ನುಗ್ಗೆಕಾಯಿ ಅನ್ನೋದು ಹತ್ತಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುವಂತ ತರಕಾರಿಗಳಲ್ಲಿ ಒಂದಾಗಿದೆ ಇದರ ಮಹತ್ವ ನುಗ್ಗೆಕಾಯಿ ತಿಂದೋರಿಗೆ ಗೊತ್ತಿರುತ್ತದೆ. ನುಗ್ಗೆಕಾಯಿ ಅಸ್ತೇಯ ಲಲ್ದೆ ಇದರ ಎಲೆ ತೊಗಟೆ ಎಲ್ಲವು ಕೂಡ ಮನಷ್ಯನ ಶರೀರಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ. ನುಗ್ಗೆಕಾಯಿ ಅನ್ನೋದು ಎಲ್ಲರು ಸೇವಿಸಬಹುದಾದ ಶ್ರೇಷ್ಠ ತರಕಾರಿಯ ಆಹಾರವಾಗಿದ್ದು ನುಗ್ಗೆಕಾಯಿ ಸಾರು ಮುತಾಂದವುಗಳನ್ನು ಮಾಡಿ ಸೇವಿಸಬಹುದಾಗಿದೆ.

ನುಗ್ಗೆಕಾಯಿ ಅಡುಗೆಯಲ್ಲಿ ಬಳಸಿ ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗುವುದು ಹಾಗು ಸಂಗಾತಿಯೊಂದಿಗೆ ಹೆಚ್ಚು ಸುಖಪಡೆಯಲು ಆಸಕ್ತಿ ದೊರೆಯುವಂತೆ ಮಾಡುತ್ತದೆ. ಅಷ್ಟೇ ಅಲ್ದೆ ಶರೀರದ ಮೂಳೆಗಳನ್ನು ಆರೋಗ್ಯವಾಗಿ ಬಲವಾಗಿ ಬೆಳೆಯುವಂತೆ ಮಾಡುತ್ತದೆ.

ನುಗ್ಗೆಕಾಯಿ ಅಡುಗೆಯಲ್ಲಿ ಬಳಸಿ ಸೇವನೆ ಮಾಡುವುದರಿಂದ ಶ್ವಾಸ ಸಂಬಂಧಿ ಸೋಂಕುಗಳನ್ನು ತಡೆಯುತ್ತದೆ ಹಾಗೂ ಉರಿಮೂತ್ರ ನಿವಾರಣೆ ಮಾಡುವುದರ ಜೊತೆಗೆ ದೇಹಕ್ಕೆ ಒಳ್ಳೆಯದು. ಇದರಲ್ಲಿ ಶರೀರದಲ್ಲಿ ಬ್ಯಾಕ್ಟೀರಿಯಾಗಳು ಪ್ರವೇಶಿಸದಂತೆ ತಡೆಯುವ ಅಂಶವನ್ನು ಕಾಣಬಹುದಾಗಿದೆ.

ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ ಕಂಡುಬರುವ ಗಂಟಲು, ಚರ್ಮ ಮತ್ತು ಎದೆಯ ಸೋಂಕುಗಳನ್ನು ನಿವಾರಿಸುತ್ತದೆ. ಜೊತೆಗೆ ಹೆಚ್ಚು ಪ್ರಮಾಣದ ರಕ್ತಸ್ರಾವವನ್ನು ಕುಗ್ಗಿಸಿ ಹೆರಿಗೆಯ ಸಮಯದಲ್ಲಿ ಉಂಟಾಗುವ ಸಂಕಷ್ಟಗಳನ್ನು ನಿವಾರಿಸುತ್ತದೆ. ದೈಹಿಕವಾಗಿ ಅಷ್ಟೇ ಅಲ್ದೆ ಸೌಂದರ್ಯಕ್ಕೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇನ್ನು ಮಧುಮೇಹಿಗಳು ಅಂದರೆ ಸಕ್ಕರೆಕಾಯಿ ಇರೋರು ಈ ನುಗ್ಗೆಕಾಯಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಯಾಕೆಂದರೆ ಇದರಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ ರಕ್ತವನ್ನು ಶುದ್ದೀಕರಿಸುವ ಗುಣ ಇದೆ ಆದ್ದರಿಂದ ನುಗ್ಗೆ ಸೇವನೆ ಉತ್ತಮ.

ಇನ್ನು ಅನೇಕ ಸಮಸ್ಯೆಗಳಿಗೆ ನುಗ್ಗೆ ಕಾಯಿ, ಎಲೆ, ಹೂವು, ಎಲ್ಲವು ಕೂಡ ಔಷಧಿಯಾಗಿ ಕೆಲಸ ಮಾಡುತ್ತದೆ ಈಗಲೂ ಸಹ ಗ್ರಾಮೀಣ ಪ್ರದೇಶದ ಜನರು ನುಗ್ಗೆಯನ್ನು ಹಲವು ನಾಟಿ ಔಷಧಿಗಳಿಗೆ ಬಳಸುತ್ತಾರೆ ಇದರಲ್ಲಿ ಮನುಷ್ಯನಿಗೆ ಅವಶ್ಯಕವಾಗಿ ಬೇಕಾಗಿರುವಂತ ಹತ್ತಾರು ಲಾಭಗಳನ್ನು ಪಡೆಯಬಹುದಾಗಿದೆ. ನಿಮಗೆ ಈ ನುಗ್ಗೆಯ ಆರೋಗ್ಯಕಾರಿ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

By

Leave a Reply

Your email address will not be published. Required fields are marked *