ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಾಗ್ಗೆ ಏರಿಕೆ ಆಗುತ್ತಿರುವುದರಿಂದ ದೇಶೀಯ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ನಾನ್‌ ಸಬ್ಸಿಡಿ ಮತ್ತು ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾರೇ ಸಿಲಿಂಡರ್ ಪಡೆಯಬೇಕೆಂದರೂ ಏಕರೂಪದ ಬೆಲೆ ಪಾವತಿಸಬೇಕು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿತ್ತು. ಆದರೆ ಈಗ ಪ್ರತಿ ತಿಂಗಳು ಗ್ಯಾಸ್ ಬುಕ್ ಮಾಡುವವರಿಗೆ ಸರ್ಕಾರದ ಕಡೆಯಿಂದ ಬಂಪರ್ ಗುಡ್ ನ್ಯೂಸ್ ದೊರೆತಿದೆ ಎಂದೇ ಹೇಳಬಹುದು. ಇನ್ನುಮುಂದೆ ಸಬ್ಸಿಡಿ ಬದಲಿಗೆ ಭರ್ಜರಿ ಕ್ಯಾಶ್ ಬ್ಯಾಕ್ ಸಿಗಲಿದೆ. ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ದೇಶದಲ್ಲಿ ಈಗ ಗ್ಯಾಸ್ ಬಳಕೆ ಮಾಡದೆ ಇರುವವರ ಮನೆಯನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಗ್ಯಾಸ್ ಬಳಕೆ ಮಾಡೇ ಮಾಡುತ್ತಾರೆ. ಇನ್ನು ದೇಶದಲ್ಲಿ ಯಾವಾಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ಬಂದಿತೋ ಅಂದಿನಿಂದ ದೇಶದಲ್ಲಿ ಎಲ್ಲಾ ಬಡಜರ ಮನೆಯಲ್ಲಿ ಸಹ ಗ್ಯಾಸ್ ಬಂದವು ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಈ ಮೊದಲು ನಾವು ಖರೀದಿ ಮಾಡುವ ಗ್ಯಾಸ್ ಸಿಲಿಂಡರ್ ಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಹಣ ಬರುತ್ತಿತ್ತು, ಆದರೆ ಕಳೆದ ಐದು ತಿಂಗಳಿಂದ ಯಾರಿಗೂ ಸಬ್ಸಿಡಿ ಹಣಬರುತ್ತಿಲ್ಲ ಮತ್ತು ಸಬ್ಸಿಡಿ ಹಣವನ್ನ ಕೇಂದ್ರ ರದ್ದು ಮಾಡಿತ್ತು. ಇಲ್ಲಿ ನಾವು ಈಗ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು ಇನ್ನುಮುಂದೆ ಜನರು ಸಬ್ಸಿಡಿ ಹಣದ ಬದಲಾಗಿ ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದಾಗಿದೆ. ಹಾಗಾದರೆ ಈ ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ? ಮತ್ತು ಈ ಕ್ಯಾಶ್ ಪಡೆಯಲು ಏನು ಮಾಡಬೇಕು? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ತಿಳಿಯೋಣ. ಈ ಹಿಂದೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಹಣವನ್ನ ನೀಡುತ್ತಿತ್ತು, ಆದರೆ ಈಗ ಸಬ್ಸಿಡಿ ಹಣಕ್ಕೂ ಅಧಿಕವಾಗಿ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ಇನ್ನು ಈ ಕ್ಯಾಶ್ ಬ್ಯಾಕ್ ನೀಡುವುದು ಕೇಂದ್ರ ಸರ್ಕಾರ ಅಲ್ಲ ಸರ್ಕಾರದ ಬದಲಾಗಿ ಈ ಕ್ಯಾಶ್ ಬ್ಯಾಕ್ ನೀಡುವುದು ಅಮೆಜಾನ್ ಆಗಿದೆ. ಇನ್ನು ಈ ಕ್ಯಾಶ್ ಬ್ಯಾಕ್ ಅನ್ನು ಪಡೆಯಲು ನೀವು ಮೊದಲು ಅಮೆಜಾನ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇನ್ನು ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿದ ನಂತರ ನೀವು ಅಮೆಜಾನ್ ಪೆ ಆಯ್ಕೆ ಮಾಡಬೇಕು ಮತ್ತು ನಂತರ ಬಿಲ್ ಪಾವತಿ ಆಯ್ಕೆ ಮಾಡಬೇಕು ಮತ್ತು ಬಿಲ್ ಪಾವತಿಯಲ್ಲಿ ಗ್ಯಾಸ್ ಬಿಲ್ ಅನ್ನು ಆಯ್ಕೆ ಮಾಡಬೇಕು. ಇನ್ನು ಇದರ ನಂತರ ನೀವು ಯಾವ ಕಂಪನಿಯ ಗ್ಯಾಸ್ ಬಳಕೆ ಮಾಡುತ್ತಿದ್ದೀರಿ ಅನ್ನುವುದನ್ನ ಸೆಲೆಕ್ಟ್ ಮಾಡಬೇಕು, ಅದರಲ್ಲಿ ಇಂಡೇನ್ ಗ್ಯಾಸ್, ಎಚ್ ಪಿ ಗ್ಯಾಸ್, ಭಾರತ್ ಗ್ಯಾಸ್ ಹೀಗೆ ಮೂರೂ ಆಯ್ಕೆಗಳು ನಿಮಗೆ ಸಿಗುತ್ತದೆ. ಇನ್ನು ಯಾವ ಗ್ಯಾಸ್ ಅನ್ನುವುದನ್ನ ನೀವು ಆಯ್ಕೆ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ LPG ಐಡಿ ನಮೂದಿಸಿದ ನಂತರ ನಿಮ್ಮ ಬುಕಿಂಗ್ ಪ್ರಕ್ರಿಯೆ ಆರಂಭ ಆಗುತ್ತದೆ. ಇನ್ನು ನೀವು ಅಮೆಜಾನ್ ನಲ್ಲಿ ಗ್ಯಾಸ್ ಅನ್ನು ಬುಕ್ ಮಾಡಿದರೆ ನಿಮಗೆ ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 50 ರೂಪಾಯಿಗಳ ಕ್ಯಾಶ್ ಬ್ಯಾಕ್ ಸಿಗುತ್ತದೆ. ಏನೇ ಆಗಲಿ ಸಬ್ಸಿಡಿ ಹಣ ಬರುತ್ತಿಲ್ಲ ಅನ್ನುವವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಿದರೆ ತಪ್ಪಾಗದು. ಈ ಮಾಹಿತಿಯನ್ನ ಗ್ಯಾಸ್ ಬಳಸುವ ಪ್ರತಿಯೊಬ್ಬರಿಗೂ ತಲುಪಿಸಿ.

Leave a Reply

Your email address will not be published. Required fields are marked *