ಶನಿ ದೇವನ ಅಪಾರ ಆಶೀರ್ವಾದದಿಂದ 2022 ರಲ್ಲಿ ಈ ರಾಶಿಯವರಿಗೆ ಗೆಲವು ಖಚಿತ

0 5

ಕಟಕ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಯಾವರಿತಿಯಾದಂತಹ ಫಲಾಫಲಗಳು ಲಭಿಸಲಿದೆ ಯಾವ ಅವಧಿ ಹೇಗಿರಲಿದೆ ಉದ್ಯೋಗ ವ್ಯಾಪಾರ ವ್ಯವಹಾರ ಇವೆಲ್ಲ ಹೇಗಿರುತ್ತವೆ ಎಂಬುದರ ಕುರಿತು ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ. ಏಪ್ರಿಲ್ ವರೆಗೆ ರಾಹು ಶನಿ ಜುಗಲ್ಬಂದಿ ನಡೆಯುತ್ತಿರುತ್ತದೆ. ಏಪ್ರಿಲ್ ಹದಿಮೂರು ನಿಮ್ಮ ಜೀವನಕ್ಕೆ ತಿರುವನ್ನು ಖಂಡಿತ ತಂದು ಕೊಡುತ್ತದೆ. ಆದಿನ ಗುರು ಕುಂಭ ರಾಶಿ ಪರ್ಯಟನೆ ಮುಗಿಸಿ ನಿಮ್ಮ ಭಾಗ್ಯ ಸ್ಥಾನ ಮಿನಕ್ಕೆ ಬರುತ್ತಾನೆ.

ಕಟಕ ರಾಶಿ ಅಧಿಪತಿ ಚಂದ್ರನಿಗೆ ಗುರು ತುಂಬಾನೇ ಒಳ್ಳೆಯ ಮಿತ್ರ ಈ ರಾಶಿಗೆ ಅದೃಷ್ಟ ಎನ್ನುವುದು ಇದ್ದರೆ ಅದು ಗುರುವಿನಿಂದ. ಅಂದರೆ ನಿಮ್ಮ ಅದೃಷ್ಟ ಕೂಡ ಕುಲಾಯಿಸಬಹುದು ಹಾಗೆ ನಕಾರಾತ್ಮಕ ವಿಚಾರಗಳನ್ನು ಸಕಾರಾತ್ಮಕ ವಿಚಾರಗಳನ್ನಾಗಿ ಪರಿವರ್ತಿಸುವ ಶಕ್ತಿ ಗುರುವಿಗೆ ಇದೆ. ನಿಮ್ಮ ಒಳ್ಳೆಯ ಮನಸ್ಥಿತಿ ನಿಮ್ಮಿಂದ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತದೆ ಎಷ್ಟೋ ಸಮಸ್ಯೆಗಳನ್ನು ನಿಮಗೆ ಗೊತ್ತಿರದ ಹಾಗೆ ಪರಿಹಾರ ಮಾಡಿಕೊಳ್ಳುತ್ತೀರಿ.

ಇಲ್ಲ ಇನ್ನು ಕೈ ಹತ್ತುತ್ತಿಲ್ಲ ಏನೋ ತಪ್ಪಾಗಿದೆ ಎನ್ನುವ ಭಾವನೆ ಇದ್ದರೆ ಈ ವರ್ಷ ಅದು ಪೂರ್ತಿಯಾಗಿ ಬದಲಾಗುತ್ತದೆ ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಹಲವಾರು ಸುಧಾರಣೆಗಳು ನಿಮ್ಮ ಗಮನಕ್ಕೆ ಬರುತ್ತವೆ. ಗುರು ದಾರ್ಶನಿಕ ಗ್ರಹ ಈ ಸಮಯದಲ್ಲಿ ನಿಮಗೆ ಸಾಕಷ್ಟು ತಿಳಿವಳಿಕೆ ಬರುತ್ತದೆ. ದೇವರಲ್ಲಿ ಗುರುಹಿರಿಯರಲ್ಲಿ ಶ್ರದ್ಧೆ ಜೀವನದಲ್ಲಿ ಸಕಾರಾತ್ಮಕವಾಗಿ ಯೋಚನೆ ಮಾಡುವುದಕ್ಕೆ ಪ್ರಾರಂಭಿಸುತ್ತೀರಿ.

ನಂಬಿಕೆ ಜೊತೆ ಉತ್ಸಾಹ ಜಾಸ್ತಿ ಆಗುತ್ತದೆ ಕೆಲವರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಮೂಡುತ್ತದೆ. ಗುರು ಕಣ್ಣು ತೆರೆದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳುತ್ತಾರೆ ಈ ರಾಶಿಯವರಿಗೆ ಜೀವನ ತುಂಬಾ ಚೆನ್ನಾಗಿ ಸಾಗುತ್ತದೆ ಯುಗಾದಿಯಿಂದ ಮುಂದಿನ ಯುಗಾದಿಯವರೆಗು ನಿಮಗೆ ಸುರಕ್ಷಿತವಾಗಿರುತ್ತದೆ ಎಂದು ಅರ್ಥ. ಅದೃಷ್ಟದ ಸಹಾಯದಿಂದ ವರ್ಷವಿಡಿ ಒಳ್ಳೆಯ ಘಟನೆಗಳು ನಡೆಯುತ್ತವೆ

ಲಿಕ್ವಿಡ್ ವ್ಯಾಪಾರಿಗಳು ಷೇರು ದಲ್ಲಾಳಿಗಳು ಶಿಕ್ಷಕರು ಉಪನ್ಯಾಸಕರು ಮಾರ್ಕೆಟಿಂಗ್ ಸಾಫ್ಟ್ವೇರ್ ಎಕ್ಸ್ಪೋರ್ಟ್ ಬ್ಯಾಂಕಿಂಗ್ ಫೈನಾನ್ಸ್ ಕೃಷಿ ಹೀಗೆ ಎಲ್ಲ ವಲಯಗಳಲ್ಲಿಯೂ ಕಟಕ ರಾಶಿಯವರಿಗೆ ಒಳ್ಳೆಯದು ಉಂಟಾಗುತ್ತದೆ. ಚಂದ್ರನ ರಾಶಿಯಿಂದ ತ್ರಿಕೋನದಲ್ಲಿ ಗುರು ಬರುವುದರಿಂದ ಕಟಕ ರಾಶಿಯ ವೈದ್ಯರು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವಂಥವರು ಇವರಿಗೆಲ್ಲ ತುಂಬಾ ಲಾಭವಾಗುತ್ತದೆ.

ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ಪೂಜೆ ಆರಾಧನೆಗೆ ಸಂಬಂಧಿಸಿ ಕೆಲಸ ಮಾಡುವವರಿಗೆ ಅಂತಹ ವಸ್ತುಗಳನ್ನು ತಯಾರು ಮಾಡುವವರು ಮೂರ್ತಿಗಳನ್ನು ತಯಾರಿಸುವವರು ಇವರಿಗೆಲ್ಲ ಒಳ್ಳೆಯ ಫಲಿತಾಂಶ ದೊರೆಯಲಿದೆ. ಇದೆ ಏಪ್ರಿಲ್ ತಿಂಗಳಲ್ಲಿ ಇನ್ನು ಎರಡು ಬೆಳವಣಿಗೆ ಕೂಡ ಆಗಲಿದೆ. ಇಷ್ಟರವರೆಗೂ ಹನ್ನೊಂದನೇ ಮನೆಯಲ್ಲಿದ್ದು ಲಾಭ ತರುತ್ತಿದ್ದ ರಾಹು ಏಪ್ರಿಲ್ ಹನ್ನೆರಡಕ್ಕೆ ಆ ಜಾಗದಿಂದ ಮಾಯವಾಗುತ್ತಾನೆ.

ಗುರು ಬಲ ಇರುವುದರಿಂದ ರಾಹು ದೊಡ್ಡಮಟ್ಟದ ಪರಿಣಾಮ ಏನು ಮಾಡುವುದಿಲ್ಲ. ಜಾತಕ ಪ್ರಭಲವಾಗಿದ್ದರೆ ಆಗಲೂ ಅಂತಹ ವ್ಯತ್ಯಾಸ ಆಗುವುದಿಲ್ಲ. ಜಾತಕ ಅಷ್ಟು ಪ್ರಭಲವಾಗಿರದಿದ್ದರೆ ಉದ್ಯೋಗದಲ್ಲಿ ಕಿರಿಕಿರಿ ಸಣ್ಣ ಪುಟ್ಟ ವಿಘ್ನಗಳು ನಿಮ್ಮ ಕೆಳಗಿನ ವ್ಯಕ್ತಿಗಳಿಂದ ತೊಂದರೆ ಆಗುವುದು ಇವೆಲ್ಲ ಸಾಮಾನ್ಯವಾಗಿರುತ್ತದೆ.

ಹಾಗೆಯೇ ನಾಲ್ಕರ ಕೇತು ಸ್ವಲ್ಪಮಟ್ಟಿಗೆ ದುಃಖವನ್ನು ಕೊಡಬಹುದು ನಿಮ್ಮ ಹಿರಿಯರು ಅಥವಾ ಸ್ನೇಹಿತರ ಅನಾರೋಗ್ಯ ಸಾವು ಅಥವಾ ಅವರಿಗೆ ಬೇರೆ ಯಾವುದಾದರೂ ತೊಂದರೆ ಬರುವುದು ಎಲ್ಲಾ ಆಗಬಹುದು. ಹಾಗೆ ಏಪ್ರಿಲ್ ಇಂದ ಜುಲೈವರೆಗೆ ಶನಿಯ ಸ್ಥಾನ ಚೆನ್ನಾಗಿ ಇರುವುದಿಲ್ಲ. ಈ ರಾಶಿಯ ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ ಫಲ ಚೆನ್ನಾಗಿದ್ದು ಈ ಸಮಯದಲ್ಲಿ ಏಕಾಗ್ರತೆಯ ಕೊರತೆ ಕಾಣಬಹುದು ಓದಿದ ವಿಷಯ ಮರೆಯುವ ಸಾಧ್ಯತೆ ಪುನಹ ಪುನಹ ಮನನ ಮಾಡಿಕೊಳ್ಳಬೇಕಾಗಬಹುದು.

ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು ಕಂಪನಿಗಳಲ್ಲಿ ಕೆಲಸ ಮಾಡುವವರಿಗೂ ಕೂಡ ಶನಿ ಮತ್ತು ರಾಹು ಸ್ವಲ್ಪ ಆಟವಾಡಿಸುವ ಸಾಧ್ಯತೆ ಇದೆ. ಮೇಲಾಧಿಕಾರಿಗಳಿಂದ ಒತ್ತಡ ಉದ್ಯೋಗದಲ್ಲಿ ಕೆಳಗಿನ ವ್ಯಕ್ತಿಗಳು ನಿಮ್ಮ ಮಾತು ಕೇಳದೆ ಇರುವುದು ನಿಮಗೂ ಆಲಸ್ಯ ಅಥವಾ ಅತಿಯಾದ ಕೆಲಸದ ಒತ್ತಡ ಹೀಗೆ ಎಲ್ಲಾ ರೀತಿಯಾಗಿ ಏಪ್ರಿಲ್ ಇಂದ ಜುಲೈವರೆಗೆ ಆತಂಕ ಕಾಡಬಹುದು.

ಈ ಅವಧಿಯಲ್ಲಿ ಬರುವ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರವನ್ನು ವಹಿಸಬೇಕು ನಿಮಗೆ ಗುರುವಿನ ಕೃಪೆ ಬೇಕೇ ಬೇಕು. ಭಕ್ತಿಯಿಂದ ರಾಯರನ್ನು ನೆನೆದು ಓದುವುದರಲ್ಲಿ ಗಮನಕೊಟ್ಟು ಓದಿದರೆ ಗುರು ನಿಮ್ಮನ್ನ ಕೈಹಿಡಿದು ಮುನ್ನಡೆಸುತ್ತಾನೆ. ಜುಲೈ ನಂತರದ ಅವಧಿ ತುಂಬಾ ಸಂತೋಷದಾಯಕವಾಗಿದೆ. ನೀವು ಎಲ್ಲಾದರೂ ಪ್ರವಾಸ ಕೈಗೊಳ್ಳುವುದು ಇದ್ದರೆ ಜುಲೈ ನಂತರ ಕೈಗೊಳ್ಳುವುದು ಸೂಕ್ತವಾಗಿದೆ. ಮಕರ ರಾಶಿಯಲ್ಲಿರುವ ಶನಿ ಏಪ್ರಿಲ್ ಇಪ್ಪತ್ತೊಂಬತ್ತರಂದು ಕುಂಭರಾಶಿಗೆ ಚಲಿಸುತ್ತಾನೆ ಮತ್ತೆ ವಕ್ರವಾಗಿ ಜುಲೈ ಹನ್ನೆರಡರಂದು ಮಕರಕ್ಕೆ ಮರಳುತ್ತಾನೆ. ಕುಂಭ ಕಟಕ ರಾಶಿಗೆ ಎಂಟನೇ ಮನೆ ಇದನ್ನು ರಂದ್ರ ಸ್ಥಾನ ಎಂದು ಕರೆಯುತ್ತಾರೆ. ಹಾಗಾಗಿ ಇದು ಅಷ್ಟು ಒಳ್ಳೆಯದಲ್ಲ ಈ ಸಂದರ್ಭದಲ್ಲಿ ಜಾಗರೂಕತೆಯಿಂದ ಇರಬೇಕು.

ಆರೋಗ್ಯದ ಕಡೆ ಗಮನ ಇರಬೇಕು ಅನಾರೋಗ್ಯದಿಂದ ಇರುವವರು ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಸಾಧ್ಯವಾದಷ್ಟು ಈ ಸಮಯದಲ್ಲಿ ಆರಾಮದಾಯಕವಾದಂತಹ ಜೀವನಶೈಲಿಯನ್ನು ಅನುಸರಿಸಬೇಕು. ನಿಮಗೆ ವಯಸ್ಸಾಗಿದ್ದರೆ ದೂರದ ಪ್ರಯಾಣ ಶ್ರಮದ ಚಟುವಟಿಕೆಗಳು ಅಥವಾ ಸತತ ದುಡಿಮೆಯನ್ನು ತಪ್ಪಿಸುವುದು ಒಳ್ಳೆಯದು. ಅತಿಯಾಗಿ ತಿನ್ನುವುದು ಕುಡಿತ ಜೂಜು ಇವು ಕೂಡ ಕಷ್ಟವನ್ನ ಕೊಡಬಲ್ಲವು ಎಲ್ಲವನ್ನು ಹಿತವಾಗಿ ಮಿತವಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಪಡಬೇಕು. ಹಾಗೆ ಪದೇಪದೇ ಯೋಚನೆ ಮಾಡುವುದು ನಿದ್ರೆ ಇಲ್ಲದೆ ಇರುವುದು ಚಿಂತೆಗೆ ಒಳಗಾಗುವುದು ಇವುಗಳು ಆರೋಗ್ಯಕ್ಕೆ ಹಾನಿಕರ.

ಸಾಧ್ಯವಾದಷ್ಟು ಒಳ್ಳೆಯದರ ಬಗ್ಗೆ ಯೋಚನೆ ಮಾಡಬೇಕು. ದೇಹ ಮನಸ್ಸಿಗೆ ಸಾಕಷ್ಟು ವಿಶ್ರಾಂತಿಯನ್ನು ಕೊಡಬೇಕು. ವ್ಯಾಯಾಮಕ್ಕೂ ಕೂಡ ಮಹತ್ವವನ್ನು ಕೊಡಬೇಕು ಯೋಗ ಧ್ಯಾನ ಪ್ರಾಣಾಯಾಮಗಳ ಬಗ್ಗೆ ಆಸಕ್ತಿ ವಹಿಸಿದರೆ ಮುಂದಾಗುವ ತೊಂದರೆಗಳನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ ಈ ಸಮಯದಲ್ಲಿ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಸ್ವಲ್ಪ ಇಳಿಕೆಯಾಗುತ್ತದೆ ಉದ್ಯೋಗಿಗಳಿಗೆ ಸ್ವಲ್ಪ ವಿಘ್ನ ಆಲಸ್ಯ ಹಾಗೂ ಕೃಷಿಕರಿಗೆ ಆದಾಯದ ಇಳಿಕೆ ಹೀಗೆ ಎಲ್ಲರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆದರೆ ಜುಲೈ ಕಳೆದರೆ ಶನಿ ಮತ್ತೆ ನಿಮಗೆ ಅನುಕೂಲಕರ ಸ್ಥಾನಕ್ಕೆ ಹಿಂದಿರುಗುತ್ತಾನೆ ಮತ್ತೆ ಎಲ್ಲವೂ ನಿಧಾನವಾಗಿ ಬದಲಾವಣೆಯಾಗುತ್ತದೆ. ಈ ರೀತಿಯಾಗಿ ಕಟಕ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡು ಮಿಶ್ರ ಫಲವನ್ನು ಹೊತ್ತು ತಂದಿದೆ.

Leave A Reply

Your email address will not be published.