ನಟ ಸೋನು ಸೂದ್ ಸಿನಿಮಾದಲ್ಲಿ ಖಳನಾಯಕನಾಗಿದ್ದರು ರಿಯಲ್ ಲೈಫ್ ನಲ್ಲಿ ನಿಜವಾದ ಹೀರೊ ಆಗಿದ್ದಾರೆ. ಹೌದು ಈಗಾಗಲೇ ನಟ ಸೋನು ಸೂದ್ ಅವರು ಬಹುತೇಕ ಜನರಿಗೆ ಸಹಾಯವನ್ನು ಮಾಡಿರುವಂತ ವಿಷಯವನ್ನು ನೀವು ಈಗಾಗಲೇ ಕೇಳಿರುತ್ತೀರಾ, ದೇಶದಲ್ಲಿ ಹೀಗಾಗಲೇ ಕೊರೋನಾ ಪರಿಣಾಮದಿಂದ ಆರ್ಥಿಕ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

22 ವರ್ಷದ ಹುಡುಗಿ ತನ್ನ ಕಾಲಿನ ಶಸ್ತ್ರ ಚಿಕಿತ್ಸೆಗೆ ಟ್ವಿಟ್ಟರ್ ಮೂಲಕ ಸರ್ ನನಗೆ ಒಂದು ಸಹಾಯ ಮಾಡಿ ನನ್ನ ಕಾಲನ್ನು ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಕೊರೋನಾ ಪರಿಣಾಮದಿಂದ ನಮಗೆ ಆರ್ಥಿಕ ಸಂಕಷ್ಟವಾಗಿದೆ ಶಸ್ತ್ರ ಚಿಕಿತ್ಸೆ ಮಾಡಿಸಲು ಒಂದರಿಂದ ಒಂದೂವರೆ ಲಕ್ಷ ಹಣಬೇಕಾಗುತ್ತದೆ ಎಂಬುದಾಗಿ ಕೇಳಿಕೊಂಡಾಗ ನಟ ಸೋನು ಸೂದ್ ಮಾಡಿದ ಸಹಾಯವೇನು ಗೊತ್ತೇ?

ಆಕೆಯ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಿಸಿದ್ದಾರೆ ಹಾಗು ಆಕೆಯ ಸಂಪೂರ್ಣ ಪ್ರಯಾಣವನ್ನು ಕೂಡ ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದಾರೆ, ಟ್ವಿಟ್ಟರ್ ಮೂಲಕ ಸಹಾಯ ಕೇಳಿದ ಹುಡುಗಿಗೆ ಮರು ಉತ್ತರವನ್ನು ಕೊಟ್ಟು ನಿಮ್ಮ ಶಸ್ತ್ರ ಚಿಕಿತ್ಸೆಯ ಬಗ್ಗೆ ವೈದ್ಯರ ಬಳಿ ಮಾತನಾಡಿದ್ದೇನೆ ಎಂಬುದಾಗಿ ಭರವಸೆ ಕೊಟ್ಟ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಸಹಾಯವನ್ನು ಮಾಡಿದ್ದಾರೆ.

ಈ 22 ವರ್ಷದ ಹೆಣ್ಣು ಹುಡುಗಿ ಒಬ್ಬ ಅರ್ಚಕರ ಮಗಳಾಗಿದ್ದು ಈಕೆಯ ಹೆಸರು ಪ್ರಜ್ಞಾ ಎಂಬುದಾಗಿ ಗೋರಕ್ ಪುರ ಮೂಲದವರು ಕಾಲಿನ ತೊಂದರೆಯಿಂದ ಹಾಸಿಗೆ ಹಿಡಿದಿದ್ದ ಹುಡುಗಿಯನ್ನು ಸಂಪೂರ್ಣವಾಗಿ ಚಿಕಿತ್ಸೆ ಕೊಡಿಸಿ ನಡೆದಾಡುವಂತೆ ಮಾಡಿದ ಇವರ ಕಾರ್ಯ ವೈಖರಿಗೆ ಬಿಗ್ ಹ್ಯಾಟ್ಸಾಪ್.

By

Leave a Reply

Your email address will not be published. Required fields are marked *