Ultimate magazine theme for WordPress.

ಮಾಜಿ CM ಸಿದ್ದರಾಮಯ್ಯ ಅವರ ಅಣ್ಣ ತಮ್ಮಂದಿರು ಏನ್ಮಾಡ್ತಿದಾರೆ ಗೊತ್ತಾ? ಇವತ್ತಿಗೂ ಆ ಕೆಲಸ ಬಿಟ್ಟಿಲ್ಲ

0 4

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರ ಸ್ವಭಾವದವರು ಮಾತಿನಲ್ಲೇ ಚತುರತೆಯನ್ನು ತೋರುವ ವ್ಯಕ್ತಿತ್ವ. ಸಿದ್ದರಾಮಯ್ಯನವರು ಸದ್ಯ ಮಾಜಿ ಸಿಎಂ, ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಓರ್ವ ಧೀಮಂತ ನಾಯಕ ಇವರ ಕುಟುಂಬ- ಕುಟುಂಬ ರಾಜಕಾರಣದಿಂದ ಹೊರಗುಳಿದಿದ್ದು, ಇವರ ಅಣ್ಣ ತಮ್ಮ ಇಬ್ಬರೂ ಈಗಲೂ ಸಹ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಾರೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ತಮ್ಮ ಸಹೋದರ ಮುಖ್ಯಮಂತ್ರಿ ಎಂದು ಯಾವ ಸಹಾಯವನ್ನೂ ಬಯಸಿಲ್ಲ. ಹಾಗೂ ಇವರ ಮಗ ಯತಿಂದ್ರರನ್ನ ಹೊರತು ಪಡಿಸಿ ಇನ್ನಾರು ಇವರ ಕುಟುಂಬದವರು ರಾಜಕೀಯಕ್ಕೆ ಪ್ರವೇಶ ಮಾಡಿಲ್ಲ. ಇದರಿಂದ ಸಿದ್ಧರಾಮಯ್ಯ ಅವರು ರಾಜಕೀಯದಲ್ಲಿ ಒಂದಿಷ್ಟು ನೀತಿ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂಬುದು ಸ್ಪಷ್ಟ.

ಮೂಲತಃ ಮೈಸೂರಿನವರಾದ ಸಿದ್ದರಾಮಯ್ಯನವರು ಸಿದ್ದರಾಮನಹುಂಡಿಯ ಸಿದ್ಧರಾಮೇಗೌಡ ಮತ್ತು ಬೋರಮ್ಮ ದಂಪತಿಯ ಪುತ್ರ, ಕುರಿ ಮೇಯಿಸುತ್ತಾ ಬಾಲ್ಯವನ್ನು ಕಳೆಯುತ್ತಿದ್ದ ಪುಟ್ಟ ಬಾಲಕನಿಗೆ ಓದು ಎಂದರೆ ಬಹಳ ಇಷ್ಟ ಹಾಗಾಗಿ ಪ್ರಾರಂಭದಲ್ಲಿ ಶಾಲೆಗೆ ಹೋಗದಿದ್ದರು ಮರಳಿನ ಮೇಲೆ ಅಕ್ಷರ ಅಭ್ಯಾಸ ಮಾಡಿದರು ಸಿದ್ದರಾಮಯ್ಯ ಅವರ ನಿಜವಾದ ಹುಟ್ಟಹಬ್ಬದ ದಿನಾಂಕ ಬಗ್ಗೆ ಯಾರಿಗೂ ತಿಳಿದಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಜನ್ಮ ದಿನಾಂಕದ ಗೊಂದಲದ ಬಗ್ಗೆ ಹೇಳಿಕೊಂಡಿದ್ದರು. ಆದರೆ ಶಾಲೆಯಲ್ಲಿ ಆಗಸ್ಟ್ 12 ಎಂದು ನಮೂದಾಗಿದೆ. ಹಾಗಾಗಿ ಅಭಿಮಾನಿಗಳು ನೆಚ್ಚಿನ ಜನ ನಾಯಕನ ಹುಟ್ಟು ಹಬ್ಬವನ್ನು ಆಗಸ್ಟ್ 12 ರಂದು ಆಚರಿಸುತ್ತಾ ಬಂದಿದ್ದಾರೆ.

ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಬಂದರು ನಂತರ ವಿದ್ಯಾವರ್ಧಕಕ್ಕೆ ಸೇರಿದರು. 1964 ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರು. ನಂತರ ಪಿಯುಸಿಗೆ ಯುವರಾಜ ಕಾಲೇಜು ಸೇರಿದರು. ಬಿಎಸ್ಸಿ ಮುಗಿಸಿ ನಂತರ ಕಾನೂನು ಪದವಿ ಪಡೆಯಲು ವಿದ್ಯಾವರ್ಧಕ ಕಾಲೇಜು ಸೇರಲು ಇಚ್ಛಿಸುತ್ತಾರೆ . ನಂತರ ಇಲ್ಲೇ ಅಧ್ಯಾಪಕರಾಗಿ ಸೇವೆ ಮಾಡುತ್ತಾರೆ.

ಈ ಸಮಯದಲ್ಲಿ ರೈತ ನಾಯಕ ಪ್ರೊ . ನಂಜುಂಡಸ್ವಾಮಿ ಅವರ ಸಂಪರ್ಕ ಸಿಗುತ್ತದೆ . ಈ ವೇಳೆ ಅನೇಕ ಹೋರಾಟಗಾರರ ಪ್ರಭಾವಕ್ಕೆ ಒಳಗಾಗಿ ಜನಪರ ಹೋರಾಟದಲ್ಲಿ ಭಾಗವಹಿಸುತ್ತಾರೆ . 1947 ರಲ್ಲಿ ಜೆಪಿ ಚಳುವಳಿ, 1975 ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರುತ್ತಾರೆ.
ನಂತರ ಸಿದ್ದರಾಮಯ್ಯ ಅವರು ರಾಜಕೀಯದತ್ತ ವಾಲುತ್ತಾರೆ. 1980 ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ನಿಂತು ಸೋಲುಕಾಣುತ್ತಾರೆ. 1983 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರು. 1994 ರಲ್ಲಿ ದೇವೆಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು .

ಒಮ್ಮೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕರ್ನಾಟಕಕ್ಕೆ ಬಂದಾಗ, ಅವರಿಗೆ ಕಪ್ಪು ಬಾವುಟ ತೋರಿಸಬೇಕೆಂದು ಸ್ನೇಹತರೆಲ್ಲಾ ಸೇರಿ ನಿರ್ಧರಿಸಿ , ತಯಾರಿ ಮಾಡಿಕೊಂಡಿದ್ದರು. ಆದರೆ ಕೊನೆಯ ಸಮಯದಲ್ಲಿ ಸ್ನೇಹಿತರೆಲ್ಲಾ ಕೈಕೊಟ್ಟರಂತೆ. ಕಾಡಯ್ಯ ಮತ್ತು ಸಿದ್ದರಾಮಯ್ಯ ಇಬ್ಬರು ಮಾತ್ರ ಹೆದ್ದಾರಿ ಪ್ರತಿಭಟನೆ ಮಾಡಲು ಮುಂದಾದಾಗ ಪೊಲೀಸರು ಬಂಧಿಸಿ, ಚೆನ್ನಾಗಿ ಹೊಡೆದು ಕಳುಹಿಸಿದ್ದರಂತೆ. ಅಂದು ಇಂದಿರಾಗಾಂಧಿ ಅವರನ್ನ ವಿರೋಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ನಂತರ ಅವರ ಪಕ್ಷದಿಂದಲೇ ಮುಖ್ಯಮಂತ್ರಿ ಸಹ ಆದರು.

2004 ರಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾದರು. ಆ ಬಳಿಕ 2005 ರಲ್ಲಿ ಜೆಡಿಎಸ್ ಬಿಟ್ಟು ಹೊರಬಂದರು. ನಂತರ ಕಾಂಗ್ರೆಸ್ ಸೇರಿದರು. ಮೇ 5 2013 ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಅವರು ಪಾರ್ವತಿ ಅವರನ್ನು ವಿವಾಹವಾಗಿ ರಾಕೇಶ್ ಮತ್ತು ಯತೀಂದ್ರ ಎಂಬ ಎರಡು ಮಕ್ಕಳನ್ನು ಹೊಂದಿದ್ದರು. ಆದರೆ ಮಗ ರಾಕೇಶ್ ಅವರು ತೀರಿಹೋಗಿದ್ದಾರೆ . ಯತೀಂದ್ರ ಅವರು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.

ಕುಟುಂಬ ರಾಜಕಾರಣ ಎಂದರೆ ರಾಜಕೀಯದಲ್ಲಿ ಒಬ್ಬ ವ್ಯಕ್ತಿ ಸಕ್ರಿಯ ವಾಗಿದ್ದರೆ ಅವರ ಕುಟುಂಬದ ಅಣ್ಣ ತಮ್ಮ ಹೆಂಡತಿ ಮಕ್ಕಳು ಹೀಗೆ ಎಲ್ಲರೂ ರಾಜಕೀಯದಲ್ಲಿ ಭಾಗಿಯಾಗಿರುವುದು ಆದರೆ ಸಿದ್ದರಾಮಯ್ಯನವರು ಇದೆಲ್ಲದರಿಂದ ಹೊರಗುಳಿದಿದ್ದಾರೆ. ಅವರ ಸಹೋದರರಾದ ರಾಮೇಗೌಡ ಮತ್ತು ಸಿದ್ದೇಗೌಡ ಈಗಲೂ ಸಹ ಉಳುಮೆಯನ್ನ ಮಾಡುತ್ತಿದ್ದಾರೆ.

ಇವರು ಯಾವುದೇ ಆಡಂಬರದ ಜೀವನ ನಡೆಸದೇ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.ಇವರು ತಮ್ಮ ಸಹೋದರ ಮುಖ್ಯಮಂತ್ರಿ ಎಂದು ಯಾವುದೇ ಕೃಷಿಗೆ ಸಂಬಂಧಿಸಿದ ಲಾಭವನ್ನು ಪಡೆದಿಲ್ಲ. ಹಾಗೂ ಇವರುಗಳು ತಮ್ಮ ಸಹೋದರ ಮುಖ್ಯಮಂತ್ರಿ ಎಂದು ರಾಜಕೀಯ ಪ್ರವೇಶಿಸುವ ಯಾವ ಪ್ರಯತ್ನವನ್ನು ಮಾಡಿಲ್ಲ. ಹೀಗೆ ಅವರ ಕುಟುಂಬದಿಂದ ಹೊರಗುಳಿದು ಇನ್ನಿತರ ರಾಜಕೀಯ ಮುಖಂಡರಿಗೆ ಮಾದರಿಯಾಗಿದ್ದಾರೆ. ಸದ್ಯ ಇವರ ಮಗ ಯತಿಂದ್ರ ಮಾತ್ರ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಹೊರತಾಗಿ ಇವರು ಕುಟುಂಬದವರೂ ರಾಜಕಾರಣದಿಂದ ಹೊರಗಿದ್ದಾರೆ ಎಂದೇ ಹೇಳಬಹುದು.

Leave A Reply

Your email address will not be published.