Ultimate magazine theme for WordPress.

Darmastala: ಧರ್ಮಸ್ಥಳ ಹೋದ್ಮೇಲೆ ಕುಕ್ಕೆಗೆ ಹೋಗ್ಬೇಕಾ, ಕುಕ್ಕೆ ಸುಬ್ರಮಣ್ಯದ ವಿಶೇಷತೆ ಇಲ್ಲಿವೆ

0 9,421

ಧರ್ಮಸ್ಥಳ (Darmastala) ಹಾಗೂ ಸುಬ್ರಮಣ್ಯ ಎರಡು ಪವಿತ್ರ ಧಾರ್ಮಿಕ ಕ್ಷೇತ್ರಗಳು.ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಬೇಕೊ ಅಥವಾ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಬೇಕೊ ಎಂಬ ಗೊಂದಲ ಹಲವರಲ್ಲಿ ಇದೆ ಅದರ ಬಗ್ಗೆ ಮಾಹಿತಿಯನ್ನು ನಾವು ತಿಳಿಸುತ್ತೇವೆ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ಕೆಲವೊಂದು ವಿಷಯಗಳಿಗೆ ತುಂಬಾ ಪ್ರಸಿದ್ಧಿಯಾಗಿದೆ ಅಲ್ಲಿ ಮಾಡಲಾಗುವ ಕೆಲವೊಂದು ಪೂಜೆಗಳಿಗೆ ಅದು ತುಂಬಾ ಪ್ರಸಿದ್ಧಿಯಾಗಿದೆ ಆ ವಿಷಯದ ಕುರಿತಾಗಿ ಜೊತೆಗೆ ಧರ್ಮಸ್ಥಳಕ್ಕೆ ಹೋದಾಗ ಅದರ ಹತ್ತಿರದಲ್ಲಿರುವ ಇನ್ನೂ ಎರಡು ದೇವಾಲಯಗಳು ಪ್ರಸಿದ್ಧವಾಗಿದ್ದು ಅವು ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ಎಲ್ಲರಿಗೂ ಕಾಡುವ ಪ್ರಶ್ನೆ ಮೊದಲು ಧರ್ಮಸ್ಥಳಕ್ಕೆ ಹೋಗಬೇಕಾ ಅದಾದ ನಂತರ ಸುಬ್ರಮಣ್ಯಕ್ಕೆ ಹೋಗಬೇಕಾ ಅಥವಾ ಸುಬ್ರಮಣ್ಯಕ್ಕೆ ಮೊದಲು ಹೋಗಿ ನಂತರ ಧರ್ಮಸ್ಥಳಕ್ಕೆ ಹೋಗಬೇಕಾ ಎಂಬ ಪ್ರಶ್ನೆ ಕಾಡುತ್ತದೆ. ನೀವು ಮೊದಲು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನವನ್ನು ಮಾಡಿಕೊಂಡು ನಂತರ ಸುಬ್ರಮಣ್ಯಕ್ಕೆ ಹೋಗಬೇಕು.

ಮೊದಲು ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದುಕೊಂಡು ನಂತರ ಸುಬ್ರಮಣ್ಯಕ್ಕೆ ಹೋಗಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯಬೇಕು. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದರ್ಶನವನ್ನು ಪಡೆದುಕೊಂಡ ನಂತರ ನೇರವಾಗಿ ಮನೆಗೆ ಹೋಗಬೇಕು ಬೇರೆ ಯಾವುದೇ ಸ್ಥಳಗಳಿಗೆ ಹೋಗುವುದಕ್ಕಿಂತ ನೇರವಾಗಿ ಮನೆಗೆ ಹೋಗುವುದು ತುಂಬಾ ಶ್ರೇಯಸ್ಕರ ಎಂಬ ಮಾತಿದೆ.

ಇನ್ನು ಧರ್ಮಸ್ಥಳದ ಸುತ್ತಲಿರುವ ಎರಡು ದೇವಾಲಯಗಳು ಯಾವುದು ಎಂಬುದನ್ನು ನೋಡುವುದಾದರೆ ಮೊದಲನೇಯದು ಉಜಿರೆಯಲ್ಲಿನ ಸೂರ್ಯನಾರಾಯಣ ದೇವಾಲಯ. ಇದು ಕೂಡ ತುಂಬಾ ಪ್ರಸಿದ್ಧವಾದ ದೇವಾಲಯವಾಗಿದೆ ಈ ದೇವಾಲಯಕ್ಕೆ ಸದಾಶಿವ ರುದ್ರ ಸ್ವಾಮಿ ದೇವಾಲಯ ಎಂದು ಕೂಡ ಹೇಳುತ್ತಾರೆ.

ಇಲ್ಲಿ ಅನೇಕ ಜನರು ತಮ್ಮ ಹರಕೆಯನ್ನು ತೀರಿಸುವುದಕ್ಕೆ ಬರುತ್ತಾರೆ ಮಕ್ಕಳಾಗದಿರುವವರು ಮದುವೆ ಆಗದಿರುವವರು ಮನೆ ಕಟ್ಟಿಸಿ ಕೊಳ್ಳಬೇಕು ಎನ್ನುವವರು ಜಾಗ ತೆಗೆದುಕೊಳ್ಳಬೇಕು ಎನ್ನುವವರು ಹರಕೆಯನ್ನ ಹೊತ್ತು ನಂತರ ಇಲ್ಲಿ ಬಂದು ತೀರಿಸಬಹುದು. ಹರಕೆಯನ್ನು ತೀರಿಸುವುದಕ್ಕೆ ಇಲ್ಲಿ ಮಣ್ಣಿನ ಗೊಂಬೆಗಳನ್ನು ಕೊಡುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ಹರಕೆಗಳನ್ನು ಕೂಡ ತೀರಿಸಬಹುದು. ಅಲ್ಲಿಯೂ ಕೂಡ ಊಟ ಸಿಗುತ್ತದೆ ನೀವು ದೇವರ ದರ್ಶನವನ್ನು ಮಾಡಿ ಅನ್ನಪ್ರಸಾದವನ್ನು ಸ್ವೀಕರಿಸಬಹುದು.

ಇನ್ನು ನಿಮಗೆ ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ಹೋಗುವ ಮಾರ್ಗದಲ್ಲಿ ಬಲಭಾಗದಲ್ಲಿ ಸೌತಡ್ಕ ಗಣಪತಿ ಸಿಗುತ್ತದೆ ಇದು ಕೂಡ ತುಂಬಾ ಪ್ರಸಿದ್ಧವಾಗಿದೆ ಇಲ್ಲಿ ಯಾವುದೇ ದೇವಾಲಯವಿಲ್ಲ ಒಂದು ಕಟ್ಟೆಯ ಮೇಲೆ ಗಣಪತಿಯನ್ನು ಇರಿಸಲಾಗಿದೆ. ಇಲ್ಲಿಗೆ ನೀವು ಯಾವುದೇ ವೇಳೆಯಲ್ಲಿ ಹೋದರು ದರ್ಶನವನ್ನು ಮಾಡಬಹುದು ಇಲ್ಲಿ ಹರಕೆ ಹೊತ್ತವರು ಗಂಟೆಯನ್ನು ಕಟ್ಟಬಹುದು ಇದನ್ನು ಗಂಟೆ ಗಣಪತಿ ಎಂದು ಕೂಡ ಕರೆಯುತ್ತಾರೆ .ನೀವು ಏನೇ ಬೇಡಿಕೆಯನ್ನಿಟ್ಟು ಗಂಟೆಯನ್ನು ಕಟ್ಟಿದ್ದರೆ ಅದು ಈಡೇರುತ್ತದೆ. ನಿನಗೆ ಇಲ್ಲಿ ಪಂಚಕಜ್ಜಾಯ ಮತ್ತು ಅವಲಕ್ಕಿ ಪ್ರಸಾದವನ್ನು ಕೊಡುತ್ತಾರೆ.

ಇದಾದ ನಂತರ ಹೋಗುವಂತದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಲ್ಲಿಗೆ ನೀವು ತಲುಪುವುದು ತಡವಾದರೆ ನಿಮಗೆ ಉಳಿದುಕೊಳ್ಳುವುದಕ್ಕೆ ವಸತಿ ಗ್ರಹಗಳ ವ್ಯವಸ್ಥೆಯಿದೆ. ಗರ್ಭಗುಡಿಯ ಎದುರಿನಲ್ಲಿ ಸುಬ್ರಹ್ಮಣ್ಯಸ್ವಾಮಿ ತೀರ್ಥ ಸ್ನಾನ ನದಿ ಇದೆ ಕೆಲವರು ಹರಕೆ ಹೊತ್ತಿರುವವರು ನದಿಯಲ್ಲಿ ಸ್ನಾನ ಮಾಡಿ ನೇರವಾಗಿ ದೇವರ ದರ್ಶನವನ್ನು ಪಡೆದುಕೊಳ್ಳುತ್ತಾರೆ.

ಸುಬ್ರಹ್ಮಣ್ಯದಲ್ಲಿ ಪ್ರಮುಖವಾಗಿ ಮಾಡುವಂತದ್ದು ಸರ್ಪ ಸಂಸ್ಕಾರ ಯಾಗ ಇದಕ್ಕೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಯಾವುದೇ ರೀತಿಯ ಸರ್ಪದೋಷ ಇದ್ದಲ್ಲಿ ಅದು ನಿವಾರಣೆಯಾಗುತ್ತದೆ. ಈ ಯಾಗವನ್ನು ಮಾಡಿಸುವುದರಿಂದ ಯಾವುದೇ ರೀತಿಯ ಕುಜದೋಷ ಸರ್ಪದೋಷ ಮಕ್ಕಳಾಗದೇ ಇರುವ ತೊಂದರೆ ಇವೆಲ್ಲವೂ ಕೂಡಾ ನಿವಾರಣೆಯಾಗುತ್ತದೆ.

ಹಾಗಾಗಿ ಇಲ್ಲಿ ಸರ್ಪಸಂಸ್ಕಾರ ಯಾಗವು ಕೂಡ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಎರಡು ಮೂರು ದಿನ ಉಳಿದುಕೊಂಡು ಈ ಪೂಜೆಯನ್ನು ಮಾಡಿಸುವುದಕ್ಕೆ ಆಗದೆ ಇರುವವರು ಆಶ್ಲೇಷಬಲಿ ಎನ್ನುವ ಮತ್ತೊಂದು ಪೂಜೆ ಇದೆ ಅದನ್ನು ಮಾಡಿಸಬಹುದು. ಈ ಪೂಜೆಗಳನ್ನು ಮಾಡಿಸುವುದರಿಂದ ನಮಗೆ ಗೊತ್ತಿಲ್ಲದೇ ಇರುವ ನಾಗ ದೋಷಗಳು ಪರಿಹಾರವಾಗುತ್ತದೆ. ಇದರ ಜೊತೆಗೆ ಅಲ್ಲೇ ಪಕ್ಕದಲ್ಲಿ ಹರಿಯುವ ನದಿಯಲ್ಲಿ ನೀರು ಕಡಿಮೆ ಇರುವ ಸಂದರ್ಭದಲ್ಲಿ ಜನರು ಕಲ್ಲು ಮೇಲೆ ಕಲ್ಲನ್ನು ಕಟ್ಟಿ ಹೋಗುತ್ತಾರೆ ಅದರ ಅರ್ಥ ಅವರು ಮನೆಯನ್ನು ನಿರ್ಮಿಸುವುದಕ್ಕೆ ಹಾಗೆ ಮಾಡಿರುತ್ತಾರೆ ಈ ರೀತಿಯ ಅನೇಕ ಪೂಜೆಗಳಿಗೆ ಸುಬ್ರಹ್ಮಣ್ಯ ಸ್ವಾಮಿ ಪ್ರಸಿದ್ಧನಾಗಿದ್ದಾನೆ.

ಜೊತೆಗೆ ಆಶ್ಲೇಷ ನಕ್ಷತ್ರದಲ್ಲಿ ಜನಿಸಿರುವವರು ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಮಾಡುವುದರಿಂದ ಎಲ್ಲ ರೀತಿಯ ಒಳಿತುಗಳು ಆಗುತ್ತದೆ. ನೀವು ಕೂಡ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದರ ಜೊತೆಗೆ ಈ ದೇವಾಲಯಗಳ ದರ್ಶನ ಮಾಡುವ ಮೂಲಕ ನಿಮ್ಮ ಜೀವನವನ್ನು ಪಾವನ ಮಾಡಿಕೊಳ್ಳಿ.

Leave A Reply

Your email address will not be published.