ಕನಸಿನಲ್ಲಿ ಶಿವಲಿಂಗ ಕಂಡರೆ ಇದರ ಸೂಚನೆ ಏನು? ಶಿವನ ಭಕ್ತರು ತಿಳಿಯಬೇಕಾದ ವಿಷಯ

0 205

ಕನಸು ಯಾರಿಗೆ ತಾನೇ ಬೀಳಲ್ಲ ಹೇಳಿ, ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ರೀತಿಯ ಕನಸು ಬೀಳತ್ತೆ‌ ಒಬ್ಬರಿಗೆ ಕೆಟ್ಟ ಕನಸು ಬಿದ್ರೆ ಇನ್ನೊಬ್ಬರಿಗೆ ಒಳ್ಳೆಯ ಕನಸು ಬೀಳಬಹುದು. ಹಿಂದೆ ನಡೆದ ಯಾವುದೋ ಒಂದು ಘಟನೆಯ ಬಗ್ಗೆ ಒಬ್ಬರಿಗೆ ಕನಸು ಬಿದ್ದರೆ, ಇನ್ನೊಬ್ಬರಿಗೆ ಮುಂದೆ ಭವಿಶ್ಯದಲ್ಲಿ ನಡೆಯುವ ಘಟನೆಗಳ ಕುರಿತಾಗಿ ಕನಸು ಬೀಳಬಹುದು. ಹೀಗೆ ಕನಸು ಎಲ್ಲರಿಗೂ ಬೀಳತ್ತೆ ಆದ್ರೆ ಎಲ್ಲರಿಗೂ ಒಂದೇ ರೀತಿಯ ಕನಸು ಬೀಳಲ್ಲ. ಕೆಲವರಿಗೆ ಕನಸಲ್ಲಿ ಅವರವರ ಇಷ್ಟ ದೇವರೂ ಸಹ ಕಾಣಿಸಿಕೊಳ್ಳಬಹುದು. ಆದರೆ ನಮಗೆ ಬೀಳುವ ಕನಸುಗಳಲ್ಲಿ ಹಲವು ಕನಸುಗಳು ನಮ್ಮ ನೃನಪಲ್ಲಿ ಇರುವುದೆ ಇಲ್ಲ. ನೆನಪಲ್ಲಿದ್ದರೂ ಸ್ಪಷ್ಟವಾಗಿರಲ್ಲ. ಕೆಲವು ಕನಸುಗಳು ಮಾತ್ರ ನೆನಪಲ್ಲಿ ಇರುತ್ತವೆ.

ಇನ್ನೂ ನಿಮ್ಮ ಕನಸಲ್ಲಿ ಯಾವತ್ತಾದ್ರೂ ಶಿವಲಿಂಗ ಬಂದಿದ್ದರೂ ಬರದೇ ಇದ್ದರೂ ಕೆಲವು ಅಂಶಗಳನ್ನ ನೀವು ನೆನಪಲ್ಲಿ ಇಟ್ಟುಕೊಳ್ಳಬೇಕು. ಕನಸಲ್ಲಿ ಶಿವ ಲಿಂಗ ಬಂದ್ರೆ ಏನಾಗತ್ತೆ ಅಥವಾ ಅದರ ಅರ್ಥ ಏನು ಅನ್ನೋದನ್ವ ತಿಳಿದುಕೊಳ್ಳೋಣ. ಈಶ್ವರ ಕೋಟ್ಯಾಂತರ ಜನರ ಆರಾಧ್ಯ ದೈವ. ಮಹಾ ಶಿವನು ಎಲ್ಲರ ಭಕ್ತಿಗೆ ಬೇಗನೇ ಒಲಿಯುತ್ತಾನೆ ಮತ್ತು ಶಿವನನ್ನು ಒಲಿಸಿಕೊಳ್ಳಲು ಬಹಳ ಕಷ್ಟಪಡಬೇಕಾದ್ದೂ ಏನು ಇಲ್ಲ. ಕೇವಲ ಬಿಲ್ವ ಪತ್ರೆಯ ದಳದಿಕದ ಶಿವನನ್ನು ಪೂಜಿಸಿದ್ರೆ ಒಲಿಸಿಕೊಳ್ಳಬಹುದು. ಇನ್ನು ಕನಸಿನಲ್ಲಿ ನೀವು ನಂಬುವ ಧರ್ಮ ಮತ್ತು ಅದಕ್ಕೇ ಸಂಬಂಧಿಸಿದ ವಿಷಯ ಬಂದ್ರೆ ಸುತ್ತಮುತ್ತಲಿನ ಜನರ ಜೊತೆ ನೀವು ಹೊಂದಿರುವ ಸಂಬಂಧ ಉತ್ತಮ ಸೌಹಾರ್ಧತೆ ಇವುಗಳ ಕುರಿತು ತಿಳಿಸತ್ತೆ . ನಿಮ್ಮ ಕನಸಲ್ಲಿ ಶಿವಲಿಂಗ ಕಂಡರೆ, ನಿಮಗೆ ನಿತ್ಯವೂ ನಿಮಗೆ ಪಸ್ಸಿನ ಮತ್ತು ಧ್ಯಾನದ ಅಗತ್ಯ ಇದೆ ಎಂಬುದನ್ನೂ ಸೂಚಿಸುತ್ತದೆ‌. ಶಿವಲಿಂಗ ಕನಸಲ್ಲಿ ಕಂಡರೆ ನೀವು ಆದಷ್ಟು ಬೇಗ ನಿಮ್ಮ ಇಷ್ಟವಾದ ದೇವರ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ ಎಂದು ಅರ್ಥ ಹಾಗೂ ನಿಮ್ಮ ಕಷ್ಟಗಳೆಲ್ಲ ದೂರ ಆಗತ್ತೆ ಮತ್ತು ವಿಜಯದ ಸಂಕೇತವೂ ಹೌದು.

ಕನಸಲ್ಲಿ ಶಿವ ಮತ್ತು ಪಾರ್ವತಿ ಒಟ್ಟೀಗೆ ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವುದೋ ಶುಭ ಕಾರ್ಯ ನಡೆಯತ್ತೆ ಎಂಬುದರ ಸಂಕೇತ. ಶಿವನ ತಾಂಡವ ನ್ರತ ಅಂದರೇ ನಟರಾಜ ಕನಸಲ್ಲಿ ಕಾಣುವುದು ಅಪರೂಪ ನಟರಾಜ ಕನಸಲ್ಲಿ ಕಾಣಿಸಿಕೊಂಡರೆ ನಿಮ್ಮ ಆರೋಗ್ಯ ಸಮಸ್ಯೆಗಳು ಬಹಳ ಬೇಗ ನಿವಾರಣೆ ಆಗುತ್ತೆ ಹಾಗೂ ನಿಮ್ಮ ಪ್ರಯತ್ನಗಳಿಗೆ ಶೀಘ್ರವೆ ಫಲ ಸಿಗತ್ತೆ ಎಂದು ಅರ್ಥ.
ಅನಾರೋಗ್ಯದಿಂದ ಬಳಲುತ್ತಿರುವವರು ಕನಸಿನಲ್ಲಿ ಶಿವ ಮಂದಿರವನ್ನ ಕಂಡರೆ, ಅವರ ಅನಾರೋಗ್ಯದಲ್ಲಿ ಬಹಳ ಬೇಗನೆ ಚೇತರಿಕೆ ಆಗುತ್ತೆ ಎಂದರ್ಥ. ಇನ್ನೂ ಶಿವನ ತ್ರಿಶೂಲ ಮನುಶ್ಯನ ೩ ಅಂಶಗಳಾದ ಎಚ್ಚರ, ನಿದ್ರೆ ಮತ್ತು ಕನಸಿನ ಸ್ಥಿತಿಯನ್ನು ಸೂಚಿಸತ್ತೆ. ಹಾಗೇ ಶಿವನ ತ್ರಿಶೂಲ ನಿಮ್ಮ ಕನಸಲ್ಲಿ ಬಂದ್ರೆ ಹಿಂದಿನ ಈಗಿನ ಅಥವಾ ಭವಿಷೊಯದ ಯಾವುದೋ ಒಂದು ಘಟನೆಯ ಸಂಕೇತವಾಗಿದೆ ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ. ನಿಮ್ಮ ಕನಸಲ್ಲಿ ಕೂಡಾ ಶಿವ ಬಂದರೆ ಇದನ್ನ ತಿಳಿದುಕೊಳ್ಳುವುದು ಅಗತ್ಯ.

Leave A Reply

Your email address will not be published.