ಕಜ್ಜಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತ ಒಂದಿಷ್ಟು ಹಳ್ಳಿ ಮದ್ದುಗಳನ್ನು ಈ ಮೂಲಕ ತಿಳಿಯೋಣ. ಕೆಲವೊಂದು ಕಾರಣಗಳಿಂದ ಕೆಲವರಲ್ಲಿ ತುರಿಕೆ ಆಗುವುದು ಹಾಗೂ ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುವುದು ಇದಕ್ಕೆ ಗ್ರಾಮೀಣ ಭಾಗದ ಜನರು ಈ ರೀತಿಯ ಮನೆಮದ್ದು ಬಳಸಿ ಪರಿಹಾರ ಕಂಡುಕೊಳ್ಳುತ್ತಿದ್ದರು.

ಕಜ್ಜಿ ತುರಿಕೆ ಸಮಸ್ಯೆ ಇದ್ರೆ ನಿಂತಲ್ಲಿ ನಿಲ್ಲೋಕಾಗಲ್ಲ ಕುಂತಲ್ಲಿ ಕೊರಾಕ್ ಆಗಲ್ಲ ಅಷ್ಟೊಂದು ಕಿರಿ ಕಿರಿ ಸಮಸ್ಯೆ ಆಗಿದೆ ಇದಕ್ಕೆ ಬೇವಿನ ಎಲೆ ಅಥವಾ ಬೇವಿನ ಎಣ್ಣೆ ಸಹಕಾರಿ ಅನ್ನೋದನ್ನ ಹೇಳಲಾಗುತ್ತದೆ ಇದನ್ನು ಹೇಗೆ ಬಳಸಬೇಕು ಹಾಗೂ ಇದರಿಂದ ಹೇಗೆ ಫಲಿತಾಂಶ ಇದೆ ಅನ್ನೋದನ್ನ ಮುಂದೆ ನೋಡಿ ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ ಸ್ನೇಹತರಿಗೂ ಶೇರ್ ಮಾಡಿಕೊಳ್ಳಿ ನಿಮ್ಮಿಂದ ಬೇರೆಯವರಿಗೂ ಕೂಡ ಉಪಯೋಗವಾಗಬಹುದು.

ಮೂರರಿಂದ ನಾಲ್ಕು ಕಪ್ ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ ಅದಕ್ಕೆ ಒಂದು ಕಪ್ ಅಷ್ಟು ಅರಿಶಿನ ಸೇರಿಸಿ ಮಿಶ್ರಣ ಮಾಡಿಕೊಳ್ಳಿ ನಂತರ ಅದನ್ನು ಕಜ್ಜಿ ಅಥವಾ ತುರಿಕೆ ಆಗುವಂತ ಜಾಗಕ್ಕೆ ಹಚ್ಚಿಕೊಳ್ಳಿ ಅರ್ಧ ಗಂಟೆ ಹಾಗೆ ಒಣಗಲು ಬಿಡಿ. ಇದಾದ ಮೇಲೆ ನೀವು ಸ್ನಾನ ಮಾಡಲು ನೀರು ತುಂಬಿಕೊಳ್ಳುವ ಪಾತ್ರೆ ಅಥವಾ ಸ್ಟಬ್ ನಲ್ಲಿ ಬೇವಿನ ಎಣ್ಣೆಯನ್ನು 10 ರಿಂದ 15 ಹನಿಗಳಷ್ಟು ಹಾಕಿ. ನೀರಲ್ಲಿ ಬೇವಿನ ಎಣ್ಣೆ ಸಂಪೂರ್ಣವಾಗಿ ಮಿಶ್ರಣವಾಗುವಂತೆ ಮಾಡಿ ಸ್ನಾನ ಮಾಡಿ. ಸ್ನಾನ ಆದನಂತರ ಬೇವಿನ ಲೋಷನ್ ಬಳಸಿ, ಹೀಗೆ ಮಾಡಿದರೆ ಒಂದೇ ದಿನದಲ್ಲಿ ನಿವಾರಣೆಯಾಗಬಹುದು.

ಅಕಸ್ಮಾತ್ ಒಂದೇ ದಿನದಲ್ಲಿ ನಿವಾರಣೆಯಾಗದೆ ಇದ್ದರೆ ಇದರ ಪರಿಣಾಮವನ್ನು ಕಾಣಲು ಒಂದು ವಾರ ಬೇಕಾದರೂ ಆಗಬಹುದು ಇದರ ಬಳಕೆ ಮಿತವಾಗಿರಲಿ ಕಾಲಾನುಕ್ರಮೇಣ ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!