ಇರುವೆಗಳು ಎಲ್ಲರ ಮನೆಯಲ್ಲೂ ಕೂಡ ಇದ್ದೆ ಇರತ್ತೆ. ಇರುವೆ ಬಂತು ಅಂದ್ರೆ ಎಲ್ಲರಿಗೂ ಕಿರಿ ಕಿರಿ ಎಲ್ಲೇ ಸ್ವಲ್ಪ ಎಣ್ಣೆ ಜಿಡ್ಡಿನ ಪದಾರ್ಥಗಳು ಇದ್ದರೂ ಸಹ ಅಲ್ಲಿ ಇರುವೆಗಳು ಬಹು ಬೇಗ ಬಂದು ಸೇರಿಕೊಳ್ಳುತ್ತವೆ. ಇದರಿಂದ ಎಲ್ಲರಿಗೂ ಕಿರಿ ಕಿರಿ ಆಗೋದು ಸಹಜವೇ ಹಾಗಾದ್ರೆ ಇರುವೆಗಳು ಮನೆಯಲ್ಲಿ ಬಂದರೆ ಏನಾಗತ್ತೆ ಯಾವ ರೀತಿಯ ಇರುವೆಗಳು ಅನ್ನೋದನ್ನ ನೋಡೋಣ.
ಕಪ್ಪು ಇರುವೆಗಳು ಇವು ಕಚ್ಚತ್ತೆ ಅಂತ ನಾವು ಸ್ವಲ್ಪ ಹೆದರ್ತಿವಿ. ನಾವು ಚಿಕ್ಕ ಮಕ್ಕಳಿಗೆಲ್ಲ ಇರುವೆಗಳ ಕಥೆಯನ್ನ ಜಾಸ್ತಿ ಹೇಳತಿವಿ ಅಂದರೆ, ಒಗ್ಗಟ್ಟಲ್ಲಿ ಇರೋದರ ಬಗ್ಗೆ ಇರಬಹುದು ಸಾಲುಗಳಲ್ಲಿ ಬರುವುದರ ಬಗ್ಗೆ ಇರಬಹುದು ಅಥವಾ ಯಾವ ವಿಷಯಕ್ಕೂ ಸೋಲುವುದಿಲ್ಲ ಅಂತೆಲ್ಲ ಹೀಗೆ ಸ್ಪೂರ್ತಿದಾಯಕ ಕಥೆಗಳನ್ನ ಹೇಳೋದು ರೂಢಿ. ಈ ಕಥೆಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾನೇ ಅವಶ್ಯಕ ಹಾಗೂ ಪ್ರಯೋಜನ ಕೂಡ ಹೌದು.
ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕಾಣಿಸಿಕೊಳ್ಳುವ ಇರುವೆಗಳಲ್ಲಿ ಎರಡು ವಿಧ. ಅವು ಕಪ್ಪು ಬಣ್ಣದ ಇರುವೆ ಹಾಗೂ ಕೆಂಪು ಬಣ್ಣದ ಇರುವೆ ಗಳು. ಮನೆಗಳಲ್ಲಿ ಕಪ್ಪು ಬಣ್ಣದ ಇರುವೆ ಇದ್ರೆ ಯಾವುದೇ ಗಾಬರಿ ಬೀಳುವ ಅಗತ್ಯ ಇಲ್ಲ. ಈ ಕಪ್ಪು ಬಣ್ಣದ ಇರುವೆಗಳನ್ನ ವಿಷ್ಣುವಿನ ಸಮಾನ ಅಂತ ಹೇಳ್ತಾರೆ. ಹಾಗಾಗಿ ಕಪ್ಪು ಬಣ್ಣದ ಇರುವೆ ನೊಣ ಮ್ಮ ಮನೆಗಳಲ್ಲಿ ಇದ್ರೆ ಹೀಗೆ ಒಂದು ಉಪಾಯ ಮಾಡಬಹುದು. ಈ ಕಪ್ಪು ಇರುವೆಗಳಿಗೆ ತೆಂಗಿನ ಕಾಯಿ ತುರಿಯ ಜೊತೆಗೆ ಸ್ವಲ್ಪ ಸಕ್ಕರೆ ಸೇರಿಸಿ ಮನೆಯ ಯಾವ ಮೂಲೆಯಲ್ಲಿ ಹಾಕಿದ್ರು ಅದನ್ನ ಕಪ್ಪು ಇರುವೆಗಳು ತಿನ್ನುತ್ತವೆ ಇದರಿಂದ ವಿಷ್ಣುವಿನ ಕೃಪಾ ಕಟಾಕ್ಷ ನಿಮ್ಮ ಮೇಲೆ ಇರತ್ತೆ. ಹಾಗೂ ಉದ್ಯೋಗದ ಸಮಸ್ಯೆ ಇದ್ದರೆ ಸಹ ನಿವಾರಣೆ ಆಗತ್ತೆ. ಶನಿ ಸಾಡೆ ಸಾತಿ ಅಥವಾ ಶನಿಯ ಕೆಟ್ಟ ದೃಷ್ಟಿ ಇದ್ದರೆ ಸಕ್ಕರೆಯನ್ನು ಕಪ್ಪು ಇರುವೆಗಳಿಗೆ ಹಾಕಿ ಆವಿ ಸಕ್ಕರೆಯನ್ನು ತಿಂದುಕೊಂಡು ಹೋದರೆ ಶನಿಯ ಕೆಟ್ಟ ದೃಷ್ಟಿ ಸಹ ನಿವಾರಣೆ ಆಗತ್ತೆ.
ಆದರೂ ಮನೆಯಲ್ಲಿ ಎಲ್ಲಾ ಕಡೆ ಇರುವೆಗಳು ಇದೆ ಅಂದ್ರೆ ಕಿರಿ ಕಿರಿ ಆಗತ್ತೆ ಮನೆಯಿಂದ ಅವುಗಳನ್ನ ಹೊರಗೆ ಹಾಕಲೇ ಬೇಕು. ಆದ್ರೆ ಮನೆಯಿಂದ ಹೊರಗೆ ಹಾಕಬೇಕು ಅಂತ ಯಾವತ್ತಿಗೂ ಕಪ್ಪು ಇರುವೆಗಳನ್ನು ಕಾಲಿನಿಂದ ಓದೆಯುವುದು ಅಥವಾ ಸಾಯಿಸುವುದು ಇಂತಹ ಕೆಲಸ ಮಾಡಬಾರದು. ಪೊರಕೆ ಸಹಾಯದಿಂದ ಹೊರಗೆ ಹಾಕಬಹುದು. ಆದರೆ ಹೊರಗೆ ಹಾಕಿದಷ್ಟು ಇವು ಮತ್ತೆ ಮನೆಯ ಒಳಗೆ ಬರುತ್ತಾ ಇದೆ ಅಂದ್ರೆ ಇವು ನಿಮಗೆ ಮುಂದೆ ಬರಬಹುದಾ ಧನ ಲಾಭದ ಕುರಿತು / ಯಾವುದೇ ಒಳ್ಳೆಯ ಶುಭ ಸೂಚನೆ ಕೊಡುತ್ತವೆ ಎಂದು ಅರ್ಥ.
ಇನ್ನು ಮನೆಯಲ್ಲಿ ಕೆಂಪು ಬಣ್ಣದ ಇರುವೆ ಇದ್ರೆ ಇದು ಅಶುಭ ಅಂತ ಹೇಳಬಹುದು. ಈ ಇರುವೆಯ ಬಾಯಲ್ಲಿ ಒಂದು ಮೊಟ್ಟೆಯನ್ನು ಇಟ್ಟುಕೊಂಡಿದ್ದರೆ, ಇವು ನಿಮ್ಮ ಮನೆಗೆ ರೋಗಗಳನ್ನು ತರುತ್ತವೆ ಅಥವಾ ಯಾವುದೋ ಅನಾರೋಗ್ಯದ ಮುನ್ಸೂಚನೆ ನೀಡುತ್ತವೆ ಎಂದು ಅರ್ಥ. ಹಾಗಾಗಿ ಕೆಂಪು ಇರುವೆಗಳು ಮನೆಯಲ್ಲಿ ಕಾಣಿಸಿಕೊಂಡರೆ ಆದಷ್ಟು ಬೇಗ ಪೊರಕೆಯಿಂದ ಮನೆಯಿಂದ ಆಚೆ ಹಾಕುವುದು ಒಳ್ಳೆಯದು.