sudha belavadi:ಹಲವಾರು ವ್ಯಕ್ತಿಗಳು ತಮ್ಮ ನಟನೆಯ ಮೂಲಕ ನಾಟಕ, ಚಲನಚಿತ್ರ, ಧಾರಾವಾಹಿಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗೆಯೇ ಅವುಗಳಿಂದಲೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅವರಲ್ಲಿ ನಟಿ ಸುಧಾ ಬೆಳವಾಡಿ ಕೂಡ ಒಬ್ಬರು. ಅವರು ಯಾರೆಂದರೆ ‘ಮಗಳು ಜಾನಕಿ’ ಎಂಬ ಧಾರಾವಾಹಿಯಲ್ಲಿ ಶ್ಯಾಮಲಾ ಪಾತ್ರ ನಿರ್ವಹಿಸಿದರು. ಇಲ್ಲಿ ನಾವು ಸುಧಾ ಬೆಳವಾಡಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸುಧಾ ಬೆಳವಾಡಿ ಅವರು ರಂಗಭೂಮಿಯಲ್ಲಿ ನಟಿಸಿದ ಕಲಾವಿದೆ.ಇವರು ಹಲವಾರು ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಮುಂಗಾರು ಮಳೆ, ಮೊಗ್ಗಿನ ಮನಸ್ಸು ಇಂತಹ ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟಿಸಿ ಜೀವನವನ್ನು ಸಾಗಿಸಿದವರು ಇವರು.ಇಲ್ಲಿಯವರೆಗೆ ಸುಧಾ ಬೆಳವಾಡಿ ಅವರು 70 ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.ಹಾಗೆಯೇ ದೊಡ್ಡ ದೊಡ್ಡ ನಾಟಕಗಳಲ್ಲಿಯೂ ಕೂಡ ನಟಿಸಿದ್ದಾರೆ.ಮಂಥನ, ಭಾವಪರ್ವ, ಮಗಳು ಜಾನಕಿ,ಮನ್ಮಂಥರ ಮುಂತಾದ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.

ಸುಧಾ ಬೆಳವಾಡಿ ಅವರ ತಾಯಿ ಭಾರ್ಗವಿ ಮತ್ತು ಅವರ ತಂದೆ ನಂಜುಂಡಯ್ಯ. ಇವರ ಪತಿಯ ಹೆಸರು ಎಮ್.ಜಿ.ಸತ್ಯ.ಇವರಿಗೆ ಎರಡು ಮಕ್ಕಳು ಇದ್ದಾರೆ. ಮಗಳ ಹೆಸರು ಸಂಯುಕ್ತ.ಮಗನ ಹೆಸರು ಶಾಂತನು. ಇವರ ಮಗಳು ಸಂಯುಕ್ತ ಹೊರನಾಡ್ ಅವರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಸುಧಾ ಅವರು ನಾನಾರೀತಿಯ ಚಿತ್ರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇವರ ತಾಯಿ ಅವರು ಅಜ್ಜಿಯ ಪಾತ್ರದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.ಸುಧಾ ಬೆಳವಾಡಿ ಅವರಿಗೆ ಈಗ 55ವರ್ಷ.

ಇನ್ನು ಇವರ ಮಕ್ಕಳ ಬಗ್ಗೆ ಹೇಳುವುದಾದರೆ ಇವರ ಮಗ ಶಾಂತನು ಹೊರನಾಡ್ ಇವರು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.ಆದರೆ ಇವರ ಮಗಳು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಸುಧಾ ಬೆಳವಾಡಿ ಅವರು ದೊಡ್ಡ ಕಲಾವಿದೆ.ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೆಚ್ಚಾಗಿ ಧಾರಾವಾಹಿಗಳಲ್ಲಿ ಮತ್ತು ಚಲನಚಿತ್ರಗಳಲ್ಲೇ ತಮ್ಮ ಛಾಯೆ ಮೂಡಿಸಿದ್ದಾರೆ.ಇನ್ನು ಇತ್ತೀಚಿನ ದಿನಗಳಲ್ಲಿ ನಿಂತ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಇವರ ಹಾಸ್ಯದ ಪಾತ್ರ ತುಂಬಾ ಚೆನ್ನಾಗಿ ಮೂಡಿಬರುತ್ತಿತ್ತು.

Leave a Reply

Your email address will not be published. Required fields are marked *