ಕೃಷ್ಣನ ಮಾತುಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಬೇಕು. ಅವನ ಹಲವು ಮಾತುಗಳಲ್ಲಿ ಕ್ರೋಧದ ಬಗೆಗಿನ ಮಾತುಗಳು ಪ್ರಮುಖವಾಗಿದೆ. ಕ್ರೋಧ ಜೀವನದಲ್ಲಿ ಒಳ್ಳೆಯದೋ ಕೆಟ್ಟದ್ದೋ ಎಂಬುದರ ಬಗ್ಗೆ ಕೃಷ್ಣನ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಭಗವದ್ಗೀತೆಯ ಮೂಲಕ ಕೃಷ್ಣ‌ ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದ್ದಾನೆ. ನಮ್ಮ ಜೀವನದಲ್ಲಿ ಕೃಷ್ಣನ ಮಾತುಗಳನ್ನು ಪಾಲಿಸಿದರೆ ಯಾವುದೇ ಖಿನ್ನತೆಗೂ ಒಳಗಾಗುವ ಅವಶ್ಯಕತೆಯೇ ಬರುವುದಿಲ್ಲ. ನಮಗೆ ಏನು ಸಿಗಬೇಕೊ ಅದು ಸಿಕ್ಕೆ ಸಿಗುತ್ತದೆ, ನಮ್ಮ ಯೋಗದಲ್ಲಿಲ್ಲವೆಂದರೆ ನಾವು ಎಷ್ಟೇ ಪ್ರಯತ್ನಿಸಿದರೂ ಸಿಗುವುದಿಲ್ಲ ಇದೇ ಜೀವನ. ಕೃಷ್ಣನ ಈ ಮಾತನ್ನು ಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು. ಕೃಷ್ಣನ ಎಲ್ಲಾ ಮಾತುಗಳು ಪ್ರಮುಖವಾಗಿದೆ.

ಪ್ರತಿಬಿಂಬ ಚೆನ್ನಾಗಿರಲು ಕಾರಣ ನಮ್ಮ ರೂಪ ಸುಂದರವಾಗಿದೆಯೋ ಅಥವಾ ನೀರು ಸ್ವಚ್ಛವಾಗಿದೆಯೋ ಎಂಬ ಪ್ರಶ್ನೆಗೆ ಕೃಷ್ಣನು ಉತ್ತರ ನೀಡಿದ್ದಾನೆ. ನೀರು ಸ್ವಚ್ಛವಾಗಿ, ಶಾಂತವಾಗಿದೆ. ನಾವು ಸ್ಥಿರವಾಗಿರುವ, ಶಾಂತವಾಗಿರುವ ನೀರಿನಲ್ಲಿ ನಮ್ಮ ಮುಖದ ಪ್ರತಿಬಿಂಬ ಸರಿಯಾಗಿ ಕಾಣಿಸುತ್ತದೆ. ಕ್ರೋಧದ ವಿಷಯವು ಹಾಗೆ ನಮ್ಮ ಮನಸ್ಸು ಶಾಂತವಾಗಿದ್ದರೆ, ಸ್ಥಿರವಾಗಿದ್ದರೆ ನಮ್ಮ ಆತ್ಮವನ್ನು ನೋಡಿ, ಕೇಳಿ, ಅರ್ಥಮಾಡಿಕೊಳ್ಳಬಹುದು ಆದರೆ ಕ್ರೋಧದಿಂದ ಇದ್ದಾಗ ಆತ್ಮದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ಕ್ರೋಧವನ್ನು ವಶದಲ್ಲಿ ಇಟ್ಟುಕೊಳ್ಳಬೇಕು.

ಸರಿಯಾದ ಕಾರಣವಿಲ್ಲದೆ, ಮೂರ್ಖತನದಿಂದ ಹುಟ್ಟಿದ ಕ್ರೋಧ ಒಮ್ಮೆಯಾದರೂ ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ. ನೀರು ಶಾಂತವಾಗಿದ್ದಾಗ ಮಾತ್ರ ನಮ್ಮ ಪ್ರತಿಬಿಂಬ ಸ್ಪಷ್ಟವಾಗಿ ಗೋಚರಿಸುತ್ತದೆ ಅದೇ ರೀತಿ ನಮ್ಮ ಮನಸ್ಸು ಕ್ರೋಧ, ಕೋಪದಲ್ಲಿದ್ದಾಗ ನಾವು ಯಾವುದೇ ಯೋಚನೆಯನ್ನು ಮಾಡಬಾರದು ಯೋಚನೆ ಮಾಡಿದರು ಅದು ಸರಿಯಾಗಿ ಇರುವುದಿಲ್ಲ. ಮನಸ್ಸು ಶಾಂತವಾಗಿದ್ದಾಗ ಮಾತ್ರ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಆದ್ದರಿಂದ ಶ್ರೀ ಕೃಷ್ಣ ಕ್ರೋಧವನ್ನು ಬಿಡಬೇಕೆಂದು ಜಗತ್ತಿಗೆ ಸಾರಿದ್ದಾನೆ. ಕ್ರೋಧ ಮೊದಲು ನಮ್ಮನ್ನೇ ಸುಡುತ್ತದೆ ಎಂದು ಕೃಷ್ಣ ತಿಳಿಸಿದ್ದಾನೆ.

Leave a Reply

Your email address will not be published. Required fields are marked *