ಕ’ಳ್ಳತನ ಮಾಡಿ ಸಿಕ್ಕಾಕಿಕೊಂಡ ಖ್ಯಾತ ನಟಿ ಇದೀಗ ಪೊಲೀಸ್ ವಶದಲ್ಲಿ

0 1

ಸಿನಿಮಾಗಳಲ್ಲಿ ನಟಿಸುವ ನಟ ನಟಿಯರು ಜನಪ್ರಿಯತೆ ಗಳಿಸಿರುತ್ತಾರೆ. ಜೊತೆಗೆ ಹಣವನ್ನು ಸಹ ಪಡೆಯುತ್ತಾರೆ. ಹೀಗಿದ್ದರೂ ಬಂಗಾಳಿ, ಹಿಂದಿ ಸಿನಿಮಾಗಳಲ್ಲಿ ನಟಿಸುವ ನಟಿ ರೂಪಾ ದತ್ತ್ ಅವರ ಮೇಲೆ ಕಳ್ಳತನದ ಆಪಾದನೆ ಬಂದಿದೆ. ಇದನ್ನು ನಂಬಲು ಸಾಧ್ಯವಾಗುವುದಿಲ್ಲ ಆದರೆ ಇದು ಸತ್ಯ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬಂಗಾಳಿ, ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ರೂಪಾ ದತ್ತ್ ಪಿಕ್‍ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಅವರು ಕೋಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿದ್ದರು. ಈ ವೇಳೆ ರೂಪಾ ದತ್ತ್ ಪರ್ಸ್ ಒಂದನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ಪೊಲೀಸರೊಬ್ಬರು ನೋಡಿದ್ದಾರೆ. ನಂತರ ಶನಿವಾರ ರೂಪಾ ದತ್ತ್ ಅವರನ್ನು ಬಂಧಿಸಲಾಗಿದೆ ಎಂದು ಬಿದಾನ್ ನಗರ್ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಂಧನದ ನಂತರ ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ ಉತ್ತರಗಳು ಸಮರ್ಪಕವಾಗಿರಲಿಲ್ಲ. ಶೋಧನೆ ವೇಳೆ ಆಕೆಯ ಬ್ಯಾಗ್‍ನಿಂದ ಅನೇಕ ಅಮೂಲ್ಯ ಸಾಮಗ್ರಿಗಳು ಮತ್ತು 75 ಸಾವಿರ ರೂಪಾಯಿ ನಗದು ಪತ್ತೆಯಾಗಿದೆ. ಆದರೆ ಈ ಹಣದ ಮೂಲದ ಬಗ್ಗೆ ರೂಪಾ ಅವರು ಯಾವುದೆ ಖಚಿತ ಮಾಹಿತಿ ನೀಡಿಲ್ಲ. ಗಮನ ಬೇರೆಡೆ ಸೆಳೆದು ಕಳ್ಳತನ ಆರೋಪದ ಮೇರೆಗೆ ನಟಿಯನ್ನು ಬಂಧಿಸಲಾಗಿದೆ. ಈ ಅಪರಾಧದಲ್ಲಿ ಹೆಚ್ಚಿನ ಜನರು ತೊಡಗಿಸಿಕೊಂಡರಬಹುದೆ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಸ್ತುತ ರೂಪಾ ದತ್ತ್ ಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸರು ವಶಪಡಿಸಿಕೊಂಡ ಬ್ಯಾಗ್ ತನ್ನದಲ್ಲ ಎಂದಿರುವ ನಟಿ ಅದು ಡ‌ಸ್ಟ್‌ಬಿನ್‌ನಿಂದ ಎತ್ತಿಕೊಂಡಿರುವ ಚೀಲ ಎಂದು ಹೇಳಿದ್ಧಾರೆ. ಈ ಮೊದಲು ಅನುರಾಗ್ ಕಶ್ಯಪ್ ತಮಗೆ ಅನುಚಿತ ಸಂದೇಶ ಕಳುಹಿಸುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದರು. ಕೆಲ ಕಾಲದ ನಂತರ ಅದು ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ ಬೇರೆ ಅನುರಾಗ್ ಎನ್ನುವುದು ತಿಳಿದುಬಂದಿತ್ತು. ಇದೀಗ ಪಿಕ್ ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅಥಿತಿಯಾಗಿದ್ದಾರೆ. ನಟಿ ರೂಪಾ ದತ್ತ್ ಅವರು ಅಪರಾಧ ಮಾಡಿದ್ದಾರೊ ಇಲ್ಲವೊ ಎಂಬುದು ಮುಂದಿನ ತನಿಖೆಯಲ್ಲಿ ತಿಳಿಯಬೇಕಿದೆ.

Leave A Reply

Your email address will not be published.