ಬೇರೆ ಬೇರೆ ಊರುಗಳಿಗೆ ಹೋಗಿ ಸುತ್ತಾಡಿಕೊಂಡು ಬರುವುದು ಎಲ್ಲರಿಗೂ ಇಷ್ಟವೇ. ಹಾಗೆ ಟೂರ್ ಗೆ ಹೋಗುವ ಊರುಗಳಲ್ಲಿ ಸಿಂಗಾಪುರ ಕೂಡ ಒಂದು. ಸಿಂಗಾಪುರದ ಜೀವನಕ್ಕೂ ಭಾರತದ ಜೀವನಕ್ಕೂ ತುಂಬಾ ವ್ಯತ್ಯಾಸಗಳು ಇದೆ. ಅಲ್ಲಿನ ನಿಯಮಗಳು, ದರಗಳು, ಸಾರಿಗೆ ವ್ಯವಸ್ಥೆ ಇತ್ಯಾದಿಗಳೆಲ್ಲವೂ ಬೇರೆಯೆ.. ಅಲ್ಲಿ ಫೆರಾರಿ, ಫೊಷ್, ಇಂತಹ ಕಾಸ್ಟ್ಲಿ ಕಾರುಗಳು ಹೇಗಿವೆಯೊ ಅಷ್ಟೇ ಶ್ರೀಮಂತರು ಇದ್ದಾರೆ. ಆದರೂ ಅಲ್ಲಿ ಶೇಕಡಾ 95% ರಷ್ಟು ಜನರು ಅಲ್ಲಿಯ ಸಾರ್ವಜನಿಕ ವಾಹನಗಳಲ್ಲಿಯೇ ಓಡಾಡುವುದು ಯಾಕೆಂದರೆ ಅಲ್ಲಿ ಒಂದು ಮಾರುತಿ ಸುಜುಕಿ ಸ್ವಿಪ್ಟ್ ಕಾರಿಗೆ 50 ಲಕ್ಷಗಳಿಗು ಮಿಗಿಲಾಗಿದೆ.. ಬಸ್ ಗಳಲ್ಲಿ ಪ್ರಂಟ್ ಸೀಟ್ ನಲ್ಲಿ ಕುಳಿತು ಸುತ್ತಲೂ ನೋಡುತ್ತಾ ಕುಳಿತುಕೊಳ್ಳುವ ಮಜವೇ ಬೇರೆ ಎಂದು ನೋಡಿದವರ ಅಭಿಪ್ರಾಯ. ಸಿಂಗಾಪುರದ ಪೇರ್ ಪ್ರೈಸ್ ಸೂಪರ್ ಮಾರ್ಟ್ ನಲ್ಲಿ ದರಗಳು ಹೇಗಿದೆ ಎಂಬ ಚಿತ್ರಣ ಇಲ್ಲಿದೆ..
ಒಂದು ಸಿಂಗಾಪುರ ಡಾಲರ್ ಗೆ ಭಾರತದ ಕರೆನ್ಸಿಯಲ್ಲಿ 50ರೂಪಾಯಿ. ಆಲೂಗಡ್ಡೆ ಒಂದು ಕೆ.ಜಿ 170 ರೂಪಾಯಿಗಳು. ಈರುಳ್ಳಿ ಮೂರು ಕೆ.ಜಿ ಪ್ಯಾಕೆಟ್ 200 ರೂಪಾಯಿ. ಬೆಳ್ಳುಳ್ಳಿ ಕಾಲು ಕೆ.ಜಿಗೆ 100 ರೂಪಾಯಿ. ಕೊತ್ತಂಬರಿ ಸೊಪ್ಪು ಒಂದು ಕಟ್ಟು 50 ರೂಪಾಯಿ. ಕರಿಬೇವಿನ ಸೊಪ್ಪು ಒಂದು ಕಟ್ಟು 35 ರೂಪಾಯಿ. ಮೆಣಸು 40 ರೂಪಾಯಿ. 10 ಸೇಬು ಹಣ್ಣಿನ ಬೆಲೆ 200 ರೂಪಾಯಿಗಳು. ತೂಕಗಳನ್ನು ನಾವೇ ಮಾಡಿಕೊಳ್ಳಬೇಕು. ಒಂದುವೇಳೆ ಮೋಸಮಾಡಿರುವುದು ಅಲ್ಲಿಯ ಪೋಲಿಸ್ ಗೆ ಗೊತ್ತಾದರೆ ತಕ್ಷಣವೇ ಜೈಲಿಗೆ ಹಾಕಿ ಬೆತ್ತದೆಟು ತಿನ್ನಬೇಕಾಗುತ್ತದೆ. ಹಾಗಾಗಿ ಯಾರೂ ಮೋಸ ಮಾಡಲು ಹೋಗುವುದಿಲ್ಲ. ಟೊಮೆಟೊ ಒಂದು ಕಾಲು ಕೆ.ಜಿ ಗೆ 75 ರೂಪಾಯಿಗಳು. ಒಂದು ಪ್ಯಾಕೆಟ್ ಮೊಟ್ಟೆಯಲ್ಲಿ 30 ಮೊಟ್ಟೆ ಇರುತ್ತವೆ ಅದರ ಬೆಲೆ 175ರೂಪಾಯಿ. 2 ಮಾವಿನ ಹಣ್ಣಿಗೆ 225 ರೂಪಾಯಿಗಳು. ಎರಡು ಲೀಟರ್ ಹಾಲಿಗೆ 300ರೂಪಾಯಿಗಳು. ಒಂದು ಅರ್ಧ ಲೀಟರ್ ಮೊಸರಿಗೆ 500ರೂಪಾಯಿ. 7 ಬಾಳೆ ಹಣ್ಣಿಗೆ 120 ರೂಪಾಯಿ. ಐದು ಕೆ.ಜಿ ಅಕ್ಕಿಗೆ 400 ರೂಪಾಯಿಗಳು. ಎರಡು ಲೀಟರ್ ಅಡುಗೆ ಎಣ್ಣೆಗೆ 300 ರೂಪಾಯಿಗಳು. ಎರಡು ಕೆ.ಜಿ ಸಕ್ಕರೆಗೆ 150 ರೂಪಾಯಿಗಳು.
ಸೂಪರ್ ಮಾರ್ಕೆಟ್ ನ ಕೆಳಭಾಗದಲ್ಲಿ ಅಡುಗೆಗೆ ಬೇಕಾದ ವಸ್ತುಗಳನ್ನು ಜೋಡಿಸಿದ್ದರೆ ಮೇಲಿನ ಭಾಗದಲ್ಲಿ ಟಿವಿ, ಪ್ರಿಜ್, ಸೈಕಲ್ ಹಾಗೂ ಹುಡುಗರ ಮೆಚ್ಚಿನ ಬಿಯರ್ ಜೊಡಿಸಿದ್ದಾರೆ. ಒಂದು ಟಿನ್ ಕಿಂಗ್ ಫಿಷರ್ ಗೆ 170 ರೂಪಾಯಿ. ಕ್ಯಾಂಡ್ ಬಿಯರ್ ಗೆ 500 ರೂಪಾಯಿ ಒಂದು ಪ್ಯಾಕ್ ನಲ್ಲಿ ಆರು ಟಿನ್ ಇರುತ್ತದೆ. ಕೋಕಾ ಕೊಲಾ 12 ಟಿನ್ ಗೆ 450 ರೂಪಾಯಿಗಳು. ಸೂಪರ್ ಮಾರ್ಟ್ ಗಳಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಹೆಚ್ಚಿರುತ್ತದೆ. ಇಲೆಕ್ಟ್ರಾನಿಕ್ ಶಾಪ್ ಗೆ ಹೋದರೆ ಸ್ಪಲ್ಪ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಕೆಲ ಉಪಕರಗಳ ಬೆಲೆ ಇಂತಿದೆ. ಪ್ರಿಜ್ ಬೆಲೆ 20,000 ದಿಂದ 35,000 ದ ವರೆಗೆ ಇರುತ್ತದೆ. ವಾಷಿಂಗ್ ಮಶಿನ್ 12,000 ದಿಂದ 30,000 ಇರುತ್ತದೆ. ವ್ಯಾಕ್ಯೂಮ್ ಕ್ಲೀನರ್ 6,000 ದಿಂದ 7,000 ವರೆಗೂ ಇದೆ. ಏರ್ ಕಂಡಿಷನ್ 50,000 ದಿಂದ 1,50,000 ವರೆಗೂ ಇದೆ. ಸಿಂಗಾಪುರದ ಟಿ.ವಿ. ಭಾರಿ ಬೇಡಿಕೆ ಇರುವಂತದ್ದು. ಸುಮಾರಿಗೆ ಬಭಾರತದವರು ಟಿವಿ ಖರಿದಿಸಿ ಹೋಗುವುದು ಕಾಮನ್. 55 ಇಂಚು ಉದ್ದದ ಎಲ್.ಇ.ಡಿ. ಟಿವಿಯ ಬೆಲೆ 12,000 ದಿಂದ 40,000.. ಇನ್ನು ಸೈಕಲ್ ವಿಷಯಕ್ಕೆ ಬಂದರೆ ಸಿಂಗಾಪುರದ ಅತಿ ಶ್ರೀಮಂತರೂ ಸೈಕಲ್ ಬಳಸುತ್ತಾರೆ. ಹೈ ಕ್ವಾಲಿಟಿ ಸೈಕಲ್ ಬೆಲೆ 7500 ರೂಪಾಯಿ. ಪೊಲ್ಡೆಬಲ್ ಸೈಕಲ್ ಬೆಲೆ 5,000 ದಿಂದ 8,000 ರೂಪಾಯಿ. ಕೆಲವೊಂದು ವಸ್ತುಗಳ ಬೆಲೆ ಹೋಲಿಕೆ ಮಾಡಿದಾಗ ತುಂಬಾ ದುಬಾರಿ ಎನ್ನಿಸುತ್ತದೆ. ಅಲ್ಲಿಯ ಹೋಟೆಲ್ ಗಳಲ್ಲಿ ಆರ್ಡರ್ ಮಾಡಲು ಯಾವ ತಿಂಡಿ ಬೇಕೆಂದು ಮಶಿನ್ ನಲ್ಲಿ ಸೆಲೆಕ್ಟ್ ಮಾಡಿ ATM ಕಾರ್ಡ್ ಗಳಲ್ಲಿ ಬಿಲ್ ಪೇ ಮಾಡಿದರಾಯಿತು. ಸಿಂಗಾಪುರದ ಸುಮಾರಿನ ಎಲ್ಲಾ ವಸ್ತುಗಳು ಬೇರೆ ದೇಶದಿಂದಲೆ ಬರುವುದು. ಇದು ಸಿಂಗಾಪುರದ ದರಗಳ ಸಣ್ಣ ಚಿತ್ರಣ.