ಉಡುಪಿ ಇದು ಕರ್ನಾಟಕ ರಾಜ್ಯದ ಕರಾವಳಿ ತೀರದಲ್ಲಿರುವ ಹೆಸರಾಂತ ಜಿಲ್ಲೆ. ತುಳು ಸಂಸ್ಕ್ರತಿಯ ನೆಲೆಬೀಡು. ಉಡುಪಿ ಎಂದೊಡನೆ ನೆನಪಾಗುವುದೇ ಶ್ರಿ ಕ್ಷೇತ್ರ ಶ್ರೀಕೃಷ್ಣ ಮಠ. ಈ ಮುದ್ದು ಕೃಷ್ಣನು ನವರಂಧ್ರ ಕಿಟಕಿಯ ಮೂಲಕ ಎಲ್ಲರಿಗೂ ದರ್ಶನ ನೀಡುತ್ತಿದ್ದಾನೆ. ಪರಶುರಾಮ ಸ್ರಷ್ಟಿಯ ಸಪ್ತ ಕರ್ನಾಟಕ ಕ್ಷೇತ್ರಗಳಲ್ಲಿ ಉಡುಪಿಯೂ ಒಂದು.

ಉಡುಪಿಯ ಹೆಸರಿನ ಹಿನ್ನೆಲೆ:- ಉಡು ಎಂದರೆ ನಕ್ಷತ್ರಗಳು ಮತ್ತು ಪಾ ಎಂದರೆ ಒಡೆಯ. ನಕ್ಷತ್ರದ ಒಡೆಯನ ತಪೋಭೂಮಿ ಇದಾದ್ದರಿಂದ ಉಡುಪಿ ಎಂಬ ಹೆಸರು ಬಂತು ಎನ್ನಲಾಗಿದೆ.

ಪೌರಾಣಿಕ ಹಿನ್ನೆಲೆ:- ಹಿಂದೊಮ್ಮೆ ದ್ವಾಪರಾಯುಗದಲ್ಲಿ ರುಕ್ಮಿಣಿಗೆ ಶ್ರೀಕೃಷ್ಣನ ಬಾಲ್ಯವಸ್ಥೆಯನ್ನು ನೋಡುವ ಆಸೆಯಾಯಿತು. ಆಗ ಸ್ವಯಂ ಭಗವಂತನೇ ವಿಶ್ವಕರ್ಮನ ಬಳಿ ಸಾಲಿಗ್ರಾಮದಿಂದ ತನ್ನ ಮೂರ್ತಿಯನ್ನು ಮಾಡುವಂತೆ ಹೇಳಿದಾಗ ಹಾಗೆ ಮೈದಳೆದ ಮುದ್ದಾದ ಮೂರ್ತಿಯೇ ಉಡುಪಿಯ ಶ್ರೀ ಕೃಷ್ಣ ಮೂರ್ತಿ. ಮಧ್ವಾಚಾರ್ಯರು 13ನೇ ಶತಮಾನದಲ್ಲಿ ಸಂಕ್ರಾಂತಿ ಹಬ್ಬದ ದಿನ ಉಡುಪಿಯಲ್ಲಿ ಪ್ರತಿಷ್ಠಾಪಿಸುತ್ತಾರೆ.

ಉಡುಪಿಯ ಸುತ್ತಲೂ ಇರುವ ಅಷ್ಠಮಠಗಳೆಂದರೆ ಪುತ್ತಿಗೆ, ಶೆಯೂರು,ಅದಮಾರು, ಪೇಜಾವರ,ಪಲಿಮಾರು, ಕೃಷ್ಣಾಪುರ, ಕಾಣೆಯೂರು, ಸೋದೆ. ಈ ಎಲ್ಲ ಮಠದ ಯತಿಗಳು 2ವರ್ಷ ಒಬ್ಬರಂತೆ ಕೃಷ್ಣನನ್ನು ಪೂಜೆ ಮಾಡುತ್ತಾರೆ. ಈ ಮಠದ ಆಡಳಿತವನ್ನು 2ವರ್ಷಕ್ಕೊಮ್ಮೆ ಒಂದು ಮಠಕ್ಕೆ ವರ್ಗಾಯಿಸಲಾಗುತ್ತದೆ. ಈ ಮಹೋತ್ಸವವೇ ಪರ್ಯಾಯ.

ಕನಕನ ಕಿಂಡಿ:-16ನೇ ಶತಮಾನದಲ್ಲಿ ವಾದಿರಾಜರ ಯತಿಗಳ ಸಮಯದಲ್ಲಿ ಕನಕದಾಸರು ಕೃಷ್ಣನ ದರ್ಶನಕ್ಕಾಗಿ ಬಂದಾಗ ಅವರು ಕೆಳಜಾತಿಯೆಂದು ಅವರಿಗೆ ದರ್ಶನ ಸಿಗುವುದಿಲ್ಲ. ಆಗ ಕನಕದಾಸರು ಕಿಂಡಿಯಿಂದ ನೋಡಿದಾಗ ಬೆನ್ನು ಮಾತ್ರ ಕಾಣಿಸುತ್ತದೆ. ಇವರ ಅತೀವ ಭಕ್ತಿಗೆ ಕೃಷ್ಣನ ಮನಸು ಕರಗಿ ತಿರುಗಿ ದರ್ಶನ ನೀಡುತ್ತಾನೆ. ಆದ್ದರಿಂದ ಕನಕನ ಕಿಂಡಿ ಎಂದೇ ಪ್ರಸಿದ್ಧಿಗೊಂಡಿದೆ.

ಉಡುಪಿಯ ಬಾಲ ಕೃಷ್ಣನು ಬಲ ಕೈಯಲ್ಲಿ ಕಡಗೋಲು, ಎಡ ಗೈಯಲ್ಲಿ ಹಗ್ಗವನ್ನು ಹಿಡಿದು ತನ್ನ ಭಕ್ತರನ್ನು ಆಶೀರ್ವದಿಸುತ್ತಿದ್ದಾನೆ. ಉಡುಪಿಯಲ್ಲಿ ಹಲವಾರು ಉತ್ಸವಗಳು ನಡೆಯಿತ್ತಿರುತ್ತವೆ. ಆದ್ದರಿಂದ ನಿತ್ಯೋತ್ಸವಗಳ ನಾಡು ಎಂದು ಕರೆಯಲಾಗುತ್ತದೆ. ಕೊನೆಯದಾಗಿ ಶ್ರೀಕೃಷ್ಣನು ಎಲ್ಲರಿಗೂ ಸರ್ವಮಂಗಳವನ್ನುಂಟು ಮಾಡಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!