ರಾಮಾಯಣದ ಸೀತಾಮಾತೆಯ ಬಗ್ಗೆ ಯಾರಿಗೆ ತಿಳಿದಿಲ್ಲ.ಸೀತಾ ಶ್ರೀರಾಮನ ಪತ್ನಿಯಾಗಿದ್ದಳು.ಮೊದಲು ಜನಕನ ಸಾಕು ಮಗಳಾಗಿದ್ದರಿಂದ ಅವಳನ್ನು ಜಾನಕಿ ಎಂದು ಕರೆಯಲಾಗುತ್ತದೆ. ನಂತರ ಶ್ರೀರಾಮನ ಮದುವೆಯಾಗಿ ತನ್ನ ನಿಷ್ಠೆ,ತ್ಯಾಗಗಳಿಂದ ಪತಿವ್ರತೆಯಾಗಿ ಸೀತಾಮಾತೆ ಆದಳು.ಆದರೆ ಅವಳು ಒಂದು ಸಮಯದಲ್ಲಿ ಶಾಪ ಕೊಟ್ಟಿದ್ದಳು. ರಾಮಾಯಣದಲ್ಲಿ ಸೀತೆಯು ಯಾವಾಗ ಮತ್ತು ಯಾರಿಗೆ ಶಾಪ ಕೊಟ್ಟಿದ್ದಳು ಎನ್ನುವುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶ್ರೀರಾಮನು ಭಗವಾನ್ ವಿಷ್ಣುವಿನ ಅವತಾರ ಎಂದು ಎಲ್ಲರಿಗೂ ತಿಳಿದಿದೆ.ಹಾಗೆಯೇ ಲಕ್ಷ್ಮೀ ಕೂಡ ಸೀತಾಮಾತೆಯ ಇನ್ನೊಂದು ಅವತಾರ ಧರಿಸಿ ಭೂಮಿಯಲ್ಲಿ ಜನಿಸಿದ್ದಳು.ಶ್ರೀರಾಮನ ತಂದೆ ದಶರಥ ಮಹಾರಾಜ.ದಶರಥ ಮಹಾರಾಜನ ಸಾವಿನ ನಂತರ ರಾಮ, ಲಕ್ಷ್ಮಣ ಮತ್ತು ಸೀತೆ ಪಿಂಡಪ್ರದಾನ ಮಾಡಲು ಬಿಹಾರದ ಬೋಧ್ ಗಯಾಗೆ ತೆರಳಿದ್ದರು.ಈ ಸಂದರ್ಭದಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆಯಿಂದ ಸೀತಾಮಾತೆ ನಾಲ್ವರಿಗೆ ಶಾಪ ಕೊಟ್ಟಿದ್ದಳು.ಅದರ ಶಾಪ ಇಂದಿಗೂ ಇದ್ದು ಈಗಲೂ ಅನುಭವಿಸುತ್ತಿದ್ದಾರೆ.

ಆ ಅನಿರೀಕ್ಷಿತ ಘಟನೆಯೇನೆಂದರೆ ಪಿಂಡಪ್ರದಾನ ಮಾಡಲು ಮೂರು ಜನ ಹೋದಾಗ ಅದಕ್ಕೆ ಬೇಕಾದ ಅವಶ್ಯ ಸಾಮಗ್ರಿಗಳನ್ನು ಮರೆತುಬಿಟ್ಟಿದ್ದರು.ಅವೆಲ್ಲವುಗಳನ್ನು ತರಲು ರಾಮ ಮತ್ತು ಲಕ್ಷ್ಮಣ ಹೋಗುತ್ತಾರೆ. ಆಗ ಸೀತಾಮಾತೆ ಒಬ್ಬರೇ ಗಯಾದಲ್ಲಿ ಇದ್ದರು.ಬಹಳ ಸಮಯವಾದರೂ ರಾಮ ಮತ್ತು ಲಕ್ಷ್ಮಣ ಮರಳಿ ಬರಲಿಲ್ಲ. ಪಿಂಡದ ಸಮಯ ಕೂಡ ಹತ್ತಿರ ಬಂದಿತ್ತು.ಆಗ ಪ್ರತ್ಯಕ್ಷರಾದ ದಶರಥಮಹಾರಾಜ “ನನಗೆ ತುಂಬಾ ಹಸಿವಾಗುತ್ತಿದೆ.ಬೇಗ ಪಿಂಡ ಪ್ರದಾನ ಮಾಡಿ” ಎಂದು ಕೇಳಿಕೊಂಡಾಗ ಸೀತೆಯು ” ನಿಮ್ಮ ಮಕ್ಕಳು ಬಂದ ಬಳಿಕ ಪಿಂಡಪ್ರದಾನ ಮಾಡುತ್ತಾರೆ” ಎಂದು ಹೇಳುತ್ತಾಳೆ.

ಆಗ ದಶರಥನು ಕಾಯಲು ನಿರಾಕರಿಸಿ “ನೀನೇ ಪಿಂಡ ಪ್ರದಾನ ಮಾಡು” ಎಂದು ಹೇಳುತ್ತಾನೆ.ನಂತರ ಸಕಲವಿಧಿವಿಧಾನಗಳಿಂದ ಅಲ್ಲಿರುವ ಸಾಮಗ್ರಿಗಳಿಂದ ಸೀತೆ ಪಿಂಡಪ್ರದಾನ ಮಾಡಿದಳು.ಅಲ್ಲಿ ಐವರು ಸಾಕ್ಷಿಗಳು ಪಿಂಡಪ್ರದಾನ ಮಾಡುವ ದ್ರಶ್ಯವನ್ನು ನೋಡುತ್ತಿದ್ದರು.ಆ ಐದು ಸಾಕ್ಷಿಗಳೆಂದರೆ ಆಲದಮರ,ಫಾಲ್ಗುನದಿ, ಒಂದು ಹಸು,ಒಂದು ತುಳಸಿಗಿಡ, ಓರ್ವ ಬ್ರಾಹ್ಮಣ.ನಂತರ ರಾಮಲಕ್ಷ್ಮಣರು ಆಗಮಿಸಿದಾಗ “ತಾನು ಪಿಂಡಪ್ರದಾನ ಮಾಡಿದ್ದೇನೆ ಮತ್ತು ಐವರು ಸಾಕ್ಷಿಗಳು ಇದ್ದಾರೆ” ಎಂದು ಹೇಳುತ್ತಾಳೆ.ಸಾಕ್ಷಿಗಳನ್ನು ರಾಮನು ಕೇಳಿದಾಗ ಆಲದಮರವನ್ನು ಬಿಟ್ಟು ಉಳಿದ ಸಾಕ್ಷಿಗಳು ಸುಳ್ಳು ಹೇಳುತ್ತಾರೆ.

ಆಗ ಪ್ರತ್ಯಕ್ಷನಾದ ದಶರಥನು ಸೀತೆ ಪಿಂಡಪ್ರದಾನ ಮಾಡಿದ ವಿಚಾರವನ್ನು ಹೇಳುತ್ತಾನೆ.ಇದರಿಂದ ಸೀತಾಮಾತೆ ಹೇಳಿದ್ದು ನಿಜ ಎಂದು ರಾಮ ನಂಬುತ್ತಾನೆ.ತನ್ನ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಹೇಳಿದವರ ವಿರುದ್ಧ ಸೀತೆಗೆ ಭಯಂಕರ ಕೋಪ ಬರುತ್ತದೆ. ಫಾಲ್ಗುನದಿಗೆ ಫಾಲ್ಗುನದಿಯು ಯಾವಾಗಲೂ ಕೆಳಗೆಯೇ ಹರಿಯಬೇಕು. ಮೇಲೆ ಒಣಗಿಯೇ ಇರಬೇಕು ಎಂದು ಶಾಪ ನೀಡುತ್ತಾಳೆ.ಹಸುವಿಗೆ ಎಲ್ಲರ ಮನೆಯಲ್ಲೂ ದಿನನಿತ್ಯ ಪೂಜೆ ನಡೆಯಬೇಕು ಆದರೆ ಅವರು ಉಳಿದಿದ್ದು ಮತ್ತು ಹಳಸಿದ್ದು ಹಾಕಬೇಕು ಎಂದು ಶಾಪ ನೀಡುತ್ತಾಳೆ.

ಅದೇ ರೀತಿ ತುಳಸಿಗೆ ಗಯಾದಲ್ಲಿ ಒಂದೇ ಒಂದು ತುಳಸಿಯ ಗಿಡ ಕೂಡ ಇರಬಾರದು ಎಂದು ಶಾಪ ನೀಡುತ್ತಾಳೆ.ಅದೇ ರೀತಿ ಬ್ರಾಹ್ಮಣನಿಗೆ ಗಯಾದಲ್ಲಿ ಯಾವತ್ತೂ ಬ್ರಾಹ್ಮಣರು ತೃಪ್ತಿಯಿಂದ ಬದುಕುವುದಿಲ್ಲ.ಬಡತನದಲ್ಲೇ ಬದುಕುತ್ತಾರೆ ಎಂದು ಕೋಪದಿಂದ ಹೇಳುತ್ತಾಳೆ. ನಂತರ ತನ್ನ ಪರವಾಗಿ ಸಾಕ್ಷಿ ನೀಡಿದ ಆಲದಮರಕ್ಕೆ ಸೀತೆಯು ವರವನ್ನು ನೀಡುತ್ತಾಳೆ. ಗಯಾಗೆ ಯಾರೇ ಪಿಂಡಪ್ರದಾನ ಮಾಡಲು ಬಂದರೂ ಕೂಡ ನಿನಗೂ ಪಿಂಡಪ್ರದಾನ ಮಾಡುತ್ತಾರೆ ಎಂದು ವರವನ್ನು ನೀಡುತ್ತಾಳೆ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!