ರೈಲ್ವೆಯಲ್ಲಿ  ಹಲವಾರು ಹುದ್ದೆಗಳಿವೆ. ಇದು ಸರ್ಕಾರಿ ಕೆಲಸ ಆಗಿದೆ. ಇದರಲ್ಲಿ ಕೆಲಸ ಸಿಕ್ಕರೆ ಒಳ್ಳೆಯ ಸಂಬಳ ಬರುತ್ತದೆ. ಹಾಗೆಯೇ ಇದರಿಂದ ಒಳ್ಳೆಯ ಸೌಲಭ್ಯಗಳನ್ನು ಪಡೆಯಬಹುದು. ಈಗ ರೈಲ್ವೆಯಲ್ಲಿ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಉತ್ತರ ಕೇಂದ್ರ ಇಲಾಖೆಯಲ್ಲಿ ಕರೆದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹುದ್ದೆಗಳು:-ಇಲ್ಲಿ ನಾಲ್ಕು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮೊದಲನೆಯದು ಫಿಟ್ಟರ್ ಹುದ್ದೆ. ಎರಡನೆಯದು ವೆಲ್ಡರ್ ಹುದ್ದೆ. ಮೂರನೆಯದು ಮೆಕಾನಿಕ್ ಹುದ್ದೆ. ನಾಲ್ಕನೆಯದು ಕಾರ್ಪೆಂಟರ್ ಹುದ್ದೆ. ಐದನೆಯದು ಎಲೆಕ್ಟ್ರಿಷಿಯನ್ ಹುದ್ದೆ. 480 ಹುದ್ದೆಗಳು ಇದ್ದು ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ:-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಎಂದರೆ 15 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ಎಂದರೆ 24 ವರ್ಷ ವಯೋಮಿತಿ ಹೊಂದಿರಬೇಕು.

ಆಯ್ಕೆಯ ನೇಮಕಾತಿ:- ಈ ಹುದ್ದೆಗೆ ಸೇರುವವರ ಹತ್ತನೇ ತರಗತಿಯ ಅಂಕದ ಮೇಲೆ ನೇಮಕಾತಿ ಮಾಡಲಾಗುವುದು. ನಂತರ ಹುದ್ದೆಯನ್ನು ಸೇರಬಹುದು.

ವಿದ್ಯಾರ್ಹತೆ:-ಅಭ್ಯರ್ಥಿಯು ಹತ್ತನೇ ತರಗತಿ ಪಾಸಾಗಿರಬೇಕು. ಮುಗಿದಿರಬೇಕು. ಒಂದು ವಿಶ್ವ ವಿದ್ಯಾಲಯದಿಂದ ಪಾಸಾದ ಸರ್ಟಿಫಿಕೇಟ್ ಇರಬೇಕು. ಹಾಗೆಯೇ ಐ.ಟಿ.ಐ. ನಲ್ಲಿ ಪಾಸಾಗಿರಬೇಕು.

ಅರ್ಜಿ ಸಲ್ಲಿಸುವ ದಿನಾಂಕ:-ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 17-03-2021 ಆಗಿದೆ. ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-04-2021 ಆಗಿದೆ. ಹಾಗೆಯೇ ಇದೇ ದಿನಾಂಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಆಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ತುಂಬಿಸಿಕೊಳ್ಳಲಾಗುತ್ತದೆ.

ಅರ್ಜಿಶುಲ್ಕ :-ಸಾಮಾನ್ಯ ಮತ್ತು ಓ.ಬಿ.ಸಿ. ವರ್ಗದವರಿಗೆ 100ರೂಪಾಯಿ ಪರೀಕ್ಷಾ ಶುಲ್ಕವನ್ನು ಕಟ್ಟಬೇಕು. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಮಹಿಳೆಯರಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

Leave a Reply

Your email address will not be published. Required fields are marked *