ಸಂಪತ್ತು ಯಾರಿಗೆ ತಾನೆ ಬೇಡ ಹೇಳಿ ಪ್ರತಿಯೊಬ್ಬರಿಗೂ ಬೇಕು ಕೇವಲ ವೈರಾಗಿಗಳು ಮಾತ್ರ ಇದನ್ನು ಬೇಡ ಎನ್ನುವರು. ಆದರೆ ಇಂತಹ ಸಂಪತ್ತು ಸಮೃದ್ಧಿ ಬೇಕೆಂದರೆ ಹಿಂದೂ ಧರ್ಮದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ ಲಕ್ಷ್ಮಿ ದೇವಿಯು ಒಲಿದವರಿಗೆ ಸಂಪತ್ತು ಹಾಗೂ ಸಮೃದ್ಧಿಯು ಒಲಿಯುವುದು ಹಾಗಾದರೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಅಮರತ್ವದ ಆಸೆಯಲ್ಲಿ ಸಮುದ್ರವನ್ನು ಕಡೆದರು ಸುರಾಸುರರು ಹುಟ್ಟಿದ್ದು ಹಾಲಾಹಲ. ಜಗದ ಒಳಿತಿಗಾಗಿ ವಿಷ ಸೇವಿಸಿ ದೇವರದೇವ ಮಹಾದೇವ ಶ್ರೀಕಂಠನಾದ. ಶಿವ ಶ್ರೀಕಂಠನಾದ ಮರುಗಳಿಗೆಯಲ್ಲಿ ಹುಟ್ಟಿದವರು ಶ್ರೀಲಕ್ಷ್ಮೀ. ದೇವ ದಾನವರಿಗೆಲ್ಲ ಬೇಕಾದ ಮಹಾಮಾತೆ ಧನ ಕನಕಗಳ ದಯಾಮಯಿ. ಆದರೆ ಲಕ್ಷ್ಮೀ ಎಲ್ಲರಿಗೂ ಒಲಿಯುವುದಿಲ್ಲ. ಬಡತನ ಸಿರಿತನದ ಅಸಹಜ ಅಸಮತೋಲನವೇಕಿದೆ ಈ ಜಗತ್ತಿನಲ್ಲಿ. ಈ ಪ್ರಶ್ನೆಗೆ ಉತ್ತರ ಲಕ್ಷ್ಮೀ ಹುಟ್ಟಿದ ದಿನವೇ ಸಿಕ್ಕಿತ್ತಾ ಅದನ್ನು ಅರ್ಥಮಾಡಿಕೊಳ್ಳದೆ ಮನುಷ್ಯ ಇಂದಿಗೂ ಒದ್ದಾಡುತ್ತಿದ್ದಾನಾ ಎಂಬುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಸಮುದ್ರದಿಂದ ಉದಯಿಸಿದ್ದು ಕಮಲ ಕಮಲದಿಂದ ಉದಯಿಸಿದ್ದು ಶ್ರೀಮದ್ ಮಹಾಲಕ್ಷ್ಮೀ ಲಕ್ಷ್ಮೀಯನ್ನು ಕಂಡೊಡನೆ ಎಲ್ಲರಿಗೂ ಎಲ್ಲವು ಮರೆತೇ ಹೋದವು ಸುರಭಿ ಕಾಮಧೇನು ಕಲ್ಪವೃಕ್ಷ ಐರಾವತ ಅಪ್ಸರೆಯರು ಚಂದ್ರ ಕೌಸ್ತುಭ ಸಾರಂಗ ಉಚ್ಚೆಶ್ರವಸ್ ಕುದುರೆ ಅಮೃತ ಹೀಗೆ ಅಷ್ಟು ಹೊತ್ತು ಮಥಿಸಿದ ಮಹಾ ಸಿದ್ದಿಗಳೆಲ್ಲವು ಮರೆತೇ ಹೋದವು. ಎಲ್ಲರ ಕಣ್ಣು ಖೊರೈಸಿತು ಮಹಾಲಕ್ಷ್ಮೀಯ ಮಹಾಬೆಳಕು ರತ್ನವರ್ಣದ ಸೀರೆಯಲ್ಲಿ ಮಿನುಗುತ್ತಿದ್ದ ಮಹಾತಾಯಿಯನ್ನು ನೋಡಲು ಎರಡುಕಣ್ಣು ಸಾಲದು ಎನಿಸಿ ಬಿಟ್ಟಿತು.

ಒಂದು ಕ್ಷಣ ಸುತ್ತಲೂ ನೋಡಿದಳು ಮಹಾತಾಯಿ ಎಲ್ಲರ ಕಣ್ಣುಗಳಲ್ಲಿ ತನ್ನ ಮೇಲೆ ಹಕ್ಕು ಸಾಧಿಸಬೇಕೆಂಬ ವಾಂಚೆ ಕುಣಿಯುತ್ತಿತ್ತು. ಆದರೆ ಆ ಎರಡು ಕಣ್ಣುಗಳ ಹೊರತಾಗಿ. ಗರುಡನ ಮೇಲೆ ವಿರಾಜಮಾನವಾಗಿ ಹಸನ್ಮುಖಿಯಾಗಿ ನಕ್ಕಿದ್ದು ಮತ್ಯಾರು ಅಲ್ಲ ಮಹಾವಿಷ್ಣು ಲಕ್ಷ್ಮೀಗೆ ಪರಮಾನಂದ. ಹುಟ್ಟಿದ ತಕ್ಷಣವೇ ತನ್ನನ್ನು ಪಡೆಯಲೇ ಬೇಕೆಂದು ನೋಡಿದ ದುರಾಸೆಪೂರಿತ ಅಷ್ಟೊಂದು ನೇತ್ರಗಳ ಕೆಸರಿನ ಸರೋವರದ ನಡುವೆ ಕಮಲದಂತೆ ಕಂಡ ಮಹಾವಿಷ್ಣು. ಆ ಕಮಲ ನಯನಗಳಲ್ಲಿ ಹಕ್ಕು ಚಲಾವಣೆಯ ಆಸೆ ಇರಲಿಲ್ಲ ಅಲ್ಲಿ ಕಂಡದ್ದು ನಿಷ್ಕಲ್ಮಶ ಪ್ರೀತಿ ಮಾತ್ರ. ಪ್ರೀತಿಗೆ ಮನುಷ್ಯರೇನು ದೇವತೆಗಳು ಸೊಲಲೇಬೇಕು.

ಸೋತಳು ಸಮುದ್ರತನಯಿ ಹುಟ್ಟುತ್ತಲೇ ಸಮುದ್ರ ದೇವ ಕೈಗಿಟ್ಟಿದ್ದ ನೀಲಿ ಕಮಲಗಳ ವೈಜಯಂತಿ ಮಾಲೆಯನ್ನು ವಿಷ್ಣುವಿನ ಕೊರಳಿಗೆ ಹಾಕಿದರು ಮಾತೆ ಲಕ್ಷ್ಮೀ. ನಾರಾಯಣನಾಗಿದ್ದ ವಿಷ್ಣು ಲಕ್ಷ್ಮೀನಾರಾಯಣರಾದರು ವಿಷ್ಣುವಿನ ವಕ್ಷಸ್ಥಲ ಸೇರಿಕೊಂಡ ಲಕ್ಷ್ಮೀ ಶ್ರೀವತ್ಸ ಚಿನ್ಹೆ ಆದರು ಶ್ರೀಪತಿಯ ಹೃದಯ ಲಕ್ಷ್ಮೀ ನಿವಾಸವಾಯಿತು. ಹೀಗೆ ಲಕ್ಷ್ಮೀ ನಾರಾಯಣ ವಿವಾಹದೊಂದಿಗೆ ಸಮಸ್ತ ಲೋಕದಲ್ಲಿ ಸಿರಿ ಸಂಪತ್ತು ತುಂಬಿ ತುಳುಕಿತು ಲೋಕ ಲೋಕಗಳು ಸಮೃದ್ಧಿಯಾದವು.

ನಿಮಗೆ ಗೊತ್ತಿರಲಿ ದೇವಾಗಣದ ಯಾವುದೇ ಕಾರ್ಯದಲ್ಲೂ ಮನುಕುಲದ ಕಲ್ಯಾಣ ಅಡಗಿರುತ್ತದೆ ಎನ್ನುತ್ತವೆ ಪೌರಾಣಿಕ ಕಥಾನಕಗಳು. ಭೂಲೋಕಕ್ಕೆ ಲಕ್ಷ್ಮೀ ನಾರಾಯಣರ ಕೊಡುಗೆ ಏನು ಎಂದರೆ ಶ್ರೀಮಾನ್ ಮತ್ತು ಶ್ರೀಮತಿ ಇದನ್ನು ನೀವು ಸಾಕಷ್ಟು ಸಾರಿ ಕೇಳಿರುತ್ತೀರಿ ಕೆಲವು ಸಲ ಬಳಸಿರುತ್ತೀರಿ. ಆಹ್ವಾನಗಳಲ್ಲಿ ಭಾಷಣಗಳಲ್ಲಿ ಇದು ಬಳಕೆ ಆಗುವ ಪದ. ಆದರೆ ಈ ಪದಗಳ ಮೂಲ ಉದ್ದೇಶ ಬಹುತೇಕರಿಗೆ ಗೊತ್ತಿರುವುದಿಲ್ಲ.

ಸಂಪ್ರದಾಯಗಳ ಪ್ರಕಾರ ಪುರುಷರಿಗೆ ಶ್ರೀಮಾನ್ ಮತ್ತು ಮಹಿಳೆಯರಿಗೆ ಶ್ರೀಮತಿ ಅಂತಕರೆಯಲಾಗುತ್ತದೆ ಪೌರಾಣಿಕ ಕಥೆಗಳ ಪ್ರಕಾರ ಅವರಿಗೆ ಶ್ರೀದೇವಿಯ ಕೃಪೆ ಇರುತ್ತದೆ ಕಾರಣ ಇವರಿಗೆ ಕುಟುಂಬದ ಅಭಿವೃದ್ಧಿಯ ಮತ್ತು ಸಮೃದ್ಧಿಯ ಹೊಣೆ ಇವರ ಮೆಲಿರುತ್ತದೆ. ಕುಟುಂಬದ ಸಮೃದ್ಧಿಯಾದರೆ ಸಮಾಜ ಸಮಾಜದ ಸಮೃದ್ಧಿಯಾದರೆ ದೇಶ ದೇಶದ ಸಮೃದ್ಧಿಯಾದರೆ ಜಗತ್ತು ಸಮೃದ್ಧಿಯಾಗುತ್ತದೆ ಎಂಬುದು ಶ್ರೀ ನಿಯಮ. ಹೇಗೆ ಲಕ್ಷ್ಮೀ ನಾರಾಯಣರು ದೇವಲೋಕದ ದಾರಿದ್ರ್ಯವನ್ನು ನಿಗಿ ಸಮೃದ್ಧಿ ಸಂಪತ್ತನ್ನು ತುಂಬಿದರು.

ನರ ರೂಪದಲ್ಲಿರುವ ಪ್ರತಿ ಲಕ್ಷ್ಮಿನಾರಾಯಣರಿಗು ಈ ಶಕ್ತಿಯನ್ನು ಕರುಣಿಸಿದ್ದರು ಶ್ರೀಪತಿ ಹಾಗಾಗಿ ವಿವಾಹಿತ ಪುರುಷ ಹಾಗು ಮಹಿಳೆಯರಿಗೆ ಶ್ರೀ ಶ್ರೀಮತಿ ಎಂದು ಕರೆಯಲಾಗುತ್ತದೆ. ಬ್ರಹ್ಮಾಂಡದಲ್ಲಿ ಓಂಕಾರಕ್ಕೆ ಎಷ್ಟು ಮಹತ್ವ ಇದೆಯೋ ಈ ಶ್ರೀಕಾರಕ್ಕು ಅಷ್ಟೇ ಮಹತ್ವವಿದೆ. ಓಂ ಎನ್ನುವುದು ಹೇಗೆ ಅಭೌತಿಕ ಅಶಾರಿರಿಕ ಅದೃಶ್ಯ ಪಾರಮಾರ್ಥಿಕ ಮೂಲವೊ ಹಾಗೆಯೇ ಶ್ರೀ ಎಂದರೆ ಭೌತಿಕ ಶಾರೀರಿಕ ದೃಶ್ಯ ಸುಖ ಸಮೃದ್ಧಿಗಳ ಮೂಲ. ಶ್ರೀ ಎನ್ನುವ ಪದದಲ್ಲೆ ಸಂಪತ್ತು ಸಮೃದ್ಧಿ ಅಧಿಕಾರ ಎಲ್ಲವೂ ಕೂಡ ಇದೆ ಶ್ರೀ ಎಂಬ ಪದವನ್ನು ಮನಸಾರೆ ಹೇಳಿ ನೋಡಿ ಅಥವಾ ಬರೆದು ನೋಡಿ ಅಲ್ಲೊಂದು ದಿವ್ಯತೆ ನಿಮಗೆ ಖಂಡಿತ ಅನುಭವವಾಗುತ್ತದೆ.

ಅಷ್ಟ ಲಕ್ಷ್ಮೀಯಾಗಿ ಆದಿಯಿಂದ ಅಂತ್ಯದವರೆಗೂ ನಮ್ಮ ಜೊತೆಯಲ್ಲೇ ಇದ್ದಾಳೆ ಮಹಾಲಕ್ಷ್ಮೀ ನಮಗೆ ಜನ್ಮ ನೀಡುವ ಮಹಾತಾಯಿ ಆದಿಲಕ್ಷ್ಮೀಯಲ್ಲದೆ ಮತ್ತೇನು. ಆದರೆ ಎಷ್ಟೋ ಜನರ ಮನಸ್ಸಿನಲ್ಲಿ ಕೊನೆಯವರೆಗೂ ಆದಿಲಕ್ಷ್ಮೀ ಪೂಜಿತಳಾಗಿ ಉಳಿಯುವುದಿಲ್ಲ. ಅಸಹನೆ ಅವಮಾನ ಅಸಡ್ಡೆ ಅಲಕ್ಷ್ಯಗಳಿಂದ ನೊಂದು ಬಿಡುತ್ತಾಳೆ ಆದಿಲಕ್ಷ್ಮೀ.

ಇನ್ನು ಧನಲಕ್ಷ್ಮೀ ಅಂದರೆ ಯಾವುದು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಪ್ರೀತಿ ಇಲ್ಲ ಎಂದಮೇಲೆ ಹಣಗಳಿಸುವ ಕನಸನ್ನು ಕಾಣುವ ಅರ್ಹತೆ ನಮಗಿರುವುದಿಲ್ಲ. ಸಂತಾನ ಕೊಡುವವಳು ಸಂತಾನ ಲಕ್ಷ್ಮೀ ಎಂದರು ಏಷ್ಟೋ ಜನರಿಗೆ ತಮಗೆ ಹುಟ್ಟಿದ ಹೆಣ್ಣುಮಗುವಿನಲ್ಲಿ ಲಕ್ಷ್ಮೀ ಕಾಣಿಸುವುದಿಲ್ಲ. ಇನ್ನು ಸೋತು ಸುಣ್ಣವಾಗಿ ಹತಾಶನಾಗಿರುವ ಗಂಡಸಿಗೆ ಧೈರ್ಯ ಸ್ಫೂರ್ತಿ ತುಂಬುವ ಗೆಳತಿ ಹೆಂಡತಿ ವೀರ ಲಕ್ಷ್ಮೀಯಾಗಿರುತ್ತಾಳೆ. ಇವಳೇ ಜೀವನದ ವಿಜಯ ಲಕ್ಷ್ಮೀಯಾಗುವುದು.

ಇಂತಹ ಲಕ್ಷ್ಮೀಯರನ್ನು ನೋಡಬೇಕೆಂದರೆ ಅಂಬಾನಿಯ ಮುಖ ನೋಡಿ. ಅಷ್ಟು ದೂರ ಯಾಕೆ ನಮ್ಮದೇ ನಾಡಿನ ವಿಜಯ್ ಸಂಕೇಶ್ವರ್ ಅವರ ಮುಖ ನೋಡಿ ಇಂತಹ ಸಾಧಕರ ತಾಯಿ ಪತ್ನಿ ಮಗಳು ಇವರ ಮುಖದಲ್ಲಿ ಇರುವ ನಗು ತೃಪ್ತಿ ಸಮಾಧಾನವೇ ನಿಜ ರೂಪದ ಲಕ್ಷ್ಮೀ. ಹಾಗಾದರೆ ಅವಿವಾಹಿತ ರತನ್ ಟಾಟಾ ಕಥೆ ಏನು ಎಂದು ಪ್ರಶ್ನೆ ಮಾಡುವ ವಿತಂದವಾಡಗಳು ನಮ್ಮ ಸುತ್ತಮುತ್ತ ಇರುತ್ತವೆ ಆದರೆ ಟಾಟಾರನ್ನು ಹೆತ್ತ ತಾಯಿ ಆದಿಲಕ್ಷ್ಮೀ ಅಲ್ಲವೆ. ಬರೀ ಶ್ರೀಮಂತರ ಹೆಸರನ್ನು ಹೇಳಿ ಮೂರ್ಖರನ್ನಾಗಿ ಮಾಡಬೇಡಿ ಎಂದು ಕೆಲವರು ಹೇಳಬಹುದು.

ಕೇರಳದ ಗುಡ್ಡಗಾಡಲ್ಲಿ ತನ್ನ ಮಗಳು ಶ್ರೀಧನ್ಯಾರನ್ನು ಐ ಎ ಎಸ್ ಅಧಿಕಾರಿಯನ್ನಾಗಿ ಮಾಡಿದ ಬಡ ತಂದೆಯ ಕಣ್ಣಿಗೆ ಕಂಡಿತಾ ವಿದ್ಯಾಲಕ್ಷ್ಮೀ ಕಂಡಿರುತ್ತಾಳೆ ಇಂತಹ ಅಸಂಖ್ಯಾತ ಬಡವರ ಗುಡಿಸಲು ಲಕ್ಷ್ಮೀಯರ ಬೆಳಕಿನಿಂದ ಬೆಳಗಿದೆ. ಆದರೆ ಇದ್ಯಾವುದನ್ನೂ ಅರಿಯದ ನಮ್ಮ ಗಂಡು ಜೀವ ಹೆಣ್ಣನ್ನು ಲೆಕ್ಕ ಹಾಕುತ್ತಾರೆ ಹಕ್ಕು ಸಾಧಿಸುವುದಕ್ಕೆ ಮುಂದಾಗುತ್ತಾರೆ ಕಿತ್ತು ತಿನ್ನುವುದಕ್ಕೆ ಮುಂದಾಗುತ್ತಾರೆ ಗೊಳಾಡಿಸುತ್ತಾರೆ.

ಇಷ್ಟಾದ ಮೇಲೂ ಲಕ್ಷ್ಮೀ ಚಂಚಲೆ ಒಂದುಕಡೆ ನಿಲ್ಲುವುದಿಲ್ಲ ಎಂದು ದುರುತ್ತೇವೆ. ಯಾರದ್ದೋ ತಾಯಿಯನ್ನು ತಂಗಿಯನ್ನು ಹೆಂಡತಿಯನ್ನು ಅವಾಚ್ಯ ಶ್ದಗಳಿಂದ ಸಂಭೋದಿಸುವ ವಿಕಾರ ವಿಕೃತ ಮನಸ್ಸುಗಳ ನಡೆ ನುಡಿ ಸರಿಯಾದರೆ ಕಂಡಿತವಾಗಿ ಲಕ್ಷ್ಮೀ ನಿಮ್ಮ ಮನೆಗೆ ಮೊದಲ ಚರಣ ಇಟ್ಟರು ಅಂತ ಅರ್ಥ ಮುಂದೆ ನಿಮಗೆ ದರ್ಶನ ಆಗೇಆಗುತ್ತದೆ

ಕಮಲದಳಗಳ ಮೇಲೆ ವಿರಾಜಮಾನಳಾಗಿ ಕುಳಿತ ತಾಯಿಯ ಮುಖದಲ್ಲಿ ಪ್ರಸನ್ನತೆ ಬೆಂಕಿಯಂತ ಪರಿಶುದ್ಧತೆ ಚಂದ್ರನಂತಹ ಪ್ರಶಾಂತತೆ ಸೂರ್ಯನಂತಹ ಪ್ರಕಾಶ ಎಲ್ಲವೂ ನಿಮಗೆ ಗೋಚರವಾಗುತ್ತದೆ. ಅಂದು ಸಮುದ್ರ ಮಂಥನದಂದು ಶ್ರೀಹರಿ ತೋರಿದ ನಿಷ್ಕಲ್ಮಶ ಪ್ರೀತಿ ನಿಮ್ಮಕಣ್ಣಲ್ಲಿ ಕಂಡರೆ ಕಂಡಿತಾ ಸಿರಿ ನಿಮ್ಮ ಕೊರಳಿಗೆ ವೈಜಯಂತಿ ಮಾಲೆ ಹಾಕುವುದರಲ್ಲಿ ಅನುಮಾನವಿಲ್ಲ ನೀವೇ ಯೋಚನೆ ಮಾಡಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!