ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಗಣೇಶ್ ಅವರು ಯಾವುದೆ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಕಷ್ಟ ಪಟ್ಟು ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಮ್ಮ ಪ್ರೀತಿಯ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಟಾಪ್ ಸ್ಟಾರ್ ಗಳ ಸಾಲಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಬ್ಬರು. ಇವರು ಜುಲೈ 2,1980 ರಂದು ಬೆಂಗಳೂರಿನ ನೆಲಮಂಗಲದ ಅಡಕಮಾರನ ಹಳ್ಳಿಯಲ್ಲಿ ಜನಿಸಿದರು. ಇವರಿಗೆ ಇಬ್ಬರು ಸಹೋದರರಿದ್ದಾರೆ.

ಗಣೇಶ್ ಅವರು ಇಲೆಕ್ಟ್ರಾನಿಕ್ ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಇವರ ತಂದೆ ಕಿಶನ್ ತಾಯಿ ಸುಲೋಚನಾ. ಗಣೇಶ್ ಅವರು ಶಿಲ್ಪಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಗನ ಹೆಸರು ನಿಹಾನ್ ಮಗಳ ಹೆಸರು ಚರಿತ್ರಾ. ಇವರು ಪ್ರಸ್ತುತ ವಿಜಯನಗರದಲ್ಲಿ ನೆಲೆಸಿದ್ದಾರೆ.

ಗಣೇಶ್ ಅವರು ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಓದಿಗಿಂತ ಸಿನಿಮಾಗಳಲ್ಲಿ ಆಸಕ್ತಿ ಇತ್ತು ಹೀಗಾಗಿ ಅವರು ನಟನಾ ಶಾಲೆಗೆ ಸೇರಿಕೊಂಡರು, ನಟನೆಯಲ್ಲಿ ಪದವಿ ಪಡೆದರು. ಮೊದಲು ಅವರು ಕಿರುತೆರೆಯಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು ನಂತರ ಉದಯ ಚಾನೆಲ್ ನಲ್ಲಿ ಕಾಮೆಡಿ ಟೈಮ್ ಎಂಬ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಸೇರಿಕೊಂಡರು.

ನಿರೂಪಣೆ ಮಾಡುತ್ತಿದ್ದ ಗಣೇಶ್ ಅವರನ್ನು ಎಂ.ಡಿ ಶ್ರೀಧರ್ ಚೆಲ್ಲಾಟ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಅವಕಾಶ ನೀಡಿದರು. ಗಣೇಶ್ ಅವರು 2006 ರಲ್ಲಿ ಮುಂಗಾರು ಮಳೆ ಎಂಬ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದಲ್ಲಿ ಪೂಜಾ ಗಾಂಧಿ ನಾಯಕಿಯಾಗಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಚಿತ್ರ ಮುಂಗಾರು ಮಳೆ.

ನಂತರ ಗಾಳಿಪಟ, ಹುಡುಗಾಟ, ಚೆಲುವಿನ ಚಿತ್ತಾರ, ಬೊಂಬಾಟ್, ಶೈಲೂ, ಮುಂಜಾನೆ, ಆರೆಂಜ್ ಮೊದಲಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಣೇಶ್ ಅವರ ಸಿನಿಮಾದಲ್ಲಿ ಕಾಮೆಡಿ, ಫೈಟ್, ನೃತ್ಯವನ್ನು ಕಾಣಬಹುದು.

ಅವರು ಸಿನಿಮಾ ರಂಗಕ್ಕೆ ಬರುವ ಮೊದಲು ಬಹಳ ಕಷ್ಟವನ್ನು ನೋಡಿದ್ದಾರೆ. ತಮ್ಮ ಸ್ವಪ್ರಯತ್ನದಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಅವರು ಒನ್ ಮಿನಿಟ್ ಎಂಬ ಗೇಮ್ ಶೋವನ್ನು ಕೂಡ ನಡೆಸಿಕೊಡುತ್ತಿದ್ದರು. ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ನಿರ್ಮಾಪಕರಾಗಿ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಗಣೇಶ್ ಅವರು ಇನ್ನೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!