ಇದು ಐಪಿಎಲ್ ಕ್ರಿಕೆಟ್ ಹಬ್ಬದ ದಿನಗಳು. ಈಗ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದಲ್ಲಿ ಆಡುತ್ತಿರುವ ಉದಯೋನ್ಮುಖ ಆಟಗಾರ ದೇವದತ್ ಪಡಿಕ್ಕಲ್. ದೇವದತ್ ಪಡಿಕ್ಕಲ್ ಅವರ ಊರು, ಜೀವನ ಶೈಲಿ ಹಾಗೂ ಕ್ರಿಕೆಟ್ ಆಟದಲ್ಲಿ ಆಯ್ಕೆಯಾದ ಅವರ ದಾರಿಯ ಕುರಿತು ನಾವು ಇಲ್ಲಿ ತಿಳಿಯೋಣ.

ದೇವದತ್ ಪಡಿಕ್ಕಲ್ ಮೂಲ ಕೇರಳದವರು. ಆದರೆ ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ರಣಜಿ ಆಟಗಾರ ಪಡಿಕ್ಕಲ್ ಪೂರ್ತಿ ಹೆಸರು ದೇವದತ್ ಬಾಬೂಲು ಪಡಿಕ್ಕಲ್. ಅವರ ನಿಕ್ ನೇಮ್ ದೇವ್ ಎಂದು. ವೃತ್ತಿಯಲ್ಲಿ ಕ್ರಿಕೆಟ್ ಆಟಗಾರ. ಪಡಿಕ್ಕಲ್ ಅವರು ಹುಟ್ಟಿದ್ದು ಜುಲೈ 7, 2000. ಕೇವಲ ಇಪ್ಪತ್ತು ವರ್ಷ. ಹುಟ್ಟಿದ ಊರು ಯಡಪ್ಪಲ್ ಕೇರಳ. ಎತ್ತರ 5.9 ಅಡಿ ಎತ್ತರವಿದ್ದಾರೆ. 65 ಕೆಜಿ ತೂಕ ಹೊಂದಿದ್ದಾರೆ. ಕರ್ಕ ರಾಶಿಯವರು. ಪಡಿಕ್ಕಲ್ ಓದಿದ್ದು ಆರ್ಮಿ ಪಬ್ಲಿಕ್ ಸ್ಕೂಲ್. ಪದವಿ ವಿಧ್ಯಾಭ್ಯಾಸವನ್ನು ಸೆಂಟ್ ಜೋಸೆಫ್ ಕಾಲೇಜ್ ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದವರು. ರಿಲೇಶನ್ ಶಿಪ್ ಸ್ಟೇಟಸ್ ಸಿಂಗಲ್ ಎಂದಿದೆ. ಹಾಡು ಕೇಳುವುದು, ಸಿನೆಮಾ ಹಾಗೂ ಪುಟ್ಬಾಲ್ ಆಟ ನೋಡುವುದು ಇವರ ನೆಚ್ಚಿನ ಹವ್ಯಾಸ. ಎಡಗೈ ಆಟಗಾರನಾದ ಇವರ ಜೆರ್ಸಿ ಸಂಖ್ಯೆ 37. ಆದರೆ ಬೌಲಿಂಗ್ ಬಲಗೈ ಹಾಫ್ ಬ್ರಿಕ್ಸ್ ಆದರೆ ಆಟದ ರೀತಿ ಅಗ್ರೆಸ್ಸಿವ್. ಬಳ್ಳಾರಿ ಟಸ್ಕರ್ಸ್, ರಾಯಲ್ ಚಾಲೆಂಜರ್ಸ್, ಬೆಂಗಳೂರು, ಕರ್ನಾಟಕ ರಣಜಿ ಇವರು ಆಡಿದ ತಂಡಗಳ ಹೆಸರು. ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿಂದ ಸಿಕ್ಕಿದೆ.

ರಾಹುಲ್ ದ್ರಾವಿಡ್ ಇವರ ನೆಚ್ಚಿನ ಆಟಗಾರ. ಎಂಟರಿಂದ ಹತ್ತು ಕೋಟಿ ಆಸ್ತಿ ಪಡಿಕ್ಕಲ್ ಹೊಂದಿದ್ದಾರೆ. ವರ್ಷಕ್ಕೆ ಇಪ್ಪತ್ತು ಲಕ್ಷ ಐಪಿಎಲ್ ನ ಸಂಭಾವನೆ. ಮೂವತ್ತು ಲಕ್ಷ ಪಡಿಕ್ಕಲ್ ನ ವಾರ್ಷಿಕ ಆದಾಯ. ಆಡಿ ಹಾಗೂ ಫಾರ್ಚೂನ್ ಕಾರುಗಳನ್ನು ಪಡಿಕ್ಕಲ್ ಹೊಂದಿದ್ದಾರೆ. ಒಂಬತ್ತನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಪ್ರಾರಂಭಿಸಿದ ದೇವದತ್ತ್, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ನಲ್ಲಿ 2009ರ ಬೇಸಿಗೆ ಶಿಬಿರಕ್ಕೆ ಸೇರಿದ್ದರು. ಕರ್ನಾಟಕದ ಅಂಡರ್ 14 ನಿಂದ ಪ್ರಪ್ರಥಮವಾಗಿ ಕ್ರಿಕೆಟ್ ಪಯಣ ಆರಂಭಿಸಿದರು. ಮೊದಲಿನಿಂದಲೂ ಓಪನರ್ ಆಗಿಯೆ ಪಡಿಕ್ಕಲ್ ಆಡುತ್ತಿದ್ದಾರೆ. ಕೆಪಿಎಲ್ ಟೂರ್ನಮೆಂಟ್ 2017ರಲ್ಲಿ ಬಳ್ಳಾರಿ ಟಸ್ಕರ್ಸ್ ಗೆ ಆಯ್ಕೆ ಆಗಿದ್ದರು. ಮಹಾರಾಷ್ಟ್ರದ ವಿರುದ್ಧ 2018 ರಲ್ಲಿ ಮೊದಲ ಬಾರಿ ಪಂದ್ಯ ಆಡಿದ್ದಾರೆ. ಅಂಡರ್ 19 ತಂಡಕ್ಕೆ 2018 ರಲ್ಲಿ ಭಾರತದ ತಂಡದಲ್ಲಿ ಸ್ಥಾನ ಪಡೆದಿದ್ದರು. ಆರ್.ಸಿ.ಬಿ ತಂಡ ಹರಾಜಿನಲ್ಲಿ ಇಪ್ಪತ್ತು ಲಕ್ಷ ಕೊಟ್ಟು 2018 ರಲ್ಲಿ ಕೊಂಡುಕೊಂಡಿತ್ತು. ಐಪಿಎಲ್ 2019 ರಲ್ಲಿ ಪಡಿಕ್ಕಲ್ ಗೆ ಆಡಲು ಅವಕಾಶ ಸಿಗಲಿಲ್ಲ‌. ತನ್ನ ಮೊದಲ ಪಂದ್ಯ ಐಪಿಎಲ್ 2020 ರಲ್ಲಿ 42 ಬಾಲ್ ಗೆ 56 ರನ್ ತೆಗೆದುಕೊಂಡು ತನ್ನತ್ತ ಎಲ್ಲರ ಗಮನ ಸೆಳೆದಿದ್ದಾರೆ.

ಇದು ದೇವದತ್ ಪಡಿಕ್ಕಲ್ ಅವರ ಜೀವನ ಶೈಲಿ, ಹಾಗೂ ಅವರ ಬಗೆಗಿನ ಕೆಲವು ವಿಚಾರಗಳು. ತನ್ನ ಪ್ರತಿಭೆಯಿಂದ ಹೆಸರು ಗಳಿಸುತ್ತಿರುವ ದೇವದತ್ ಪಡಿಕ್ಕಲ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದು, ತನ್ನ ಅದ್ಭುತ ಆಟದಿಂದ ಭಾರತಕ್ಕೆ ಒಳ್ಳೆಯ ಹೆಸರು ತಂದುಕೊಡಲಿ.

Leave a Reply

Your email address will not be published. Required fields are marked *