ಶ್ವೇತಾ ಚೆಂಗಪ್ಪ ಕಿರುತೆರೆಯ ಅಭಿನೇತ್ರಿ ಮತ್ತು ನಿರೂಪಕಿ ಆಗಿದ್ದಾರೆ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಶ್ವೇತಾಚೆಂಗಪ್ಪ ಗಳಿಸಿದ್ದಾರೆ. ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ ಹತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಶ್ವೇತಾ ಚೆಂಗಪ್ಪ ಎಂಬ ಹೆಸರು ಕೇಳಿದರೆ ಈಗ ನೆನಪಾಗುವುದು ಮಜಾ ಟಾಕೀಸ್ ಕಾರ್ಯಕ್ರಮ. ಏಕೆಂದರೆ ಅವರು ಮಾಡುವ ಕಾಮಿಡಿಗಳು ಬಹಳ ಚೆನ್ನಾಗಿರುತ್ತವೆ. ಇವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಬಳಿಯ ಗ್ರಾಮದವರಾಗಿದ್ದಾರೆ. ತಾಯಿಯವರ ಹೆಸರು ತಾರಾ. ಶ್ವೇತ ಹಾಗೂ ಅವರ ತಮ್ಮ ಸಾಗರ್ ಬೆಂಗಳೂರಿನಲ್ಲೇ ಹುಟ್ಟಿದವರು. ಬೆಂಗಳೂರಿನಲ್ಲಿ ತಂದೆಯವರ ಉದ್ದಿಮೆಯಿದೆ. ಶ್ವೇತಾ ಚೆಂಗಪ್ಪ ಬಿಕಾಂ ಪದವಿ ಮುಗಿಸುತ್ತಾ ಅಭಿನಯದಲ್ಲೂ ಪಾಲ್ಗೊಂಡು ಬೆಳೆದರು.
ಕಾಲೇಜ್‍ನಲ್ಲಿ ಓದುವ ಸಮಯದಲ್ಲೇ ಅವಕಾಶಗಳು ಬರುತ್ತಿದ್ದವು. ಆಡಿಶನ್ ತೆಗೆದುಕೊಳ್ಳಲು ನಿರ್ದೇಶಕರು ಹುಡುಕುತ್ತಾ ಬಂದರು. ಸುಮತಿ ಪಾತ್ರಕ್ಕೆ ಒಬ್ಬ ನಟಿಯ ಅವಶ್ಯಕತೆ ಅವರಿಗಿತ್ತು. ಅಳು ಮತ್ತು ನಗು ಪರೀಕ್ಷೆಗಳ ನಂತರ ಒಂದೂವರೆ ಪುಟದ ಡಯಲಾಗ್ ಹೇಳಲು ಹೇಳಿದರು. ಇವರು ಆ ಸವಾಲಿನಲ್ಲಿ ಸುಲಭವಾಗಿ ಆಯ್ಕೆಯಾದರು. ಎಲ್ಲದರಲ್ಲೂ ಟೈಟಲ್ ರೋಲ್ ನಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ. ಹಾಗೆಯೇ ಇವರ ಅರುಂಧತಿ ಎಂಬ ಧಾರಾವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿತ್ತು.
ಇವರು ಅದರಲ್ಲಿ ನಾಯಕಿಯಾಗಿ ಬಹಳ ಚೆನ್ನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗ ಇವರಿಗೆ ವಿವಾಹವಾಗಿದೆ. ಹಾಗೆಯೇ ಒಂದು ಗಂಡುಮಗು ಕೂಡ ಇದೆ. ಇವರು ಶೂಟಿಂಗ್ ನಂತರದ ಸಮಯವನ್ನು ತಮ್ಮ ಪ್ರೀತಿಯ ಪುತ್ರನೊಂದಿಗೆ ಕಳೆಯುತ್ತಾರೆ. ಶ್ವೇತಾ ಚೆಂಗಪ್ಪ ಅವರು ಸುಂದರ ನಟಿ ಎಂದು ಹೇಳಬಹುದು. ಇವರ ಪುತ್ರ ಕೂಡ ಶ್ವೇತಾ ಚೆಂಗಪ್ಪ ಅವರ ಹಾಗೆ ಬಹಳ ಸುಂದರವಾಗಿ ಇದ್ದಾರೆ. ಹಾಗೆಯೇ ಬಹಳ ಕ್ಯೂಟ್ ಆಗಿ ಇದ್ದಾರೆ. ಇವರು ಮನೆಯಲ್ಲಿ ಇದ್ದಾಗ ಇವರ ಪುತ್ರನ ಜೊತೆ ಕಣ್ಣಾಮುಚ್ಚಾಲೆ ಆಟವನ್ನು ಆಡುತ್ತಾರೆ.