ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಈ- ಖಾತಾ ಎಂದರೇನು? ಈ ಮುಖ್ಯವಾದ ದಾಖಲೆ ಬಗ್ಗೆ ತಿಳಿದುಕೊಳ್ಳಿ

0 77

ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಮುಖ್ಯವಾದ ದಾಖಲೆ ಈ- ಖಾತಾ. ಮನೆ ಅಥವಾ ಸೈಟ್ ಕೊಂಡುಕೊಳ್ಳುವುದಾದರೆ ಹಾಗೂ ಸ್ವಂತ ಮನೆ ಅಥವಾ ಸೈಟ್ ಹೊಂದಿದ್ದರೂ ಈ – ಖಾತಾ ಬೇಕಾಗುತ್ತದೆ. ಈ ಖಾತಾ ಎಂದರೇನು, ಈ ಖಾತಾ ವರ್ಗಾವಣೆ ಅಥವಾ ರಿಜಿಸ್ಟ್ರಾರ್ ಎಲ್ಲಿ ಮಾಡಬಹುದು, ಈ ಖಾತಾ ದಾಖಲೆ ಮಾಡುವ ಉದ್ದೇಶಗಳು ಹಾಗೂ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಒಂದು ಆಸ್ತಿಯ ಬಗ್ಗೆ ಮಾಲೀಕನ ಹೆಸರು, ಗಾತ್ರ, ಸ್ಥಳ, ಪ್ರದೇಶ, ಆಸ್ತಿ ವಿವರ, ತೆರಿಗೆ ಒಳಗೊಂಡಿರುವ ದಾಖಲೆಯನ್ನು ಖಾತಾ ಎನ್ನುವರು. ಮನೆ ಅಥವಾ ಸೈಟಿಗೆ ಸಂಬಂಧಿಸಿ ಸ್ಥಳೀಯ ಮಹಾನಗರ ಪಾಲಿಕೆಯಲ್ಲಿ ಖಾತಾ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಮನೆ ಖಾತಾ ಪತ್ರ ಇರಬೇಕಾಗುತ್ತದೆ. ಪ್ರಸ್ತುತ ಕಂಪ್ಯೂಟರ್ ಯುಗ ಆಗಿರುವುದರಿಂದ ಮನೆಗೆ ಸಂಬಂಧಿಸಿದ ದಾಖಲೆಯನ್ನು ಕಂಪ್ಯೂಟರ್ ನಲ್ಲಿ ದಾಖಲಿಸಿ ಇಡಲಾಗುತ್ತದೆ ಹಾಗೂ ಅದಕ್ಕೆ ಒಂದು ಗುರುತಿನ ಸಂಖ್ಯೆಯನ್ನು ಪ್ರಾಪರ್ಟಿ ಐಡೆಂಟಿಫಿಕೇಶನ್ ನಂಬರ್ ಕೊಡಲಾಗುತ್ತದೆ. ಒಂದು ಸೈಟ್ ಅಥವಾ ಮನೆ ಸರ್ಕಾರದ ಅಗತ್ಯವಿರುವ ಎಲ್ಲಾ ತೆರಿಗೆ ನಿಯಮಗಳು ಮತ್ತು ಕಟ್ಟಡದ ಉಪಕಾನುನೂಗಳನ್ನು ಪೂರೈಸುವ ಆಸ್ತಿಗೆ ಈ ಖಾತಾ ಪ್ರಮಾಣ ಪತ್ರ ನೀಡಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಬೆಂಗಳೂರಿನಲ್ಲಿ ಕಾಣಬಹುದು.

ಸರ್ಕಾರದ ನಿಯಮಗಳನ್ನು ಮೀರದೆ ಖರೀದಿಯಾಗಿರುವ ಸೈಟ್ ಹಾಗೂ ಮನೆ ಈ ಖಾತಾ ಹೊಂದಿರುತ್ತದೆ. ನಾವು ಈ ಖಾತಾ ಮಾಡಿಸಲು ಬೆಂಗಳೂರು ಒನ್ ಸೆಂಟರ್ ಅಥವಾ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಡಾಟ್ ಸಕಾಲ ಡಾಟ್ ಕೆಎಆರ್ ಡಾಟ್ ಎನ್ ಐಸಿ ಡಾಟ್ ಇನ್ ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಸ್ಥಳೀಯ ವ್ಯಾಪ್ತಿಗೆ ಬರುವ ಪುರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಈ ಖಾತಾ ಅರ್ಜಿ ಸಲ್ಲಿಸಬಹುದಾಗಿದೆ. ಈ ಖಾತಾ ಬದಲಾವಣೆ ಅಥವಾ ವರ್ಗಾವಣೆ ಮಾಡಿಕೊಳ್ಳಲು ಈ ಮೇಲಿನ ವೆಬ್ಸೈಟ್ ಅಥವಾ ಸೆಂಟರ್ ಗಳಲ್ಲಿ ಅವಕಾಶವಿದೆ.

ಈ ಖಾತಾ ದಾಖಲೆಯನ್ನು ಹೊಂದಿದ್ದರೆ ಇದ್ದಲ್ಲಿಯೆ ಮನೆಯ ಬಗ್ಗೆ ಅಧಿಕೃತವಾಗಿ ತಿಳಿದುಕೊಳ್ಳಬಹುದು. ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಡಾಟ್ ಸಕಾಲ ಡಾಟ್ ಕೆಎಆರ್ ಡಾಟ್ ಎನ್ ಐಸಿ ಡಾಟ್ ಇನ್ ಈ ವೆಬ್ಸೈಟ್ ನಲ್ಲಿ ಈ ಖಾತಾ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಎಮ್ ಆರ್ ಸಿ ಡಾಟ್ ಜಿಒವಿ ಡಾಟ್ ಇನ್ ಈ ವೆಬ್ಸೈಟ್ ನಲ್ಲಿ ಈ ಖಾತಾ ಸರ್ಟಿಫಿಕೇಟ್ ನೋಡಬಹುದು. ಲಾಗಿನ್ ಆಗುವ ಮೂಲಕ ಮನೆಯ ಈ ಖಾತಾ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಬಹುದು. ಆಸ್ತಿಗೆ ಸಂಬಂಧಿಸಿದ ಈ ಖಾತಾ ಇಂದ ತೆರಿಗೆಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು. ಆಸ್ತಿ ತೆರಿಗೆ ಕಟ್ಟುವಲ್ಲಿ ಈ ಖಾತಾ ಪ್ರಮಾಣಪತ್ರ ಬಹಳ ಮುಖ್ಯವಾಗಿದೆ. ಆಸ್ತಿ ಅಥವಾ ಮನೆ ಖರೀದಿ ಮಾಡಬೇಕಾದರೆ ಆ ಮನೆಯ ಖಾತಾ ದಾಖಲೆಯನ್ನು ನೋಡಿದಾಗ ಅದರ ಸತ್ಯಾಸತ್ಯತೆ ತಿಳಿಯುತ್ತದೆ. ಈ ಖಾತಾ ದಾಖಲೆಯನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಂಡು ಅದನ್ನು ಹಲವು ಉದ್ದೇಶಗಳಿಗೆ ಬಳಸಬಹುದಾಗಿದೆ.

ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಡಾಟ್ ಸಕಾಲ ಡಾಟ್ ಕೆಎಆರ್ ಡಾಟ್ ಎನ್ ಐಸಿ ಡಾಟ್ ಇನ್ ಈ ವೆಬ್ಸೈಟ್ ಮೂಲಕ ಈ ಖಾತಾಕ್ಕೆ ಅರ್ಜಿ ಸಲ್ಲಿಸಿ ನಂತರ ಅರ್ಜಿಯ ಸ್ಟೇಟಸ್ ನೋಡಬಹುದು. ಗ್ರಾಮಠಾಣಾ ಪ್ರದೇಶದಲ್ಲಿ ಇ-ಸ್ವತ್ತು ದಾಖಲೆ ಇರುತ್ತದೆ ಹೀಗಾಗಿ ಆ ಪ್ರದೇಶದಲ್ಲಿ ಈ ಖಾತಾ ದಾಖಲೆ ಅನ್ವಯಿಸುವುದಿಲ್ಲ. ಈ ಖಾತಾ ದಾಖಲೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸ್ಥಳೀಯ ಪುರಸಭೆ ನಗರಸಭೆ ಮಹಾನಗರ ಪಾಲಿಕೆಗಳಲ್ಲಿ ಬರುವ ವಾರ್ಡಗಳಲ್ಲಿ ವಿಚಾರಿಸಿ.

Leave A Reply

Your email address will not be published.