ಹಲವಾರು ವಿಸ್ಮಯಕಾರಿ ದೇವಾಲಯಗಳು ಭಾರತದಲ್ಲಿದೆ ಅದರಲ್ಲಿ ರಾಜಸ್ಥಾನದ ಶಿವಲಿಂಗದ ಶಕ್ತಿ ಮತ್ತು ವಿಸ್ಮಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ವಿಶ್ವದ ನಾನಾ ಕಡೆಗಳಲ್ಲಿ ಶಿವನ ದೇವಾಲಯಗಳೂ ರಾರಾಜಿಸುತ್ತಿವೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಚರಿತ್ರೆಗಳನ್ನು ಒಳಗೊಂಡಿದೆ. ಹಾಗೆ ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವತೆಗಳನ್ನು ಆರಾಧಿಸಲಾಗುತ್ತದೆ ನಾವು ಶಿವನನ್ನು ನೀಲಕಂಠ, ಮಹಾದೇವ, ಬೋಲೆನಾಥ, ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ ಶೃದ್ದಾಪೂರ್ವಕವಾಗಿ ಪೂಜಿಸಲಾಗುತ್ತದೆ. ಕರುಣಾಮಯಿ ಕರುಣಾಕರನನ್ನು ಲಿಂಗ ರೂಪದಲ್ಲಿ ಆರಾಧಿಸುವ ಸಹಸ್ರಾರು ಭಕ್ತರು ಭಾರತದಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ದೇಶಗಳಲ್ಲಿ ಇದ್ದಾರೆ. ಭಾರತದಲ್ಲಿರುವ ಪ್ರತಿಯೊಂದು ದೇವಾಲಯಗಳೂ ವಿಸ್ಮಯಕಾರಿಯಾಗಿದೆ. ವಿಜ್ಞಾನಿಗಳಿಗೆ ತಲೆನೋವು ಮಾಡುವ ಅದೆಷ್ಟೊ ದೇವಾಲಯಗಳು ಭಾರತದಲ್ಲಿದೆ. ಇಂತಹ ಒಂದು ವಿಸ್ಮಯಕಾರಿ ಶಿವಲಿಂಗ ನಮ್ಮ ಭಾರತದಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಶಿವಲಿಂಗ ದಿನಕ್ಕೆ 3ಬಾರಿ ಬಣ್ಣ ಬದಲಾಯಿಸುತ್ತದೆ. ಸಾವಿರಾರು ವರ್ಷಗಳ ಹಳೆಯದಾದ ರಾಜಸ್ಥಾನದ ದೋಲಪುರದ ದೇವಾಲಯವನ್ನು ನಿಗೂಢ ದೇವಸ್ಥಾನವೆಂದು ನಂಬಲಾಗಿದೆ. ಈ ದೇವಾಲಯವನ್ನು ಅಚಲೇಶ್ವರ ದೇವಾಲಯವೆಂದು ಕರೆಯುತ್ತಾರೆ. ಈ ದೇವಾಲಯ ಕಾಡಿನ ಮಧ್ಯೆ ಇರುವುದರಿಂದ ಅತಿ ಕಡಿಮೆ ಜನರು ದರ್ಶನ ಪಡೆಯಲು ಬರುತ್ತಿದ್ದರು. ಆದರೆ ಇತ್ತೀಚೆಗೆ ಈ ದೇವಾಲಯದ ಮಹಿಮೆ ಬಗ್ಗೆ ತಿಳಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಬಣ್ಣ ಬದಲಾಯಿಸುವ ಈ ಶಿವಲಿಂಗದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಇಂದಿಗೂ ಇದರ ರಹಸ್ಯ ತಿಳಿಯಲಿಲ್ಲ. ಶಿವಲಿಂಗ ಬೆಳಿಗ್ಗೆ ಕೆಂಪು ಬಣ್ಣವಾಗಿದ್ದು, ಮಧ್ಯಾಹ್ನ ಕೇಸರಿ ಬಣ್ಣಕ್ಕೆ ತಿರುಗುತ್ತದೆ, ಸಂಜೆ ವೇಳೆಗೆ ಕಪ್ಪಾಗುತ್ತದೆ. ಈ ದೇವಾಲಯವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಶಿವನ ಕಾಲು ಬೆರಳಿನ ಗುರುತಿನಿಂದ ಈ ದೇವಾಲಯವನ್ನು ಕಟ್ಟಲಾಗಿದೆ. ನೈಸರ್ಗಿಕ ಶಿವಲಿಂಗ ಇದಾಗಿದೆ. ಇಲ್ಲಿ ಶಿವನ ಕಾಲು ಬೆರಳಿಗೆ ಪೂಜೆ ಮಾಡಲಾಗುತ್ತದೆ ಇದು ವಿಶೇಷವಾಗಿದೆ. ಸಂಪೂರ್ಣ ಹಿತ್ತಾಳೆಯಿಂದ ಕೂಡಿದ ನಂದಿ ವಿಗ್ರಹವನ್ನು ಈ ದೇವಾಲಯ ಹೋಂದಿದೆ. ಭೂಮಿಯ ಕೇಂದ್ರ ದೇವಾಲಯವು 2,500 ವರ್ಷಗಳು ಹಳೆಯದಾಗಿದ್ದು ಶಿವನ ಕಾಲುಬೆರಳು ದೇವರು ಪ್ರಪಂಚಕ್ಕೆ ಅಡಿಯಿಟ್ಟಂತಾಗಿದೆ. ಈ ಶಿವಲಿಂಗದ ಮೂಲವನ್ನು ಹುಡುಕುವಲ್ಲಿ ವಿಫಲರಾದರು. ಭಕ್ತರು ಏನೆ ಕೇಳಿಕೊಂಡರು ನೆರವೇರುತ್ತದೆ ಅದರಲ್ಲೂ ಕಂಕಣ ಭಾಗ್ಯ ಬಯಸುವವರ ಈಡೇರಿಕೆಗಳು ಬೇಗನೆ ಈಡೇರುತ್ತದೆ ಎಂದು ಪೂಜಾರಿಗಳು ಹೇಳುತ್ತಾರೆ. ಈ ಪ್ರದೇಶ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಗಡಿಯಲ್ಲಿದೆ ಛಂಬಲ್ ಕಣಿವೆಯ ನಿರ್ಜನ ಪ್ರದೇಶವಾಗಿದ್ದು ಇಲ್ಲಿಗೆ ತಲುಪುವುದು ಕಷ್ಟವಾಗಿದೆ. ಅಲ್ಲದೆ ಸಾವಿರಾರು ಅಡಿ ಅಗೆದರು ಶಿವಲಿಂಗದ ಅಂತ್ಯ ಎಲ್ಲಾಗುತ್ತದೆ ಎಂದು ತಿಳಿದಿಲ್ಲ.

Leave a Reply

Your email address will not be published. Required fields are marked *