6 ತಿಂಗಳ ನಂತರ ಚಿರು ಸರ್ಜಾ ಅವರ ಶಿವಾರ್ಜುನ ಸಿನಿಮಾ ರಿಲೀಸ್ ಆಗುತ್ತಿದೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೊರೋನ ಹಾವಳಿಯಿಂದ 6 ತಿಂಗಳು ಸಿನಿಮಾ ಇಂಡಸ್ಟ್ರಿ ಕ್ಲೋಸ್ ಆಗಿತ್ತು, ಥಿಯೇಟರ್ ಬಂದಾಗಿತ್ತು. 6 ತಿಂಗಳ ನಂತರ ಥಿಯೇಟರ್ ಓಪನ್ ಆಗಿದ್ದು ಸಿನಿಮಾ ಪ್ರದರ್ಶನ ಕಂಡುಬರುತ್ತಿದೆ. ಲಾಕ್ ಡೌನ್ ಮೊದಲು ಚಿರು ಸರ್ಜಾ ಅವರ ಶಿವಾರ್ಜುನ ಸಿನಿಮಾ ರಿಲೀಸ್ ಆಗಿತ್ತು ಲಾಕ್ ಡೌನ್ ಕಾರಣದಿಂದ ಪ್ರದರ್ಶನ ಸ್ಥಗಿತಗೊಂಡಿತ್ತು. ಚಿರು ಸರ್ಜಾ ಅವರ ಅನುಪಸ್ಥಿತಿಯಲ್ಲಿ ಶಿವಾರ್ಜುನ ಸಿನಿಮಾ ಮೇನ್ ಥಿಯೇಟರ್ ನಲ್ಲಿ ರಿಲೀಸ್ ಆಗಿದೆ, ಥಿಯೇಟರ್ ನ್ನು ಸಿಂಗರಿಸಲಾಗಿದೆ.
ಶಿವಾರ್ಜುನ ಸಿನಿಮಾ ನಿರ್ಮಾಪಕರು, ಚಿರು ಅವರು ಒಂದೇ ಕುಟುಂಬದಂತೆ ಇದ್ದರು ಅವರ ಸಾವು ಅಗಾಧ ನೋವನ್ನು ತಂದುಕೊಟ್ಟಿದೆ. ಥಿಯೇಟರ್ ಸ್ವಚ್ಛವಾಗಿದ್ದು, ಸ್ಯಾನಿಟೈಸರ್ ಮಾಡಲಾಗಿದೆ. ಮಾಸ್ಕ್ ಕಡ್ಡಾಯವಾಗಿದೆ. ಥರ್ಮಲ್ ಸ್ಕ್ಯಾನಿಂಗ್ ಆಗುತ್ತದೆ, ಟೆಂಪರೇಚರ್ ಚೆಕ್ ಮಾಡಲಾಗುತ್ತದೆ. ಮತ್ತು ಮುಖ್ಯವಾಗಿ ಸೋಷಿಯಲ್ ಡಿಸ್ಟೆನ್ಸ್ ಇರುತ್ತದೆ ಒಟ್ಟಿನಲ್ಲಿ ಕೊರೋನ ಕ್ರಮಗಳನ್ನು ಅನುಸರಿಸಲಾಗಿದೆ. ಚಿರು ಸರ್ಜಾ ಅವರ ಕುಟುಂಬದವರು ಥಿಯೇಟರ್ ಗೆ ಬಂದಿದ್ದರು ಆದರೆ ಚಿರು ಸರ್ಜಾ ಅವರನ್ನು ನೆನೆದು ಅವರ ತಾಯಿ ಕಣ್ಣೀರಾಕುತ್ತಾರೆ. ನಿಜಕ್ಕೂ ಚಿರು ಅವರ ಅಚಾನಕ್ ನಿಧನ ಅಪಾರ ಪ್ರಮಾಣದ ನೋವನ್ನುಂಟುಮಾಡಿದೆ.