ಕಡಿಮೆ ಬೆಲೆಯಲ್ಲಿ ಅಧಿಕ ಇಳುವರಿಯನ್ನು ಪಡೆಯುವ ಬಾಳೆ ಬೆಳೆಯನ್ನು ಬೆಳೆಸುವ ವಿಧಾನದ ಬಗ್ಗೆ ಖರ್ಚು ವೆಚ್ಚಗಳು, ಲಾಭದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಬಾಳೆ ಹಣ್ಣಿನ ಕೃಷಿಯನ್ನು 3 ವರ್ಷದಿಂದ 4 ಎಕರೆಯಲ್ಲಿ ಬೆಳೆದಿದ್ದಾರೆ. 11 ರೂಪಾಯಿಗೆ ಒಂದು ಗಿಡ ಸಿಗುತ್ತದೆ ಅದನ್ನು ತಂದು ತಗ್ಗು ತೋಡಿ ಗೊಬ್ಬರ ಹಾಕಿ 6 ಫೀಟ್ ಗೊಂದು ನೆಡಬೇಕು 1 ಎಕರೆಗೆ 1,250 ಗಿಡಗಳನ್ನು ನೆಡಬಹುದು. ಒಂದು ವರ್ಷಕ್ಕೆ 10,000ರೂ ಖರ್ಚಾಗುತ್ತದೆ. ತಿಪ್ಪೆ ಗೊಬ್ಬರ ಮತ್ತು ನೀರನ್ನು ಸರಿಯಾಗಿ ಹಾಕಬೇಕು. ಕುರಿ ಗೊಬ್ಬರ ವರ್ಷಕ್ಕೆ 2 ಬಾರಿ ಹಾಕುವುದರಿಂದ ಬಾಳೆ ಬೆಳೆಗೆ ಉತ್ತಮ.

ಇನ್ನು ನೀರನ್ನು ಡ್ರಿಪ್ ಮೂಲಕ ಹಾಕಬೇಕು ಇದರಿಂದ ನೀರು ಹಾಕಲು ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಗಿಡಗಳ ಹತ್ತಿರ ಹುಲ್ಲುಗಳಿದ್ದರೆ ಅದನ್ನು ಕಡಿದು ಅಲ್ಲಿಯೆ ಮುಚ್ಚುವುದುರಿಂದ ಅದಕ್ಕೆ ಗೊಬ್ಬರವಾದಂತಾಗುತ್ತದೆ. ಬಾಳೆ ಬೆಳೆಗೆ ರೋಗ ಬಾಧೆ ಇರುವುದಿಲ್ಲ. ನೀರು ಹೆಚ್ಚಾದಾಗ ಕೆಂಪು ರೋಗ ಬರುತ್ತದೆ ಗೊಬ್ಬರವನ್ನು ಸರಿಯಾಗಿ ಹಾಕುವುದರಿಂದ ಈ ರೋಗ ನಿವಾರಣೆಯಾಗುತ್ತದೆ. 10 ತಿಂಗಳಿಗೆ ಬಾಳೆಗೊನೆ ಕಟಾವಿಗೆ ಬರುತ್ತದೆ. 1 ಎಕರೆಗೆ 5-6 ಲಕ್ಷ ಆದಾಯ ಬರುತ್ತದೆ. ಸರ್ಕಾರದಿಂದ ಸವಲತ್ತು ಸಿಗುವುದು. ಗಿಡಗಳನ್ನು ಕೊಳ್ಳಲು ಸರಕಾರವೇ ಹಣ ಕೊಡುತ್ತದೆ. ಮಾರ್ಕೆಟ್ ನಲ್ಲಿ ಬೆಲೆ ಚೆನ್ನಾಗಿದ್ದರೆ ಲಾಭ ಬರುತ್ತದೆ. ಕಡಿಮೆ ಬೆಲೆ ಅಂದರೂ 1 k.g ಗೆ 7-8ರೂ ಇರುತ್ತದೆ. ಸರಿಯಾಗಿ ಗೊಬ್ಬರ ನೀರನ್ನು ಕೊಟ್ಟರೆ 5 ವರ್ಷದವರೆಗೆ ಬೆಳೆ ಬರುತ್ತಿರುತ್ತದೆ.

1 ಎಕರೆಯಲ್ಲಿ 100 ಟನ್ ಬಾಳೆ ಕಾಯಿಯನ್ನು ಬೆಳೆಯಬಹುದು. ಬಾಳೆ ಬೆಳೆಯ ಸಮಸ್ಯೆ ಎಂದರೆ ಬಾಳೆ ಹಣ್ಣಾದಾಗ ಗಾಳಿ ಬೀಸುವುದರಿಂದ ಬಾಳೆ ಗಿಡ ಬಾಗುತ್ತದೆ ಇದನ್ನು ತಪ್ಪಿಸಲು ಕಟ್ಟಿಗೆಯನ್ನು ಸಹಾಯಕ್ಕಾಗಿ ಕಟ್ಟಬೇಕು. ಯುವಕರು ಕೆಲಸಕ್ಕಾಗಿ ಬೇರೆ ಬೇರೆ ಕಡೆ ಹೋಗುವುದಕ್ಕಿಂತ 4 ಎಕರೆ ಹೊಲವಿದ್ದರೆ ಪ್ರತಿತಿಂಗಳು 50,000ರೂ ಹಣ ಪಡೆಯಬಹುದು. ಬಾಳೆ ತೋಟವನ್ನು ಒಬ್ಬರಿಂದಲೂ ನಿರ್ವಹಣೆ ಮಾಡಬಹುದಾಗಿದೆ. ದಿನದಲ್ಲಿ ಇಷ್ಟು ಸಮಯ ಕೆಲಸ ಮಾಡಬೇಕೆಂದಿಲ್ಲ. ದಿನದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟರೆ ಬಾಳೆ ಬೆಳೆಯನ್ನು ನಿರ್ವಹಣೆ ಮಾಡಬಹುದಾಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಅಧಿಕ ಇಳುವರಿಯನ್ನು ಬಾಳೆ ಬೆಳೆಯಿಂದ ಸಿಗುತ್ತದೆ.

Leave a Reply

Your email address will not be published. Required fields are marked *

error: Content is protected !!