ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದಿ ಹೊಂದಿರುವಂತ ದೇವಾಲಯಗಳಲ್ಲಿ ಹೊಂದಾಗಿರುವಂತ ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಇಲ್ಲಿ ಪ್ರಸಾದವನ್ನು ಸ್ವೀಕರಿಸಿ ಮರಳುತ್ತಾರೆ. ಆದ್ರೆ ಇಲ್ಲಿ ಮತ್ತೊಂದು ವಿಷಯ ಏನು ಅನ್ನೋದನ್ನ ಹೇಳುವುದಾದರೆ ಭಕ್ತರ ಅನುಕೂಲಕ್ಕಾಗಿ ದರ್ಶನ ಸಮಯದಲ್ಲಿ ಬದಲಾವಣೆಯನ್ನು ಮಾಡಲಾಗಿದೆ.
ಹೌದು ಭಕ್ತರ ಅನುಕೂಲಕ್ಕಾಗಿ ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ ಆಗಾಗಿ ಎಲ್ಲರಿಗು ದರ್ಶನ ಭಾಗ್ಯ ಸಿಗಲಿ ಅನ್ನೋ ಕಾರಣಕ್ಕೆ ಇದೆ ಮಾರ್ಚ್ 3 ರಿಂದ ದರ್ಶನ ಸಮಯವನ್ನು ಹೆಚ್ಚಿಸಲಾಗಿದೆ. ಬೆಳಗ್ಗೆ 6:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 5 ಗಂಟೆಯಿಂದ 8:30ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಇನ್ನು ವಿಶೇಷವಾಗಿ ಭಾನುವಾರ, ಸೋಮವಾರ, ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಭಕ್ತದಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಕಾರಣಕ್ಕೆ ಬೆಳಗ್ಗೆ 6:30 ರಿಂದ 4ವರೆಗೆ ಹಾಗೂ ಸಂಜೆ 5 ಗಂಟೆಯಿಂದ 9 ಗಂಟೆವರೆಗೆ ದೇವರ ದರ್ಶನ ಮಾಡಬಹುದಾಗಿದೆ ಎಂಬುದಾಗಿ ತಿಳಿಯಲಾಗಿದೆ. ಒಟ್ಟಾರೆಯಾಗಿ ಈ ಹಿಂದೆ ಇದ್ದಂತಹ ದರ್ಶನ ಸಮಯಕ್ಕಿಂತ ಈಗ ಹೆಚ್ಚು ಅವಧಿ ದರ್ಶನಕ್ಕೆ ಮೀಸಲಿಡಲಾಗಿದೆ. ಇದರ ಸದುಪಯೋಗವನ್ನು ಭಕ್ತಾದಿಗಳು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಬಗ್ಗೆ ತಿಳಿದುಕೊಳ್ಳಲಿ.