ಈಗಿನ ಕಾಲದಲ್ಲಿ ಅದೆಷ್ಟೋ ಆಧುನಿಕ ತಂತ್ರಜ್ಞಾನ ಇದ್ದರೂ ಕೆಲವೊಮ್ಮ ಕಳ್ಳರನ್ನ ಹಿಡಿಯುವುದು ಬಹಳ ಕಷ್ಟ, ಇನ್ನೂ ಕೆಲವೊಮ್ಮೆ ಕಳ್ಳರನ್ನು ಹಿಡಿಯುವುದು ನೀರು ಕುಡಿದಷ್ಟೇ ಸುಲಭ ಕೂಡಾ. ಕಳ್ಳ ಎಂದಿಗೂ ತಾನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಆದರೂ ತಾನು ಕಳ್ಳತನ ಮಾಡಿದ್ದಕ್ಕೆ ಏನಾದರೂ ಒಂದು ಕುರುಹು ಬಿಟ್ಟು ಹೋಗಿರುತ್ತಾನೆ ಹಾಗೆ ಸಿಕ್ಕಿಬೀಳುತ್ತಾನೆ ಎಂದು ಹೇಳಬಹುದು.

ಅದೇ ರೀತಿ ಕಾಮುಕ ಕಳ್ಳನನ್ನ ಹಿಡಿಯಲು ಇಲ್ಲೊಬ್ಬರು ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ ಕೆಲಸವನ್ನು ನೋಡಿ ಇಡೀ ದೇಶವೇ ಸೆಲ್ಯೂಟ್ ಹೊಡೆದಿದೆ. ಹಾಗಿದ್ದರೆ ಆ ಕಾಮುಕ ಕಳ್ಳನನ್ನು ಹಿಡಿಯಲು ಆ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ್ದಾದರೂ ಏನೂ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆಧುನಿಕ ಕಾಲದಲ್ಲಿ ಕಳ್ಳರು ಸಹ ತಮ್ಮ ಕೆಲಸ ಸುಲಭವಾಗಲೀ ಎಂದು ಹೊಸ ಹೊಸ ತಂತ್ರಜ್ಞಾನವನ್ನ ಕಂಡುಹಿಡಿದಿರುವ ಕಾರಣ ಪೊಲೀಸರಿಗೆ ತಲೆ ನೋವಾಗಿ ಕಾಡುತ್ತಲೇ ಇರುತ್ತಾರೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇನ್ನು ಪೊಲೀಸರು ಕೂಡ ಬಹಳ ಚನ್ನಾಗಿ ಕಳ್ಳರ ಹಾದಿಯಲ್ಲೇ ಹೋಗಿ ಕಳ್ಳರನ್ನ ಹಿಡಿಯುತ್ತಿದ್ದಾರೆ. ಇನ್ನು ಇಲ್ಲೊಬ್ಬ ಕಾಮುಕನನ್ನ ಹಿಡಿಯಲು ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ ಕೆಲಸವನ್ನ ಕೇಳಿದರೆ ನೀವು ಒಮ್ಮೆ ಅಚ್ಚರಿ ಪಡುವುದು ಖಂಡಿತ.

ಕಳ್ಳನನ್ನ ಹಿಡಿಯಲು ಈ ಪೊಲೀಸ್ ದೊಡ್ಡ ಉಪಾಯವನ್ನ ಮಾಡಿದ್ದು ಇದನ್ನ ನೋಡಿ ಇಡೀ ದೇಶವೇ ಈ ಮಹಿಳಾ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್ ಹೊಡೆಯುತ್ತಿದೆ. ಹಾಗಾದರೆ ಈ ಕಾಮುಕ ಕಳ್ಳನನ್ನ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ್ದೇನು? ಎನ್ನುವುದನ್ನು ನೋಡೋಣ. ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರಿಗೆ ಮತ್ತು ಅಪ್ರಾಪ್ತ ಹುಡುಗಿಯರಿಗೆ ಗಾಳ ಹಾಕುತ್ತಿದ್ದ ಕಾಮುಕನನ್ನ ಮಹಿಳಾ ಸಬ್​ಇನ್ಸ್​ಪೆಕ್ಟರ್ ಒಬ್ಬರು ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೇ ಬಂಧಿಸಿದ್ದಾರೆ. ದೆಹಲಿಯ ಗ್ಲಾಸ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಫೇಸ್​ಬುಕ್​ನಲ್ಲಿ ವಿವಿಧ ಹೆಸರಿನಲ್ಲಿ ಖಾತೆಗಳನ್ನು ತೆರೆದು ಯುವತಿಯರು ಮತ್ತು ಅಪ್ರಾಪ್ತೆಯರಿಗಾಗಿ ಬಲೆ ಬೀಸುತ್ತಿದ್ದ.

ಈತ ತನ್ನ ಬಲೆಗೆ ಬಿದ್ದ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಂಡು ಅವರಿಗೆ ಮೋಸ ಮಾಡಿ ಅವರಿಂದ ಕಣ್ಮರೆಯಾಗುತ್ತಿದ್ದ. ಇನ್ನು ಇದೇ ರೀತಿ 16 ವರ್ಷದ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ ಆ ಯುವಕ ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಪರಾರಿ ಕೂಡಾ ಆಗಿದ್ದ.

ಇನ್ನು ಗರ್ಭಿಣಿ ಆಗಿದ್ದ ಆ ಹುಡುಗಿ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಹೋದಾಗ ವೈದ್ಯರು ಪೊಲೀಸರಿಗೆ ಇದರ ಕುರಿತಾಗಿ ಮಾಹಿತಿಯನ್ನ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಆ ಹುಡುಗಿಯನ್ನ ವಿಚಾರಣೆ ಮಾಡಿದಾಗ ಆಕೆ ವಿಷಯ ಹೇಳಲು ಹಿಂಜರಿಯುತ್ತಾಳೆ ಮತ್ತು ಈ ಸಮಯದಲ್ಲಿ ಮಹಿಳಾ ಎಸ್​ಐ ಪ್ರಿಯಾಂಕಾ ಶೈನಿ ಅವರು ಮುಂದೆ ಬಂದು ಏನಾಯಿತು ಎಂದು ಆತ್ಮೀಯವಾಗಿ ಕೇಳಿದಾಗ ಅಪ್ರಾಪ್ತೆ ನಡೆದಿದ್ದನ್ನು ವಿವರಿಸಿದಳು. ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದ ಆತ ಈ ಹುಡುಗಿಯನ್ನ ಲೈಂ ಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ್ದ ಅನ್ನುವುದು ಪೊಲೀಸರಿಗೆ ತಿಳಿದಿದೆ.

ಇದಾದ ಬಳಿಕ ಎಸ್​ಐ ಪ್ರಿಯಾಂಕಾ ಸುಮಾರು 100 ಫೇಸ್​ಬುಕ್​ ಪ್ರೋಫೈಲ್​ ಫೋಟೋಗಳನ್ನು ಅಪ್ರಾಪ್ತೆಗೆ ತೋರಿಸಿದರು. ಅದರಲ್ಲಿ ಆ ಹುಡುಗಿಗೆ ಮೋಸ ಮಾಡಿದ ಆರೋಪಿಯು ಸಹ ಇದ್ದ. ಆ ಅಪ್ರಾಪ್ತೆ ಬಾಲಕಿ ಆತನ ಬಗ್ಗೆ ತಿಳಿಸಿದ ಕೂಡಲೇ ಉಪಾಯವೊಂದನ್ನು ಮಾಡಿದ ಎಸ್​ಐ ಪ್ರಿಯಾಂಕಾ ನಕಲಿ ಫೇಸ್​ಬುಕ್​ ಖಾತೆಯನ್ನು ತೆರೆದು ಯುವತಿಯೊಬ್ಬಳ ಫೋಟೋ ಹಾಕಿ ಆರೋಪಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸುತ್ತಾರೆ.

ಇನ್ನು ರಿಕ್ವೆಸ್ಟ್​ ಸ್ವೀಕರಿಸಿದ ಆತ ಚಾಟ್ ಮಾಡಲು ಆರಂಭಿಸುತ್ತಾನೆ. ಆದರೆ ಆತನನ್ನು ಹಿಡಿಯಲು ನಕಲಿ ಫೇಸ್​ಬುಕ್​ ಖಾತೆಯನ್ನು ಹೊಂದಿದ ಎಸ್​ಐ ಪ್ರಿಯಾಂಕಾ ಅವರಿಗೆ ತನ್ನ ಫೋನ್ ನಂಬರ್ ಕೊಡಲು ನಿರಾಕರಿಸುತ್ತಾನೆ. ವೈಯಕ್ತಿಕವಾಗಿ ತನ್ನನ್ನು ಭೇಟಿ ಆಗಬೇಕಾದರೆ ನನ್ನೊಂದಿಗೆ ನೀವು ಎಲ್ಲದರ ಬಗ್ಗೆ ಮಾತನಾಡಬೇಕು ಎಂದು ಷರತ್ತು ಹಾಕುತ್ತಾನೆ ಆ ಆರೋಪಿ. ಅದಕ್ಕೆ ಒಪ್ಪಿಗೆ ನೀಡಿದ ಬಳಿಕ ಆರೋಪಿ ತನ್ನ ಫೋನ್​ ನಂಬರ್​ ಕೊಡುತ್ತಾನೆ.

ಜುಲೈ 31ರಂದು ಭೇಟಿಯಾಗೋಣ ಎಂದು ಪ್ರಿಯಾಂಕಾ ಶೈನಿ ಹೇಳುತ್ತಾರೆ. ಅದರಂತೆ ಆರೋಪಿಯು ದೆಹಲಿಯ ದಶರಥಪುರಂ ರೈಲು ನಿಲ್ದಾಣಕ್ಕೆ ಸಂಜೆ 7-30 ಕ್ಕೆ ಆಗಮಿಸುತ್ತಾನೆ ಮತ್ತು ಪೊಲೀಸರು ಆತನಿಗೆ ಹೊಂಚು ಹಾಕಿ ನಿಂತಿದ್ದರು. ಇನ್ನು ತುಂಬಾ ಸ್ಮಾರ್ಟ್ ಆಗಿದ್ದ ಆತ ರೈಲು ನಿಲ್ದಾಣದಿಂದ ಎಸ್ಕೇಪ್​ ಆದ ಆತ ತಕ್ಷಣ ಮಹಾವೀರ್​ ಎನ್​​ಕ್ಲೇವ್​ ಬಳಿ ಬರುವಂತೆ ಹೇಳುತ್ತಾನೆ. ಬಳಿಕ ಅಲ್ಲಿಗೆ ಹೋದ ಪ್ರಿಯಾಂಕಾ ಅವರು ಆರೋಪಿಯನ್ನು ಬಂಧಿಸುತ್ತಾರೆ.

ನಂತರ ವಿಚಾರಣೆಯ ವೇಳೆ ಆರೋಪಿ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ಕಳೆದ 15 ತಿಂಗಳಲ್ಲಿ 6 ಯುವತಿಯರಿಗೆ ಮೋಸ ಮಾಡಿರುವುದಾಗಿ ತಿಳಿಸಿದ್ದಾನೆ. ದೈಹಿಕ ಸಂಪರ್ಕ ಬೆಳೆಸುತ್ತಿದ್ದಂತೆ ಅವರಿಂದ ದೂರವಾಗುತ್ತಿದ್ದೆ ಎಂದು ಹೇಳಿದ್ದಾನೆ. ಈ ರೀತಿಯಾಗಿ ಕಾಮುಕ ಕಳ್ಳನಿಗೆ ಆತನ ದಾರಿಯಲ್ಲೇ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ ಎಸ್ ಐ ಪ್ರಿಯಾಂಕ ಅವರು. ಪ್ರಿಯಾಂಕ ಅವರ ಈ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *