ಯುಗಾದಿ ಸಿಂಹ ರಾಶಿಯವರ ಪಾಲಿಗೆ ಹೇಗಿರಲಿದೆ ಗೊತ್ತೆ, ತಿಳಿದುಕೊಳ್ಳಿ

0 4

ಜನವರಿ ಒಂದು ಪಾಶ್ಚಿಮಾತ್ಯರ ಪ್ರಕಾರ ಹೊಸ ವರ್ಷವೆಂದು ಆಚರಿಸಿದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಬೇವು ಬೆಲ್ಲ ಹಂಚಿ ಸಂಭ್ರಮ ಸಡಗರ ಪಡುತ್ತೇವೆ. ಅದೇ ರೀತಿ ರಾಶಿ ಚಕ್ರದ ಬದಲಾವಣೆ ಆಗಿ ಹಳೆ ಸಂವಸ್ಸರದಿಂದ ಹೊಸ ಸಂವತ್ಸರಕ್ಕೆ ನಾಂದಿಯಾಗುವುದು. ಈ ವರ್ಷ2022 ರ ಶುಭಕೃತ ನಾಮ ಸಂವತ್ಸರದ ಪ್ರಕಾರ ಸಿಂಹ ರಾಶಿಯವರ ಆದಾಯ ವ್ಯಯ, ಆರೋಗ್ಯ, ಹಣಕಾಸು, ಸಾಂಸಾರಿಕ ಜೀವನ ಬಗ್ಗೆ ನೋಡೋಣ. ಖ್ಯಾತ ವಿದ್ವಾನ್ ವಿದ್ಯಾ ಶಂಕರ ಗುರೂಜಿ ಅವರು ಈ ವರ್ಷ ಸಿಂಹ ರಾಶಿಯ ಅವರ ವರ್ಷ ಭವಿಷ್ಯದ ಮಾಹಿತಿ ಕೊಟ್ಟಿದಾರೆ.

ಸಿಂಹ ರಾಶಿ ಅವ್ರಿಗೆ ಗುರುವು 8 ನೇ ಮನೆಯಲ್ಲಿ ಸಂಚರವಾಗಿದ್ದು, ಶನಿ 6 ಮತ್ತು 7 ನೇ ಮನೆಯಲ್ಲಿ ರಾಹು ಮತ್ತು ಕೇತು 9 ಮತ್ತು 3ನೇ ಮನೆಯಲ್ಲಿ ಇದ್ದು ಅಷ್ಟಮ ಗುರು ಯೋಗ ಪ್ರಾಪ್ತಿಯಾಗಿರುತ್ತದೆ. ಇದರಿಂದ ಯಾವುದೇ ಕೆಲ್ಸ ಮಾಡಿದರು ನಿರ್ದಿಷ್ಟ ಲಾಭ ಕಾಣಲು ಸಾಧ್ಯವಿಲ್ಲ. ದೈಹಿಕ ಮತ್ತು ಮಾನಸಿಕ ಒತ್ತಡ ಜಾಸ್ತಿ ಆಗಿದ್ದು ಕೆಲ್ಸ ಕಾರ್ಯದಲ್ಲಿ ಅಧಿಕ ಶ್ರಮ ಅಗತ್ಯ. ಇನ್ನು ಮನೆ ಬದಲಾವಣೆ ಸಂದರ್ಭ ಬಂದರೂ ಬರಬಹುದು. ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ, ಸಂತಾನಕ್ಕಾಗಿ ಯೋಚಿಸಿದರೆ ಅಲ್ಲಿ ಸಮಸ್ಯೆ ಇದ್ದು ಮಕ್ಕಳ ವಿಚಾರದಲ್ಲಿ ಕೂಡ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ದೂರ ದೇಶದ ಪ್ರಯಾಣ ಆದ್ಯತೆ ಇದ್ದು, ತಂದೆ ಅಥವಾ ತಾಯಿಯ ಅಕಾಲಿಕ ವಿಯೋಗ ನೋವು ಉಣ್ಣುವ ಪರಿಸ್ಥಿತಿ ಉಂಟಾಗಬಹುದು.

ಮುಖ್ಯವಾಗಿ ನಿಮ್ಮ ಮೂಲ ಜಾತಕದಲ್ಲಿ ಶುಭದೆಶೆ ಯೋಗ ಇದ್ದಲ್ಲಿ ಇವೆಲ್ಲವನ್ನು ಪರಿಗಣಿಸುವ ಅಗತ್ಯ ಇಲ್ಲ ಎಂಬುದನ್ನು ಗುರೂಜಿ ಅವರು ಹೇಳಿದಾರೆ. ಮಾನವನ ಬದುಕು ನಿಂತ ನೀರಲ್ಲ . ನದಿಯು ಹೇಗೆ ಹರಿದು ಕೊನೆ ಸಮುದ್ರವನ್ನು ಸೇರುತೋ ಹಾಗೆಯೇ ಮನುಷ್ಯನು ಕೂಡ ತನ್ನ ಪರಿಶ್ರಮದಿಂದ ಒಳ್ಳೆಯ ಜೀವನ ಸಿಗುತ್ತದೆ . ಕಷ್ಟ ಪಟ್ಟ ಮೇಲೆ ಹೇಗೆ ಸುಖ ಸಿಗುತ್ತದೆಯೋ ಹಾಗೇನೇ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಇನ್ನು ಸಿಂಹ ರಾಶಿ ಅವರು ಆದಷ್ಟು ತಮ್ಮ ಕುಲದೇವರ ಪ್ರಾರ್ಥನೆ ಮಾಡಿದರೆ ಆದಷ್ಟು ಒಳ್ಳೆಯ ಜೀವನ ನಡೆಸಬಹುದು. ಕುಲದೇವರಿಗೆ ಬಿಲ್ವ ಪತ್ರೆ ಮತ್ತು ತುಳಸಿಯಿಂದ ಅರ್ಚನೆ ಮಾಡಿ ಭಕ್ತಿಯಿಂದ ಬೇಡಿದರೆ ಎಲ್ಲವೂ ಶುಭವಾಗುತ್ತದೆ.

Leave A Reply

Your email address will not be published.