ಅರ್ಜುನನಿಗೆ ಶ್ರೀ ಕೃಷ್ಣ ಹೇಳಿದ ಗೆಲುವಿನ ಪಾಠ ನಮಗೂ ಸ್ಫೂರ್ತಿಧಾಯಕ ನೋಡಿ

0 9

ಜೀವನದಲ್ಲಿ ಸೋಲನ್ನು ಯಾರು ಒಪ್ಪಿಕೊಳ್ಳಲು ತಯಾರಾಗುವುದಿಲ್ಲ. ಆದರೆ ಈ ಸೋಲು ಸರಿಯಾದ ಮಾರ್ಗದರ್ಶನ ಕೊರತೆಯಿಂದ ಬರುತ್ತದೆ. ಯಶಸ್ಸಿಗಾಗಿ ಯಾವ ರೀತಿಯ ಶ್ರಮದ ಅವಶ್ಯಕತೆ ಇರುತ್ತದೆ, ಸೋಲು ಗೆಲುವಿನ ಮಹತ್ವವೇನು ಎಂಬುವುದನ್ನು ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯ ಸಾರದಿಂದ ತಿಳಿಯೋಣ.

ಕೆಲವರು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದರು ಸೋಲೆ ಸಿಗುತ್ತಿರುತ್ತದೆ. ಇಂತಹ ಸನ್ನಿವೇಶ ಯಾಕೆ ಒದಗಿಬರುತ್ತದೆ ಎನ್ನುವುದು ದೊಡ್ಡ ಪ್ರಶ್ನೆ. ಮಾನವತಾವಾದಿ, ರಾಜತಂತ್ರ ನಿಪುಣ ಎಂಬ ಬಿರುದು ಇರುವ ಶ್ರೀಕೃಷ್ಣನ ಉಪದೇಶವಾದ ಭಗವದ್ಗೀತೆ ಜನರ ಜೀವನದ ಗತಿಯನ್ನು ಬದಲಿಸುವ ಶಕ್ತಿ ಹೊಂದಿದೆ. ಭಗವದ್ಗೀತೆಯ ಎಲ್ಲ ಸಾರವನ್ನು ಒಮ್ಮೆಲೇ ಹೇಳುವುದು ಅಸಾಧ್ಯ. ಆದ್ದರಿಂದ ಕೆಲವು ಆಯ್ದ ಅಂಶಗಳು ಅದು ಜೀವನ ಹಾಗೂ ಯಶಸ್ಸಿಗೆ ಪೂರಕವಾದ ಅಂಶಗಳ ಬಗೆಗೆ ಇಲ್ಲಿ ತಿಳಿಯುವ. ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಮಾತುಗಳಲ್ಲಿ ಅತಿಯಾಗಿ ಪ್ರಸಿದ್ಧಿ ಪಡೆದಿದ್ದು, ಕೆಲಸ ಹಾಗೂ ಪ್ರಯತ್ನ ನಿನ್ನದು ಪ್ರತಿಫಲವನ್ನು ನನಗೆ ಬಿಡು ಎಂಬುದಾಗಿದೆ. ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು, ಅದರ ಪ್ರತಿಫಲದ ಬಗೆಗಿನ ಚಿಂತೆ ಮಾಡಬಾರದು. ಕೆಲಸ ಮಾಡುತ್ತ ಬೇರೆಯ ಯೋಚನೆ ಮಾಡುತ್ತಿದ್ದರೆ, ಆ ಕೆಲಸದ ಮೇಲಿನ ಏಕಾಗ್ರತೆ ಕಳೆದುಕೊಳ್ಳುತ್ತೆವೆ. ಇದರಿಂದ ಕೆಲಸದ ಮೇಲೆ ಪರಿಣಾಮ ಬೀರಿ ತಕ್ಕ ಪ್ರತಿಫಲ ಸಿಗುವುದಿಲ್ಲ. ಕೆಟ್ಟ ಕೆಲಸಗಳಿಂದ ಸಿಗುವುದು ಕ್ಷಣಿಕ ಸುಖ ಮಾತ್ರವೇ.

ಮನುಷ್ಯನಲ್ಲಿ ಪಂಚೆಂದ್ರಿಯಗಳ ಪ್ರಾಮುಖ್ಯತೆ ಬಹಳವಿದೆ. ಈ ಪಂಚೆಂದ್ರಿಯಗಳ ಕೆಲಸದ ಆಧಾರವೆ ನಮ್ಮ ಸುಖ ದುಃಖಗಳ ನಿರ್ಧರಿಸುತ್ತವೆ. ಧೂಮಪಾನ, ಮಧ್ಯಪಾನ, ಕಳ್ಳತನ ಇವುಗಳು ಪ್ರಾರಂಭದಲ್ಲಿ ಸುಖ ನೀಡುತ್ತದೆ. ಆದರೆ ಕೊನೆಯಲ್ಲಿ ನೋವು ಕೊಡುತ್ತದೆ. ಆದರೆ ಆದಷ್ಟು ದಾನ ಮಾಡುವುದು, ಸೇವೆ ಮಾಡುವುದು, ಪ್ರೀತಿಸುವುದು ಮನಸ್ಸಿನ ಖುಷಿಗೆ ಕಾರಣವಾಗುತ್ತದೆ. ದಾರಿಯ ಆಯ್ಕೆ ನಮ್ಮದಾಗಿರುತ್ತದೆ. ಜೀವನ ಸಮತೋಲನವಾಗಿರಬೇಕು. ಜೀವನದ ಎಲ್ಲ ಕೆಲಸಗಳು ಸಮತೋಲನದಿಂದ ಇರಬೇಕು. ನಿದ್ದೆ, ಊಟ ಇವೆಲ್ಲವೂ ಸಮ ಪ್ರಮಾಣದಲ್ಲಿ ಇರಬೇಕು ಎಂದು ಅರ್ಜುನನಿಗೆ ಕೃಷ್ಣ ಹೇಳುತ್ತಾನೆ. ಯಾವುದೆ ಆದರೂ ಹೆಚ್ಚಾದರೆ ಇಲ್ಲವೆ ಕಡಿಮೆ ಆದರೆ ತೊಂದರೆ ಪ್ರಾರಂಭವಾಗುತ್ತದೆ. ಎಲ್ಲವೂ ಸಮ ಪ್ರಮಾಣದಲ್ಲಿ ಇದ್ದರೆ ಯಾವುದೆ ತೊಂದರೆಗೂ ಅವಕಾಶ ಇರುವುದಿಲ್ಲ. ಬದುಕು ಸುಂದರವಾಗಿರುತ್ತದೆ‌.

ಮನಸ್ಸನ್ನು ನಾವು ನಿಯಂತ್ರಿಸಬೇಕು. ಇಲ್ಲವಾದರೆ ಮನಸ್ಸೆ ನಮ್ಮನ್ನು ನಿಯಂತ್ರಿಸುತ್ತದೆ. ನಾವೂ ಯಾವುದೆ ತಪ್ಪು ಕಾರ್ಯಗಳನ್ನು ಮಾಡುವಾಗ ಅದನ್ನು ನಿಲ್ಲಿಸಬೇಕೆಂದು ಅನಿಸುತ್ತದೆ. ಆದರೆ ನಿಲ್ಲಿಸಲು ನಮ್ಮಿಂದ ಆಗುವುದಿಲ್ಲ. ಮನಸ್ಸು ನಮ್ಮನ್ನು ನಿಯಂತ್ರಣ ಮಾಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಮನಸ್ಸು ಹಾಗೂ ಹೃದಯದ ಮಾತುಗಳನ್ನು ಸಮವಾಗಿ ಆಲಿಸಬೇಕು. ಮನಸ್ಸು ಹಾಗೂ ಹೃದಯದ ಮಾತುಗಳಲ್ಲಿ ಯಾವುದು ಸರಿ ಎಂದು ನಿರ್ಧರಿಸಿ ಹೆಜ್ಜೆ ಇಡಬೇಕು. ನಕಾರಾತ್ಮಕ ಯೋಚನೆ ಹಾಗೂ ಅನುಮಾನಗಳನ್ನು ಹೊಂದಿರುವ ವ್ಯಕ್ತಿಗಳು ಸಂತೋಷದ ಕ್ಷಣಗಳನ್ನು ಅನುಭವಿಸುವಲ್ಲಿ ಸೋಲುತ್ತಾರೆ. ನಾವು ನೋಡುವ ರೀತಿಯಲ್ಲಿ ಜಗತ್ತು ಕಾಣಸಿಗುತ್ತದೆ. ಯೋಚನೆಯನ್ನು ಬದಲಿಸಿದಾಗ ಜಗತ್ತಿನ ಸೌಂದರ್ಯ ಕಾಣಿಸುತ್ತದೆ. ಅನುಮಾನದಿಂದ ಯಾವ ಸಂಬಂಧವೂ ಉಳಿಯುವುದಿಲ್ಲ. ಅದರಂತೆ ನಕಾರಾತ್ಮಕ ಆಲೋಚನೆ ಇದ್ದರೆ ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮ ಖುಷಿಯನ್ನು ನಮ್ಮ ಅಹಂಕಾರವೆ ಕಸಿಯುತ್ತದೆ. ಅಹಂಕಾರ ಹೊಂದಿದವರಿಂದ ಖುಷಿಯಾಗಿರಲು ಸಾಧ್ಯವಿಲ್ಲ. ಯಾವತ್ತೊ ಒಂದು ದಿನ ಜಗತ್ತಿನ ಎಲ್ಲ ಬಂಧಗಳು ಮುಗಿದು ಹೋಗಲೆಬೇಕು. ಅಹಂಕಾರದಿಂದ ಯಾರನ್ನೂ ಕೀಳಾಗಿ ಕಾಣಬಾರದು. ಪ್ರತಿಯೊಬ್ಬರನ್ನು ಸಮವಾಗಿ ಕಂಡಾಗ, ಸಾಧನೆ ಮಾಡಲು ಹಾಗೂ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಯಶಸ್ಸು ಕೆಲಸವನ್ನು ಪ್ರೀತಿಸಿದಾಗ ಸಿಗುತ್ತದೆ. ನಾವು ಇಷ್ಟಪಟ್ಟು ಮಾಡುವ ಕೆಲಸವನ್ನು ಆಯ್ದುಕೊಳ್ಳಬೇಕು. ಆಗ ಯಶಸ್ಸು ನಮ್ಮದಾಗುತ್ತದೆ. ಯಾವ ಕೆಲಸದಲ್ಲಿ ನಮಗೆ ಆಸಕ್ತಿ ಇಲ್ಲವೊ ಆ ಕೆಲಸದಿಂದ ನಾವು ಖುಷಿಯಾಗಿರಲು ಸಾಧ್ಯವಿಲ್ಲ. ಆ ಕೆಲಸದಲ್ಲಿ ನೈಪುಣ್ಯತೆಯನ್ನು ಪಡೆಯಲು ಸಾಧ್ಯವಿಲ್ಲ. ನಾವು ಇಷ್ಟ ಪಟ್ಟ ಕೆಲಸವಾದರೆ ನಿಪುಣತೆಯ ಜೊತೆಗೆ ಸಂತೋಷವೂ ಸಿಗುತ್ತದೆ.

ಇವುಗಳು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಉಪದೇಶಗಳಲ್ಲಿ ಕೆಲವು ಮಾತ್ರವೆ. ಇಂತಹ ಅದೆಷ್ಟೋ ಜೀವನದ ದಾರಿಗಳು ಭಗವದ್ಗೀತೆಯಲ್ಲಿದೆ. ಇಂತಹ ಜೀವನದ ಮಾರ್ಗದರ್ಶನದಲ್ಲಿ ನಡೆದು ಯಶಸ್ಸು ನಮ್ಮದಾಗಿಸಿಕೊಳ್ಳೊಣ.

Leave A Reply

Your email address will not be published.