ನಾನು ಇಲ್ಲವಾದ ಮೇಲೆ ನನ್ನ ಸಮಾಧಿಯ ಮೇಲೆ ಈ ಮಾತು ಬರೆಯಿರಿ, ಅದೇ ನನ್ನ ಅಸ್ತಿ ಎಂದ SPB

0 0

ಭಾರತದ ಸಂಗೀತ ಚರಿತ್ರೆಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿ ಎಲ್ಲರ ಮನೆಮಾತಾಗಿದ್ದ ಎಸ್ಪೀಬಿ ಅವರನ್ನು ನಾವು ಕಳೆದುಕೊಂಡಿದ್ದೇವೆ. ಇವರು ಎಂತಹ ಹಾಡುಗಳನ್ನು ಹಾಡಿದರೂ ಸಹ ಅದರಲ್ಲಿ ತಮ್ಮದೇ ಆದ ಒಂದು ವೈಶಿಷ್ಟ್ಯವನ್ನು ರೂಪಿಸುತ್ತಿದ್ದರು. ಎಸ್ ಪೀ ಬಿ ಅವರು ಮೀಡಿಯಾಗಳ ಎದುರು ಕಾಣಿಸಿಕೊಂಡು ಇಂಟರ್ವ್ಯೂ ನೀಡುತ್ತಿರುವುದು ಕಡಿಮೆಯೇ ಆಗಿತ್ತು. ಆದರೆ ೭೦೧೭ ರಲ್ಲಿ ನೀಡಿದ ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ತಮ್ಮ ಸಮಾಧಿಯ ಮೇಲೆ ಎನು ಬರೆಯಬೇಕು ಎನ್ನುವುದನ್ನು ಆ ವಿಡಿಯೋದ ಮೂಲಕ ತಿಳಿಸಿದ್ದರು. ಈಗ ಆ ವಿಡಿಯೋ ಎಲ್ಲಾಕಡೆ ಬಹಳಷ್ಟು ಹರಿದಾಡುತ್ತಿದ್ದು ಆ ವಿಡಿಯೋದಲ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ನಾವಿಲ್ಲಿ ನೋಡೋಣ.

ಸಪ್ಟೆಂಬರ್ ೨೫, ಮಧ್ಯಾನ ಒಂದು ಗಂಟೆ ನಾಲ್ಕು ನಿಮಿಷಕ್ಕೆ ಎಸ್ ಪೀ ಬಿ ಅವರು ತಮ್ಮ ಕೊನೆಯ ಉಸಿರು ಎಳೆದಿದ್ದಾರೆ. ಎಸ್ ಪೀ ಬಿ ಅವರ ಪುತ್ರ ಎಸ್ ಪೀ ಚರಣ್ ತಮ್ಮ ಕುಟುಂಬದ ಸದಸ್ಯರ ಜೊತೆ ಚರ್ಚೆ ಮಾಡಿ ಚನ್ನೈ ನಲ್ಲಿಯೇ ಎಸ್ ಪೀ ಬಿ ಅವರ ಅಂತ್ಯ ಸಂಸ್ಕಾರ ಮಾಡಲು ತೀರ್ಮಾನಿಸಿದ್ದರು. ಎಸ್ ಪೀ ಬಿ ಅವರು ೨೦೧೭ ರಲ್ಲಿಯೆ ತಾವು ಸಂದರ್ಶನ ನೀಡಿದ್ದ ಯುಟ್ಯೂಬ್ ಚಾನೆಲ್ ಒಂದರಲ್ಲೀ ತಾನು ಸತ್ತ ಮೇಲೆ ತನ್ನ ಸಮಾಧಿಯ ಮೇಲೆ ಈ ಒಂದು ವಾಕ್ಯವನ್ನು ಬರೆಯುವಂತೆ ಹೇಳಿದ್ದರು. ಎಸ್ ಪೀ ಬಿ ಅವರು ಹೇಳಿದ ಆ ವಾಕ್ಯ ಈ ರೀತಿಯಾಗಿದೆ. ಏನೆಂದರೆ, ೧೯೯೯ ನೇ ಇಸವಿಯಲ್ಲಿ ಈ ಟಿವಿ ತೆಲುಗು ಚಾನೆಲ್ ನಲ್ಲಿ ನಡೆದ ಪಾಡುತ ತೀಯಗ ಚೆಲ್ಲಗ ಕಾರ್ಯಕ್ರಮದ ಮೇಘಾ ಫೈನಲ್ ನಡೆಸುವ ಸಂದರ್ಭದಲ್ಲಿ ಹಲವಾರು ದಿಗ್ಗಜರು ಆ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

ಆಗ ಆ ಸಂದರ್ಭದಲ್ಲಿ ಸಂಗೀತ ದಿಗ್ಗಜರಾದ ಬಾಲಮುರಳಿ ಕೃಷ್ಣ ಅವರು ತನಗೆ ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ ಎಂದು ಎಸ್ ಪೀ ಬಿ ಅವರು ಹೇಳಿದ್ದರು. ಮತ್ತು ಆ ಮಾತುಗಳು ಈ ರೀತಿಯಾಗಿತ್ತು. ” ನೀನು ಸ್ವಲ್ಪ ಕಷ್ಟ ಪಟ್ಟರೆ ನನ್ನ ಹಾಗೆಯೇ ಹಾಡಬಹುದು ನಾನು ಕಷ್ಟ ಪಟ್ಟರೂ ಕೂಡಾ ನಿನ್ನ ಹಾಗೆಯೇ ಹಾಡಲು ಸಾಧ್ಯವಿಲ್ಲ ಬಾಲೂ ಎಂದು ಹೇಳಿದ್ದರಂತೆ. ಎಸ್ಪೀ ಬಿ ಅವರು ಬಾಲಮುರಳಿ ಕೃಷ್ಣ ಅವರನ್ನ ತನ್ನ ತಂದೆಯ ಸಮಾನರಂತೆ ನೋಡುತ್ತಿದ್ದರು. ಬಾಲಮುರಳಿಕೃಷ್ಣ ಅವರ ಮಾತುಗಳು ಎಸ್ಪಿಬಿ ಅವರಿಗೆ ಸದಾ ಕಾಡುತ್ತಿತ್ತು. ಇವರ ಇಷ್ಟು ದೊಡ್ಡ ಮಾತುಗಳೇ ತನ್ನ ಆಸ್ತಿ ಎಂದು ಎಸ್ಪಿಬಿ ಅವರು ೧೯೯೯ರಲ್ಲಿಯೆ ಹೇಳಿದ್ದರು. ಇಷ್ಟು ದೊಡ್ಡ ವ್ಯಕ್ತಿ ನನ್ನನ್ನು ಹೊಗಳಿದ್ದರು ಎನ್ನುವುದು ಸಾಕು ನನ್ನ ಜೀವನ ಧನ್ಯವಾಗುವುದು ಹಾಗೂ ಇದು ಶಾಶ್ವತವಾಗಿ ಉಳಿಯುವುದು ಎಂದು ಹೇಳಿದ್ದರು. ಎಷ್ಟೋ ಜನರು ತನ್ನ ಬಳಿ ಸಂಗೀತವನ್ನು ಕಲಿಯಲು ಬರುತ್ತಾರೆ ಆದರೆ ನಾನು ಕೆಲವರಿಗೆ ಮಾತ್ರ ಸಂಗೀತ ಕಲಿಸುವೆ ಆದರೆ ಹಾಡುಗಳು ಮಾತ್ರ ಎಂದಿಗೂ ಜೀವಂತವಾಗಿ ಇರಲಿವೆ ಎಂದು ಹೇಳಿದ್ದರು. ಈ ವಿಷಯವನ್ನು ಎಸ್ಪಿಬಿ ಅವರ ಮಗ ಚರಣ್ ಅವರು ಎಸ್ಪಿಬಿ ಅವರ ಸಮಾಧಿಯ ಮೇಲೆ ಬರೆಸುತ್ತಾರೆ ಎನ್ನುವ ಮಾತನ್ನು ಅವರ ಕುಟುಂಬಸ್ಥರೆ ಹೇಳಿದ್ದಾರೆ.

Leave A Reply

Your email address will not be published.