ಸಿಂಹ ರಾಶಿಯವರಿಗೆ ಅಂದುಕೊಂಡ ಕೆಲಸ ಸುಲಭವಾಗುತ್ತಾ? ಧನುರ್ಮಾಸದ ಪ್ರಭಾವ ಯಾವ ರೀತಿ ಇರುತ್ತೆ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಾವಿಂದು ಸಿಂಹ ರಾಶಿಯವರಿಗೆ ಧನುರ್ಮಾಸದ ಪ್ರಭಾವ ಯಾವ ರೀತಿಯಾಗಿ ಇರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಧನುರ್ಮಾಸ ಎಂಬುದು ರವಿಯ ಸಂಚಾರದಿಂದ ಉಂಟಾಗುತ್ತದೆ ಧನು ರಾಶಿಗೆ ಯಾವಾಗ ರವಿಗ್ರಹ ಪಾದಾರ್ಪಣೆಯನ್ನು ಮಾಡುತ್ತಾನೆ ಆಗ ಧನುರ್ ಮಾಸ ಪ್ರಾರಂಭವಾಗುತ್ತದೆ ಧನುರ್ ಬಿಟ್ಟು ಮಕರ ರಾಶಿಗೆ ಹೋದಾಗ ಮಕರ ಸಂಕ್ರಾಂತಿ ಪ್ರಾರಂಭವಾಗುತ್ತದೆ. ಧನುರ್ ಮಾಸದಲ್ಲಿ ಸಿಂಹರಾಶಿಯವರಿಗೆ ಯಾಕೆ ವಿಶೇಷ ಪ್ರಭಾವ ಎಂದರೆ ನಿಮ್ಮ ರಾಶ್ಯಾಧಿಪತಿ ರವಿ ಆಗಿದ್ದಾನೆ. ಪಂಚಮದಲ್ಲಿ ಲಾಭವನ್ನು ನೋಡುತ್ತಾನೆ ಇದು ಒಂದಿಷ್ಟು ವಿಷಯಗಳಲ್ಲಿ ಒಳ್ಳೆಯದು. ಒಂದಿಷ್ಟು ವಿಚಾರಗಳಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಯಾವ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಯಾವ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ.

ಮೊದಲನೆಯದಾಗಿ ರಾಶ್ಯಾಧಿಪತಿ ಪಂಚಮಕ್ಕೆ ಹೋದ ಎಂದರೆ ತುಂಬಾ ಒಳ್ಳೆಯದು. ಧನುರ್ ಮಾಸ ಸಿಂಹರಾಶಿಯವರಿಗೆ ತುಂಬಾ ಲಾಭವನ್ನು ಒಳ್ಳೆಯದನ್ನ ತಂದುಕೊಡುತ್ತದೆ. ಜೊತೆಗೆ ಗುರುಬಲ ಇರುವುದರಿಂದ ಕೈಹಾಕಿದ ಕೆಲಸಗಳೆಲ್ಲವೂ ಯಶಸ್ವಿಯಾಗುತ್ತದೆ. ಮನೆಕಟ್ಟಬೇಕು ಎಂದು ಕೊಂಡಿರುವವರು ಆಸ್ತಿ ಖರೀದಿಸಬೇಕು ಎಂದುಕೊಂಡಿರುವವರಿಗೆ ಒಳ್ಳೆಯ ಸಮಯವಾಗಿದೆ.

ಕೆಲವರು ಧನುರ್ ಮಾಸ ಆ ಕೆಲಸ ಮಾಡಬಾರದು ಈ ಕೆಲಸ ಮಾಡಬಾರದು ಎಂದುಕೊಂಡಿರುತ್ತಾರೆ ಆದರೆ ಧನುರ್ ಮಾಸ ತುಂಬಾ ಶ್ರೇಷ್ಠವಾದ ಮಾಸವಾಗಿದೆ. ಧನುರ್ ಮಾಸದಲ್ಲಿ ಸೂರ್ಯೋದಯ ಲಗ್ನ ಧನುರ್ ಲಗ್ನ ವಾಗಿರುತ್ತದೆ ಆದ್ದರಿಂದ ಇದು ತುಂಬಾ ಶ್ರೇಷ್ಠ ಕಾಲವಾಗಿರುತ್ತದೆ ಆ ಕಾರಣದಿಂದಲೇ ಧನುರ್ ಮಾಸದಲ್ಲಿ ಬೆಳಿಗ್ಗೆ ಬೇಗನೆ ದೇವಸ್ಥಾನದ ಬಾಗಿಲನ್ನು ತೆಗೆದು ದೇವತಾರಾಧನೆಯನ್ನು ಮಾಡುತ್ತಾರೆ.

ಹಾಗಾಗಿ ಈ ರೀತಿಯಾಗಿ ಇದು ಶ್ರೇಷ್ಠ ಮಾಸವಾದ್ದರಿಂದ ಕಾರ್ಯಸಿದ್ದಿ ಯೋಗ ಉತ್ತಮವಾಗಿದೆ. ರಾಶ್ಯಾಧಿಪತಿ ಪಂಚಮದಲ್ಲಿ ಇದ್ದು ಲಾಭವನ್ನು ನೋಡುತ್ತಿದ್ದಾನೆ ಎಂದಾಗ ನೀವು ಕೈಹಾಕಿದ ಯಾವುದೇ ಕೆಲಸಗಳಲ್ಲಿ ನಿಮಗೆ ಲಾಭ ಆಗುತ್ತದೆ. ರವಿ ಉದ್ಯೋಗ ಕಾರಕ ಸಿಂಹ ರಾಶಿಯವರ ಉದ್ಯೋಗದಲ್ಲಿ ಅಥವಾ ನಿಮ್ಮ ಸಮಾಜದಲ್ಲಿ ನಿಮಗೆ ಪ್ರಾಮುಖ್ಯತೆ ವೃದ್ಧಿಯಾಗುತ್ತದೆ.

ಅಧಿಕಾರ-ಪ್ರಾಪ್ತಿ ಯೋಗ ಉಂಟಾಗುತ್ತದೆ. ಗುರು ಬಲವನ್ನು ಇನ್ನೂ ಸ್ವಲ್ಪ ವೃದ್ಧಿ ಮಾಡುವುದಕ್ಕೆ ನವೆಂಬರ್ ಹತ್ತೊಂಬತ್ತರಂದು ಗುರು ದತ್ತಾತ್ರೇಯ ಜಯಂತಿ ಇರುವುದರಿಂದ ಅವರ ಆರಾಧನೆಯನ್ನು ಮಾಡಬೇಕು. ಇನ್ನು ಸಿಂಹ ರಾಶಿಯ ವ್ಯಾಪಾರಿಗಳಿಗೂ ಕೂಡ ಲಾಭವಾಗಲಿದೆ. ಇಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಯಾಕೆಂದರೆ ಪಂಚಮದಲ್ಲಿ ರವಿ ಇದ್ದಾಗ ಸ್ವಲ್ಪ ಅನಾವಶ್ಯಕವಾಗಿ ದುಡ್ಡು ಖರ್ಚಾಗುತ್ತದೆ.

ನಿಮಗೆ ವ್ಯವಹಾರಗಳಲ್ಲಿ ಲಾಭ ಉಂಟಾಗುವುದರಿಂದ ನಿಮಗೆ ಗೊತ್ತಿಲ್ಲದೆ ಉನ್ಮಾದದಲ್ಲಿ ಅನಾವಶ್ಯಕ ಖರ್ಚುಗಳು ಹೆಚ್ಚಾಗುತ್ತದೆ. ಯಾರಿಗೆ ದಾನವನ್ನು ಕೊಡಬಾರದು ಅಂತವರಿಗೆ ದಾನವನ್ನು ಕೊಡುತ್ತಿರಿ. ಎಲ್ಲಿ ಅನಾವಶ್ಯಕ ಖರ್ಚನ್ನ ಮಾಡಬಾರದು ಅಲ್ಲಿ ಕರ್ಚನ ಮಾಡುತ್ತೀರಿ. ಬರುವಂತಹ ಆದಾಯವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿ ಉಳಿಸುವುದನ್ನು ಕಲಿತುಕೊಳ್ಳಬೇಕು. ಒಟ್ಟಾರೆಯಾಗಿ ಧನುರ್ ಮಾಸ ಸಿಂಹರಾಶಿಯವರಿಗೆ ಸಾಕಷ್ಟು ರೀತಿಯಲ್ಲಿ ಒಳ್ಳೆಯದನ್ನು ಉಂಟುಮಾಡುತ್ತವೆ ಕೈ ಹಾಕಿದೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತವೆ ಈ ಮಾಸದಲ್ಲಿ ನಿಮಗೆ ಹೆಚ್ಚಿನ ಯಶಸ್ಸು ಲಭ್ಯವಾಗಲಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *