಪ ನೀಡುತ್ತಾರೆ ಎಂಬ ಕಥೆಯು ಇದೆ. ನಂತರ ಮೈಸೂರಿನ ರಾಜಧಾನಿಯಾದ ಶ್ರೀರಂಗಪಟ್ಟಣ ಹೈದರಾಲಿ, ಟಿಪ್ಪು ಸುಲ್ತಾನ್ ರ ಹೆಜ್ಜೆ ಗುರುತು ಮೂಡಿಸಿಕೊಂಡಿತ್ತು. ಶ್ರೀ ರಂಗನಾಥ ಸ್ವಾಮಿ ದೇವಾಲಯ ಇವರೆಲ್ಲ ಕಾಲದಲ್ಲಿ ಸುಭಿಕ್ಷದಿಂದಲೆ ಇತ್ತು. ಕೆಲವರ ಪ್ರಕಾರ ಶ್ರೀ ರಂಗನಾಥ ಸ್ವಾಮಿ ಹೈದರಾಲಿಯ ಇಷ್ಟ ದೈವ ಆಗಿತ್ತಂತೆ.

ಶ್ರೀ ರಂಗನಾಥ ದೇವಾಲಯ 894 ರಿಂದ ಇಲ್ಲಿಯ ವರೆಗೆ ತನ್ನ ಹೆಸರು, ಸ್ಥಾನ ಉಳಿಸಿಕೊಂಡೆ ಬಂದಿದೆ. ಆದರೂ ಒಂದು ಅನುಮಾನ ಇದೆ. ದೇವಾಲಯ ಕಟ್ಟಿದ್ದು ಯಾರು ಎಂದು. ಆಗಿನ ಕಾಲದ ರಾಜ ನರ್ತಕಿ, ರಾಜ ವೇಶ್ಯೆ ಈ ದೇವಾಲಯಕ್ಕೆ ಬುನಾದಿ ಹಾಕಿದಳಂತೆ ಎಂದು ದೇವಾಲಯದಲ್ಲಿ ಇರುವ ಕೆಲವು ಪುಸ್ತಕಗಳಲ್ಲಿ ಉಲ್ಲೇಖವಿದೆ. ಅವಳ ಹೆಸರು ಹಂಬಿ. ಇವಳು ಶಕ ವರ್ಷ 817 ರಲ್ಲಿ ರಂಗನಾಥನ ಗರ್ಭಗುಡಿಯನ್ನು ಕಟ್ಟಿಸಿದ್ದಳಂತೆ. ಮುಜರಾಯಿ ಇಲಾಖೆ ಅಥವಾ ಪುರಾತತ್ವ ಇಲಾಖೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ದೇವಾಲಯದ ಎದುರು ಮಾರುವ ಪುಟ್ಟ ಪುಸ್ತಕದಲ್ಲಿ ಈ ಮಾಹಿತಿ ಸಿಗುತ್ತದೆ. ಒಂದು ವೇಳೆ ಹಂಬಿಯೆ ಈ ದೇವಾಲಯ ಕಟ್ಟಿದ್ದರೆ, ಶಾಸನದಲ್ಲಿ
ತಪ್ಪು ಮಾಹಿತಿ ನೀಡುವುದು ತಪ್ಪಾಗುತ್ತದೆ. ಆಗಿನ ಕಾಲದ ವೇಶ್ಯೆಯರು ತಾವು ದುಡಿದ ದುಡ್ಡಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದರು.

ಇದರ ಬಗ್ಗೆ ಯಾರೂ ಅಷ್ಟು ಮಾತನಾಡುತ್ತಿಲ್ಲ. ಕೇಳಿದರೆ ಆಧಾರ ಏನಿದೆ ಎಂದು ಕೇಳುತ್ತಾರೆ. ಆದರೆ ಅಲ್ಲಿಯ ಪುಸ್ತಕಗಳಲ್ಲಿ ಬರೆಯಲಾಗಿದ್ದು ಸುಳ್ಳಾಗುವುದಾ. ಇದು ವೇಶ್ಯೆ ಕಟ್ಟಿದ ದೇವಾಲಯ ಎಂದರೆ ರಂಗನಾಥ ಸ್ವಾಮಿ ಬೇಜಾರಾಗುವುದಿಲ್ಲ ಅಲ್ಲವೆ. ಇದರ ಮೇಲೆ ಸಂಶೋಧನೆ ನಡೆಸಿ ಸತ್ಯವಾದ ವಿಷಯದ ಅನಾವರಣ ಮಾಡಲಿ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave A Reply

Your email address will not be published.