ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ರಾಜ್ ಕುಟುಂಬದಲ್ಲಿ ಮೊಟ್ಟ ಮೊದಲ ಬಾರಿಗೆ ಮನೆ ಕಟ್ಟಿಸಿದ ಹೆಗ್ಗಳಿಕೆ. ಈಗಿರುವ ರಾಜ್ ಕುಟುಂಬದ ಮನೆಗಳೆಲ್ಲವು ಖರೀದಿ ಮಾಡಿದ ಮನೆಗಳು, ಇದಕ್ಕೆ ಭಿನ್ನವಾಗಿ ಶಿವರಾಜ್ ಕುಮಾರ್ ಬೆಂಗಳೂರಿನ ಹೆಬ್ಬಾಳ ಯಲಹಂಕ ರಸ್ತೆಯಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಮನೆಯನ್ನು ಕಟ್ಟಿಸಿಕೊಂಡಿದ್ದರು.

2007 ರಲ್ಲಿ ಶಿವರಾಜ್ ಕುಮಾರ್ ಅವರ ಮನೆ ಗೃಹ ಪ್ರವೇಶ ನಡೆಯಿತು.. ಈ ಗೃಹ ಪ್ರವೇಶದಲ್ಲಿ ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದವರೆಲ್ಲರು ಒಂದೆಡೆ ಸೇರಿದ ಸುಂದರ ಕ್ಷಣಗಳು. ಮನೆಯ ಎಲ್ಲ ಸಾಮಗ್ರಿಗಳನ್ನು ಖುದ್ದು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ದೆಹಲಿಯಿಂದ ತರಿಸಿದ್ದರು. 2007 ಅಕ್ಟೋಬರ್ 18 ರಂದು ಗೃಹ ಪ್ರವೇಶ ನೆರವೇರಿಸಿದ್ದರು.

ಶಿವಣ್ಣ, ರಾಘಣ್ಣ ಅಥವಾ ಅಪ್ಪು ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಇಡೀ ಕುಟುಂಬ ಒಟ್ಟಾಗಿ ಸೇರಿ ಸಂತೋಷ, ಸಂಭ್ರಮದಿಂದ ಭಾಗಿಯಾಗಿತ್ತಿದ್ದರು. ಗೃಹ ಪ್ರವೇಶದ ದಿನ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ದೇವರಿಗೆ ಪೂಜೆ ಸಲ್ಲಿಸುವಾಗ ರಾಘವೇಂದ್ರ ರಾಜ್ ಕುಮಾರ್ ಅವರು ಭಕ್ತಿ ಗೀತೆ ಹಾಡಿದ್ದರು.

ಇನ್ನು, ಅಪ್ಪು ಕೂಡ ಅವರ ಅಣ್ಣನ ಮನೆ ಗೃಹ ಪ್ರವೇಶ ಸಮಾರಂಭದಲ್ಲಿ ಸಂತೋಷದಿಂದ ಓಡಾಡಿಕೊಂಡಿದ್ದರು. ಕೊನೆಯಲ್ಲಿ ಪಾರ್ವತಮ್ಮ ಅವರು ತಮ್ಮ ಪುತ್ರರು ಹಾಗೂ ಪುತ್ರಿಯರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು ಸಂತೋಷದಿಂದ. Video Credit For Karnataka TV

Leave a Reply

Your email address will not be published. Required fields are marked *