ಜಗತ್ತಿನ ಎಷ್ಟೋ ದೇವಾಲಯಗಳಲ್ಲಿ ಶ್ರೀಮಂತ ದೇವಾಲಯ ಎಂದು ಪ್ರಸಿದ್ಧಿ ಪಡೆದಿರೊ, ತಿರುಪತಿಯ ವೆಂಕಟೇಶ್ವರನ ಹಣೆಗೆ ನಾಮ ಯಾಕೆ ಹಚ್ಚಿರುತ್ತಾರೆ ಇಂಟ್ರೆಸ್ಟಿಂಗ್.

0 1

ಜಗತ್ತಿನಲ್ಲಿ ಎಷ್ಟೋ ದೇವಾಲಯಗಳು ಶ್ರೀಮಂತ ದೇವಾಲಯ ಎಂದು ಪ್ರಸಿದ್ಧಿ ಪಡೆದಿವೆ. ಅವುಗಳಲ್ಲಿ ತಿರುಪತಿಯ ವೆಂಕಟೇಶ್ವರನನ್ನು ಜಗತ್ತಿನ ಅತ್ಯಂತ ಶ್ರೀಮಂತ ದೇವರಲ್ಲಿ ಒಬ್ಬ ಎಂಬ ಹೆಗ್ಗಳಿಕೆ ಇದೆ. ಅತಿ ಹೆಚ್ಚು ಭಕ್ತರನ್ನು ಸೆಳೆಯುವ ಸುಕ್ಷೇತ್ರ ಈ ತಿರುಮಲ. ಬಾಲಾಜಿ ಅಥವಾ ವೆಂಕಟೇಶ್ವರನು ಮಹಾವಿಷ್ಣುವಿನ ಅವತಾರವಾಗಿದೆ. ತಿರುಪತಿಯ ಸುತ್ತಲಿರುವ ಏಳು ಬೆಟ್ಟಗಳನ್ನು ಸಪ್ತಗಿರಿ ಎಂದು ಕರೆಯಲಾಗುತ್ತದೆ. ಈ ಏಳು ಬೆಟ್ಟಗಳು ಶೇಷನಾಗನ ಏಳು ಹೆಡೆಗಳೆಂದು ನಂಬಲಾಗಿದೆ. ಅವುಗಳೆಂದರೆ ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ,ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿ. ಏಳನೇ ಬೆಟ್ಟವಾದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿ ಇದೆ. ಈ ವೆಂಕಟೇಶ್ವರನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.

11ನೇ ಶತಮಾನದಲ್ಲಿದ್ದ ಸಂತ ರಾಮಾನುಜರು ತಿರುಪತಿಯ ಸಪ್ತಗಿರಿಯನ್ನೇರಿದಾಗ ಶ್ರೀನಿವಾಸ ದೇವರು ದರ್ಶನ ನೀಡಿದರು ಎಂಬ ಪ್ರತೀತಿ ಇದೆ. ಇಲ್ಲಿ ವ್ಯೆಕುಂಠ ಏಕಾದಶಿಯ ದಿನ ವೆಂಕಟೇಶ್ವರನ ದರ್ಶನ ಪಡೆದರೆ ಮಾಡಿದ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಅದಲ್ಲದೆ ಇಹಲೋಕ ತ್ಯಜಿಸಿದ ಬಳಿಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ದೇವಾಲಯದ ದೇವರಾದ ವೆಂಕಟೇಶ್ವರ ವಿಷ್ಣುವಿನ ಅವತಾರ. ಬಾಲಾಜಿ, ಗೋವಿಂದ, ಶ್ರೀನಿವಾಸ ಎಂಬ ಇತರೆ ಹೆಸರುಗಳಿಂದ ಕರೆಯಲಾಗುತ್ತದೆ. ತಿರುಪತಿ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಪ್ರಾಚೀನ ದೇವಾಲಯ. ಇದು ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತದೆ. ಭಾರತದಲ್ಲೇ ಅತಿ ಹೆಚ್ಚಿನ ದಾನ ರೂಪದಲ್ಲಿ ದೇಣಿಗೆಯನ್ನು ಸ್ವೀಕರಿಸುವ ದೇವಾಲಯ ಇದಾಗಿದೆ.

ಪ್ರತಿ ಗುರುವಾರ ಸ್ವಾಮಿಯ ಮೂರ್ತಿಯನ್ನು ಬಿಳಿಯ ಮರದ ಕೊರಡಿನಿಂದ ತೇದಿದ ಲೇಪನದಿಂದ ಅಲಂಕರಿಸಲಾಗುತ್ತದೆ.ಕಾರ್ಯಕ್ರಮದ ಬಳಿಕ ಈ ಒಣಗಿದ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾರಿಸಲಾಗುತ್ತದೆ.ಆಗ ಒಳಭಾಗದಲ್ಲಿ ಲಕ್ಷ್ಮೀ ದೇವಿಯ ಚಿತ್ರದ ಬಿಂಬ ಇರುವುದು ಗೋಚರಿಸುತ್ತದೆ ಎನ್ನುವುದು ಒಂದು ಅದ್ಭುತ ಸಂಗತಿ ಆಗಿದೆ. ಶ್ರೀನಿವಾಸನ ವಿಗ್ರಹ ಸ್ವಯಂ ಉದ್ಬವ ಮೂರ್ತಿಯಾಗಿದ್ದು ಇದನ್ನು ಯಾರು ಕೂಡ ಸ್ಥಾಪನೆ ಮಾಡಿಲ್ಲ.

ಹಿಂದೆ ಶ್ರೀನಿವಾಸ ಹುತ್ತದಲ್ಲಿರುವಾಗ ಸಾಕ್ಷಾತ್ ಶಿವ ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಾನೆ. ರಾಜಾ ಚೋರನ ಅರಮನೆ ಹಸುಗಳನ್ನು ನೋಡಿಕೊಳ್ಳುತ್ತಿದ್ದ ದನಗಾಯಿಗೆ ಈ ಕಾಮಧೇನು ಹಸು ಹಾಲು ಕೊಡದೆ ಇದ್ದದ್ದು ಅವಮಾನಕ್ಕೆ ಕಾರಣವಾಗುತ್ತದೆ.ಒಂದು ದಿನ ದನಗಾಯಿ ಕಾಮಧೇನುವನ್ನು ಹಿಂಬಾಲಿಸಿ ಹೋದಾಗ ಹಸುವು ಶ್ರೀನಿವಾಸನಿಗೆ ಹಾಲುಣಿಸುವ ದ್ರಶ್ಯವನ್ನು ನೋಡಿ ಕೋಪದಿಂದ ಹಸುವನ್ನು ಹೊಡೆಯಲು ಕೊಡಲಿಯಿಂದ ಮುಂದಾದಾಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ.ನಂತರ ಶ್ರೀನಿವಾಸನ ಪರಮಭಕ್ತೆ ನೀಲಾದೇವಿ ತನ್ನ ಕೂದಲನ್ನು ಕತ್ತರಿಸಿ ಶ್ರೀನಿವಾಸನಿಗೆ ಜೋಡಿಸುತ್ತಾಳೆ.ಆಗ ಶ್ರೀನಿವಾಸ ಒಂದು ವರ ಕೊಡುತ್ತಾನೆ. ಅದೇನೆಂದರೆ ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಕೊಡುವ ಕೂದಲು ನಿನ್ನ ಮೂಲಕವೇ ನನಗೆ ಅರ್ಪಿತವಾಗಲಿ ಎಂದು. ಈಗಲೂ ನೀಲಾದೇವಿ ಜೋಡಿಸಿದ ಕೂದಲು ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ.

ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ಬೆಟ್ಟದ ಪಟ್ಟಣದಲ್ಲಿದೆ. ಇದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 291km ದೂರದಲ್ಲಿ ಇದ್ದರೆ ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡದಿಂದ 684km ದೂರದಲ್ಲಿ ಇದೆ. ಕಲಬುರ್ಗಿಯಿಂದ ಸುಮಾರು 616km ದೂರದಲ್ಲಿ ಇದೆ. ಇವೆಲ್ಲ ಸಂಗತಿಗಳನ್ನು ತಿಳಿದು ಒಂದು ಬಾರಿಯಾದರೂ ತಿರುಪತಿಗೆ ಹೋಗಿ ನಮ್ಮ ಪುಣ್ಯವನ್ನು ಹೆಚ್ಚಿಸಿಕೊಂಡು ಪಾಪವನ್ನು ತೊಳೆದುಕೊಳ್ಳೋಣ.

Leave A Reply

Your email address will not be published.