ಲೂಸ್‌ ಮಾದ ಯೋಗಿಯವರ ಮುದ್ದು ಮಗಳು ಎಷ್ಟು ಕ್ಯೂಟ್ ಆಗಿ ಮಾತಾಡ್ತಾಳೆ ನೋಡಿ ವಿಡಿಯೋ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕನ್ನಡ ಚಿತ್ರರಂಗದಲ್ಲಿ ಲೂಸ್‌ ಮಾದ ಎಂದೇ ಫೇಮಸ್‌ ಆದವರು ನಟ ಯೋಗೇಶ್‌. ಅಭಿಮಾನಿಗಳು ಪ್ರೀತಿಯಿಂದ ಲೂಸ್‌ ಮಾದ ಯೋಗಿ ಅಂತ ಕರೆಯುತ್ತಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ಅವರು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೈಯಲ್ಲಿರುವ ಕೆಲವು ಸಿನಿಮಾಗಳ ಜೊತೆಗೆ ಸ್ಟಾರ್‌ ಸುವರ್ಣ ವಾಹಿನಿಯ ಗಾನಾ ಬಜಾನಾ ರಿಯಾಲಿಟಿ ಶೋನಲ್ಲೂ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಒಬ್ಬ ಜನಪ್ರಿಯ ಕನ್ನಡ ಚಲನಚಿತ್ರ ನಟ. ಇವರು ಇನ್ನೊಬ್ಬ ಕನ್ನಡ ನಟ ದುನಿಯಾ ವಿಜಯ್ ಸಂಬಂಧಿ. ಯೋಗೇಶನ ಮೊದಲ ಚಿತ್ರ ದುನಿಯಾ. ಇದರಲ್ಲಿ ಈತ ಲೂಸ್ ಮಾದನ ಪತ್ರವನ್ನು ಅಭಿನಯಿಸಿದ್ದಾನೆ. ಆದರೆ ನಾವು ಇಲ್ಲಿ ಯೋಗೇಶ್ ಅವರ ಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬೆಂಗಳೂರುನಲ್ಲಿರುವ ಚಲನಚಿತ್ರೋದ್ಯಮದ ಇಂದಿನ ಯುವ ನಾಯಕ ನಟರಲ್ಲಿ ಒಬ್ಬ. ದುನಿಯಾ ಚಿತ್ರದ ಲೂಸ ಮಾದನ ಪಾತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಯೋಗಿ ಜನಿಸಿದ್ದು 1990 ಜುಲೈ 06ರಂದು. ನಿರ್ಮಾಪಕ ಟಿ.ಪಿ.ಸಿದ್ಧರಾಜು ಮತ್ತು ಅಂಬುಜಾ ದಂಪತಿಗಳ ಪುತ್ರನಾಗಿರುವ ಇವರು ನಟ ದುನಿಯಾ ವಿಜಯ್ ಸೋದರ ಸಂಬಂಧಿ ಕೂಡ. ದುನಿಯಾ ಚಿತ್ರದ ನಂತರ ನಂದ ಲವ್ಸ ನಂದಿತಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಂದನವನ ಪ್ರವೇಶಿಸಿದರು. ನಂತರ ರಾವಣ, ಪುಂಡ,ಯೋಗಿ ಮುಂತಾದ ಚಿತ್ರಗಳಲ್ಲಿ ನಟಿಸಿದರು.

2010 ರಲ್ಲಿ ತೆರೆಗೆ ಬಂದ ಎ.ಪಿ.ಅರ್ಜುನ್ ನಿರ್ದೇಶನದ ಅಂಬಾರಿ ಚಿತ್ರ ಭರ್ಜರಿ ಪ್ರದರ್ಶನ ಕಂಡು ಯೋಗಿಗೆ ಅತ್ತ್ಯುತ್ತಮ ನಾಯಕನಟ ರಾಜ್ಯಪ್ರಶಸ್ತಿ ತಂದುಕೊಟ್ಟಿತು. ಇತ್ತೀಚೆಗೆ ಸಿನಿಮಾಗಳಲ್ಲಿ ಅವರು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೈಯಲ್ಲಿರುವ ಕೆಲವು ಸಿನಿಮಾಗಳ ಜೊತೆಗೆ ಸ್ಟಾರ್‌ ಸುವರ್ಣ ವಾಹಿನಿಯ ಗಾನಾ ಬಜಾನಾ ರಿಯಾಲಿಟಿ ಶೋನಲ್ಲೂ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಂತೂ ಅವರು ಪಕ್ಕಾ ಫ್ಯಾಮಿಲಿಮ್ಯಾನ್‌. 2017ರಲ್ಲಿ ಸಾಹಿತ್ಯ ಹಾಗೂ ಯೋಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಶ್ರೀನಿಕಾ ಎಂಬ ಮುದ್ದು ಮಗಳಿದ್ದಾಳೆ.

ಶ್ರೀನಿಕಾ ಈಗಷ್ಟೇ ಮಾತನಾಡಲು ಕಲಿಯುತ್ತಿದ್ದು ತೊದಲು ಮಾತಿನ ವಿಡಿಯೋ ವೈರಲ್ ಆಗುತ್ತಿದೆ. ಮುದ್ದು ಮಗಳ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಾರೆ. ಅವರ ಪತ್ನಿ ಕೂಡ ಯೋಗಿಯ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲೂಸ್ ಮಾದ ಎಂದು ಪರಿಚಯವಾದ ನಟ ಯೋಗೇಶ್ ಮುದ್ದು ಮಗಳು ಶ್ರೀನಿಕಾ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಬಬ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾಳೆ. ತಾಯಿ ಸಾಹಿತ್ಯ ಹ್ಯಾಂಡಲ್ ಮಾಡುತ್ತಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡ ವಿಡಿಯೋಗಳು ಬಹಳ ವೈರಲ್ ಆಗುತ್ತಿವೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *