ಊರೂರು ನೋಡುವುದು ಎಂದರೆ ಎಲ್ಲರಿಗೂ ಖುಷಿಯ ವಿಷಯವೇ. ಆದರೆ ಹೋರಗೆ ಹೋಗುವಾಗ ವಾಹನದ ವ್ಯವಸ್ಥೆ ಅತಿ ಮುಖ್ಯ. ಡಿ.ಎಲ್. ಹಾಗೂ ಎಲ್. ಎಲ್. ಆರ್ ತುಂಬಾ ಮುಖ್ಯ ವಾಗಿರುತ್ತದೆ. ಹಾಗಾದರೆ ಡಿಎಲ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ, ಬೇಕಾಗುವ ಡಾಕ್ಯುಮೆಂಟ್ ವಿವರಗಳು ಯಾವುದು. ಡಿ.ಎಲ್ ಗೆ ಅರ್ಜಿ ಸಲ್ಲಿಸಲು ಒಂದು ಅಡ್ರೆಸ್ ಪ್ರೂಫ್ ಹಾಗೂ ಒಂದು ಏಜ್ ಪ್ರೂಫ್ ಬೇಕು. ಅಡ್ರೆಸ್ ಪ್ರೂಫ್ ಗಾಗಿ ಆಧಾರ ಕಾರ್ಡ್ ಬಳಸುವುದು ಉತ್ತಮ. ಏಜ್ ಪ್ರೂಫ್ ಗಾಗಿ SSLC ಮಾರ್ಕ್ಸ್ ಕಾರ್ಡ್ ಇಲ್ಲವೇ ಎಲ್ ಸಿ. ಇದ್ದರೂ ನಡೆಯುತ್ತದೆ. ಶಾಲೆಗೆ ಹೋಗಿಲ್ಲವಾದಲ್ಲಿ ವಕೀಲರ ಬಳಿ ಅಫಿಡಿವಿಟ್ ಮಾಡಿಸಿ ಕೊಡಬಹುದು. ಅರ್ಜಿ ಹಾಕಲು ಬೋರ್ಡ್ ಆಫ್ ರೊಡ್ ಟ್ರಾನ್ಸಪೊರ್ಟ್ ಆ್ಯಂಡ್ ಹೈವೆ ಯವರ ವೆಬ್ ಸೈಟ್ ನಲ್ಲಿ ರಾಜ್ಯವನ್ನು ಸೆಲೆಕ್ಟ್ ಮಾಡಿ ನಂತರದ ಪೆಜ್ ನಲ್ಲಿ ಅಪ್ಲೈ ಅನ್ಲೈನ್ ಅನ್ನು ಸೆಲೆಕ್ಟ್ ಮಾಡಿ ನ್ಯೂ ಲರ್ನರ್ ಲೈಸೆನ್ಸ್ ಗೆ ಅಪ್ಲೈ ಮಾಡಬೇಕು. ನಂತರ ಐದು ಅಯ್ಕೆಗಳನ್ನು ತೋರಿಸುತ್ತದೆ.

ಅರ್ಜಿ ಭರ್ತಿ, ಡಾಕ್ಯುಮೆಂಟ್ ಅಪ್ಲೋಡ್, ಸಿಗ್ನೇಚರ್ ಅಪ್ಲೋಡ್, ಪೋಟೊ ಅಪ್ಲೋಡ್, ಪೇಯ್ಮೆಂಟ್ ಹೀಗೆ ಆಯ್ಕೆಗಳು ಬಂದಾಗ ಕಂಟಿನ್ಯೂ ಆಯ್ಕೆ ಮಾಡಲೆಬೇಕು. ಅಲ್ಲಿ ನಿಮ್ಮ ಲರ್ನರ್ ಲೈಸೆನ್ಸ್ ಸೆಲೆಕ್ಟ್ ಆಗಿರುತ್ತದೆ. ಸಬ್ಮಿಟ್ ಸೆಲೆಕ್ಟ್ ಮಾಡ ಬೇಕು ಆಗ ಅರ್ಜಿ ಪೊರ್ಮ್ ಬರುತ್ತದೆ ಅಲ್ಲಿ ಯಾವುದೆ ಅಕ್ಷರ ದೊಷವಿಲ್ಲದೆ ತುಂಬಬೇಕು. ರಾಜ್ಯ ಹಾಗೂ ಆರ್. ಟಿ.ಓ. ದ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು. ಯಾವ ಡಿಟೈಲ್ಸ್ ಬಳಿ ಕೆಂಪು ಸ್ಟಾರ್ ಮಾರ್ಕ್ ಇರುತ್ತದೆ ಅದನ್ನು ಬರೆಯಲೆಬೇಕು. ಇಲ್ಲವಾದರೆ ಮುಂದಿನ ಸ್ಟೆಪ್ ತೆಗೆದುಕೊಳ್ಳುವುದಿಲ್ಲ.ಹಾಗೆ ಕೆಳಗೆ ಬಂದರೆ ಅಲ್ಲಿ ವಿಳಾಸ ತುಂಬಬೇಕು. ನಿಮ್ಮ ಊರಿನಲ್ಲಿ ಎಷ್ಟು ವರ್ಷದಿಂದ ವಾಸವಾಗಿದ್ದಿರಾ ಎಂಬುದನ್ನು ಮರೆಯದೆ ತುಂಬಬೇಕು. ಅಲ್ಲಿ ಯಾವ ತರಹದ ಲೈಸೆನ್ಸ್ ಬೇಕು ಎಂದು ಕೇಳುತ್ತದೆ. ಗೇರು ಇರುವುದು, ಗೇರು ಇಲ್ಲದಿರುವುದು, ಆಟೋಗಳಿಗೆ ಹೀಗೆ.. ಅದರಲ್ಲಿ ಆದಷ್ಟು ಗೇರು ಇರುವುದನ್ನು ಆಯ್ಕೆ ಮಾಡಿಕೊಂಡು ಸಬ್ಮಿಟ್ ಮಾಡಿ ನಿಮ್ಮ ಅಪ್ಲಿಕೇಶನ್ ಫೀಲ್ ಆಯ್ತು.

ನಂತರದ ಪೇಜ್ ನಲ್ಲಿ ಅಪ್ಲಿಕೇಶನ್ ಪಾರ್ಮ್ ನಂಬರ್ ಇರುತ್ತೆ ಅದನ್ನು ಬರೆದಿಟ್ಡುಕೊಳ್ಳಿ. ಈಗ ಡಾಕ್ಯುಮೆಂಟ್ ಸಬ್ಮಿಟ್ ಮಾಡಬೇಕು ಅದು 200 ಕೆ.ಬಿ ಗಿಂತ ಕಡಿಮೆ ಇರಬೇಕು. ಇಲ್ಲಿ ಏಜ್ ಪ್ರೂಫ್, ಅಡ್ರೆಸ್ ಪ್ರೂಫ್ ಹಾಗೂ ಪಾರ್ಮ್ ಅಪ್ಲೋಡ್ ಮಾಡಬೇಕು ಅದು ಗ್ರೀನ್ ಆಗಿ ಸಬ್ಮಿಟ್ ಆಗಿದೆ ಎಂದು ತೊರಿಸಿದ ಮೇಲೆ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು. ಈಗ ಫೋಟೊ ಮತ್ತು ಸಿಗ್ನೇಚರ್ ನ್ನು ಸ್ಕಾನ್ ಮಾಡಿ ಅಪ್ಲೋಡ್ ಮಾಡಬೇಕು. 20 ಕೆ. ಬಿ ಗಿಂತ ಕಡಿಮೆ ಇರಬೇಕು. ನಂತರ ನೆಕ್ಸ್ಟ್ ಆಯ್ಕೆ ಮಾಡಿ. ಪರೀಕ್ಷೆಗೆ ಸ್ಲೋಟ್ ಸೆಲೆಕ್ಟ್ ಮಾಡಬೇಕು ಯಾವ ತಿಂಗಳಲ್ಲಿ ಬೇಕು ನಿಮ್ಮ ಆಯ್ಕೆಗೆ ಬಿಟ್ಟಿದೆ. ಸ್ಲೊಟ್ ಬುಕ್ ಮಾಡಿ ಪ್ರೊಸಿಡ್ ಅಯ್ಕೆ ಮಾಡಿದಾಗ ನಂತರ ಪೀಸ್ ಪೇಯ್ಮೆಂಟ್ ಮಾಡಬೇಕು ಅಲ್ಲಿ ಎಷ್ಟು ಪೇ ಮಾಡಬೇಕು ಎಂಬ ಮಾಹಿತಿ ಇರುತ್ತದೆ. ಅದನ್ನು ಯಾವುದೇ ತರಹದ ಕಾರ್ಡ್ ಹಾಗೂ ಆನ್ಲೈನ್ ಪೇಯ್ಮೆಂಟ್ ಮಾಡಬಹುದು. ನಂತರ ನೀವು ಆಯ್ಕೆ ಮಾಡಿದ ಸ್ಲಾಟ್ ನಲ್ಲಿ ಪರೀಕ್ಷೆ ಮುಗಿಸಿ ಬಂದರೆ ಆಯಿತು. ಪರೀಕ್ಷೆ ಪಾಸ್ ಆಗಿದ್ದಲ್ಲಿ ನಿಮ್ಮ ಇ- ಮೇಲ್ ಐಡಿಗೆ ನಿಮ್ಮ ಎಲ್.ಎಲ್.ಆರ್ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!